Kore Guruvandane: ಜ್ಞಾನಯೋಗಾಶ್ರಮದಲ್ಲಿ ಬಿ. ಎಂ. ಕೋರ ಪ್ರತಿಷ್ಠಾನದಿಂದ ಗುರುವಂದನೆ, ಮಣ್ಣು ಉಳಿಸಿ ಕಾರ್ಯಕ್ರಮ

ವಿಜಯಪುರ: ನಗರದ ಜ್ಞಾನಯೋಗಾಶ್ರಮದಲ್ಲಿ ಲೋಣಿ ಬಿ. ಕೆ. ಗ್ರಾಮದ ಬಿ. ಎಂ. ಕೋರೆ ಪ್ರತಿಷ್ಠಾನದ ವತಿಯಿಂದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸಾನಿಧ್ಯದಲ್ಲಿ ಗುರುವಂದನೆ ಮತ್ತು ಮಣ್ಣು ಉಳಿಸಿ ಅಭಿಯಾನ ಕಾರ್ಯಕ್ರಮ ನಡೆಯಿತು. 

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಮಹಾಂತೇಶ ಬಿರಾದಾರ, ಮಣ್ಣು ಉಳಿಸಲು ನಾಗರೀಕ ಸಮಾಜ ಕೈಜೋಡಿಸಬೇಕು ಎಂದು ಹೇಳಿದರು.

ವಿಜಯಪುರ ಜಿಲ್ಲೆಯ ನೀರಾವರಿ ಯೋಜನೆಗಳ ಕುರಿತು ಸವಿವರ ಮಾಹಿತಿ ನೀಡಿದ ಅವರು, ಮಣ್ಣು ಉಳಿದರೆ ಜೀವ ಸಂಕುಲ ಉಳಿಯಲು ಸಾಧ್ಯ.  ರೇಲ್ವೆ ಇಲಾಖೆಯ ಮುತ್ತಣ ಬಿರಾದಾರ ಅವರು ಜ್ಞಾನ ಯೋಗಾಶ್ರಮದಿಂದ ದೆಹಲಿಯವರೆಗೆ ಸೈಕಲ್ ಮೂಲಕ ಜಾಥಾ ಮಾಡುತ್ತ ಪ್ರತಿ ದಿನ ರೈತರಿಗೆ ಮಣ್ಣಿನ ಮಹತ್ವ ಹೇಳುತ್ತ ಸೈಕಲ್‌ ಜಾಥಾ ಹಮ್ಮಿಕೊಂಡಿರುವದು ಬಹಳ ಹೆಮ್ಮೆಯ ವಿಷಯ.  ಮಣ್ಣು ಉಳಿದರೆ ಮಾತ್ರ ನಾವು ಮುಂದಿನ ದಿನಗಳಲ್ಲಿ ಬದುಕಲು ಸಾಧ್ಯ, ಎಲ್ಲರೂ ಮಣ್ಣು ಉಳಿಸಲು ಸಾವಯವ ಕೃಷಿ ಮಾಡುವತ್ತ ನಾಗರೀಕ ಸಮಾಜ ಗಮನ ಹರಿಸಬೇಕೆಂದು ಮನವಿ ಡಾ. ಮಹಾಂತೇಶ ಬಿರಾದಾರ ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ, ಗುರುವಿನ ಸೇವೆ ಸ್ಮರಿಸಿ ಗುರುಗಳನ್ನು ಗೌರವಿಸುವದು ಶ್ರೇಷ್ಠ ಕೆಲಸ.  ಈ ನಿಟ್ಟಿನಲ್ಲಿ ಬಿ. ಎಂ. ಕೋರೆ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಬಿ. ಎಂ. ಕೋರೆ ಪ್ರತಿಷ್ಠಾನದ ವತಿಯಿಂದ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನ ಕಾರ್ಯಕ್ರಮದಲ್ಲಿ ಡಾ. ಮಹಾಂತೇಶ ಬಿರಾದಾರ ಮಾತನಾಡಿದರು

ಇಂದು ಶ್ರೀ ಸಿದ್ಧೇಶ್ವರ ಪ್ರೌಢ ಶಾಲೆ ಲೋಣಿ ಬಿ. ಕೆ. ಗ್ರಾಮದ ಶಿಕ್ಷಕರಾದ ಬಿ. ಎಸ್. ಹಿಪ್ಪರಗಿ ಮುಖ್ಯ ಗುರುಗಳು, ವೈ. ಜಿ. ಗುಡ್ಡದ ಶಿಕ್ಷಕರು, ಶಿವಶಂಕರ ಬಗಲಿ ಮುಖ್ಯ ಗುರುಗಳು ಹಾಗೂ ಸುಭಾಸ್ ಕಟಗೇರಿ ಅವರನ್ನು ಸನ್ಮಾನಿಸುತ್ತ  50 ವರ್ಷಗಳ ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಸುಧೀರ್ಘ ಸೇವೆ ಸಲ್ಲಿಸಿ ಭೀಮಾ ತೀರದ ಗಡಿಭಾಗದಲ್ಲಿ ಶಿಕ್ಷಣದ ಕಂಪು ಹಬ್ಬಿಸಿದ ಇಂತಹ ಗುರುಗಳನ್ನು ಸನ್ಮಾನಿಸುವದು ಸಂತೋಷದ ವಿಷಯ, ಅಲ್ಲದೆ ಮಣ್ಣು ಉಳಿಸಿ ಅಭಿಯಾನದ ಸಂಚಾಲಕ ಮುತ್ತಣ ಬಿರಾದಾರ ಸೈಕಲ್ ಮೂಲಕ ಜ್ಞಾನ ಯೋಗಾಶ್ರಮದಿಂದ ದೆಹಲಿ ವರೆಗೆ ಜಾಥಾ ಮಾಡುತ್ತ ಮಣ್ಣಿನ ಬಗ್ಗೆ ತಿಳುವಳಿಕೆ ಪ್ತತಿ ದಿನ 40 ಕಿ. ಮೀ. ಸಾಗುವದು ಒಂದು ಸಹಾಸದ ಕೆಲಸ . ಚಿಕ್ಕ ವಯಸ್ಸಿನಲ್ಲಿ ದೊಡ್ಡ ಅಭಿಯಾನ ಹಿಮ್ಮಿಕೊಂಡಿರುವದು ನಮ್ಮ ಜಿಲ್ಲೆಗೆ ಅಭಿಮಾನದ ಸಂಗತಿ ಎಂದು ಹೇಳಿದರು.

ಸನ್ಮಾನಿತ ಶಿಕ್ಷಕರ ಪರವಾಗಿ ಮಾತನಾಡಿದ ಬಸವರಾಜ ಹಿಪ್ಪರಗಿ, ನಿವೃತ್ತಿ ನಂತರ ನಮ್ಮ ಶಿಷ್ಯ ಬಳಗ ಮತ್ತು ಬಿ. ಎಂ. ಕೋರೆ ಪ್ರತಿಷ್ಠಾನ ಸನ್ಮಾನಿಸುತ್ತಿರುವದು ಸಂತಸ ತಂದಿದೆ.  ಎಲ್ಲ ಶಿಕ್ಷಕ ಬಳಗಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ.  ನಮಗೆ ನೀಡಿರುವ ಈ ಗೌರವದಿಂದ ಮತ್ತಷ್ಟು ಹುರುಪು ಸಿಕ್ಕಿದೆ ಎಂದು ಹೇಳಿದರು.

ವಿದ್ಯಾರ್ಥಿ ಸಾಧಕರ ಪರವಾಗಿ ಡಾ ಸಂಗಮೇಶ ಮೇತ್ರಿ ಮಾತನಾಡಿ, ನಾವು ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಲು ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜೀ ಅವರ ಪ್ರೇರಣೆ ದೊಡ್ಡದಿದೆ,  ಯಾವದೇ ಅಧಿಕಾರಿಗಳು ಅಧಿಕಾರವನ್ನು ತಲೆಗೆ ಹಚ್ಚಿಕೊಳ್ಳದೇ ಕೆಪಲಸ ಮಾಡಬೇಕು.  ಇಲ್ಲಿದಿದ್ದರೆ ನಾವು ಸಮಾಜಮಖಿಯಾಗಿ ಕೆಲಸ ಮಾಡಲು ಆಗುವುದಿಲ್ಲ ಎಂದು ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು 15 ವರ್ಷಗಳ ಹಿಂದೆ ಕಿವಿಮಾತು ಹೇಳಿದ್ದರು.  ಅವರ ಹಿತನುಡಿಯನ್ನು ಪಾಲಿಸಿದ್ದರಿಂದ ನಾವು ಸಮಾಜ ಮುಖಿಯಾಗಿ ಕೆಲಸ ಮಾಡಲು ಸಾಧ್ಯವಾಗಿದೆ.  ನಾವು ಎಲ್ಲರೂ ಬಿ. ಎಂ. ಕೋರೆ ಪ್ರತಿಷ್ಠಾನಕ್ಕೆ ಋಣಿಯಾಗಿದ್ದೇವೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಬಿ. ಎಂ. ಕೋರೆ  ಶ್ರೀ ಸಿದ್ಧೇಶ್ವರ ಶಿಕ್ಷಣ ಸಂಸ್ಥೆ ವತಿಯಿಂದ ಗಯ್ಣ ವ್ಯಾಪಾರಸ್ಥರಾದ ಸಿದ್ಧರಾಮ ಕಾಪಸೆ, ಪಿಯು ಇಲಾಖೆಯ ಶಾಂತಪ್ಪ ಬಗಲಿ, ಸಿಪಿಐ ರಮೇಶ ಅವಜಿ, ಚಿಕ್ಕಮಕ್ಕಳ ತಜ್ಞ ಡಾ. ಮಲ್ಲಿಕಾರ್ಜುನ ಉಟಗಿ, ಮಡಿವಾಳಪ್ಪ ಮೊರಟಗಿ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಬಸಣ್ಣ ಕೋರೆ, ಶಶಿಧರ ಕಲ್ಯಾಣಶೆಟ್ಟಿ, ಸಿದ್ಧಣ ಸಾಹುಕಾರ್ ಬಿರಾದಾರ, ಸುರೇಶ ಗೊಣಸಗಿ, ಎಂ ಆರ್ ಪಾಟೀಲ್ ಬಳ್ಳೊಳ್ಳಿ ದಶರಥ ತಾವಸೆ, ಮಲ್ಲಿಕಾರ್ಜುನ ಆಕಳವಾಡಿ, ಎಂ ಬಿ ತೇಲಿ, ವಸಂತ ಶಾವರಿ, ಸಾಹೇಬಗೌಡ ಬಿರಾದಾರ, ಡಾ. ಗಂಗಾಧರ ಸಂಬಣ್ಣಿ, ಹಣಮಂತ ಚಿಂಚಲಿ, ಜಗದೀಶ ಜತ್ತಿ, ಸುಭಾಸ ಕರಜಗಿ, ಗಜಾನಂದ ಮಂದಾಲಿ, ದೊಡ್ಡನಗೌಡ ಬಿರಾದಾರ, ಸಿ ಎಂ ಕೋರೆ, ಗುರುಪಾದ ಮೇತ್ರಿ ಮುಂತಾದವರು ಉಪಸ್ಥಿತರಿದ್ದರು.

ಬಸವರಾಜ ಕುಂಬಾರ ಪ್ರಾರ್ಥಿಸಿದರು.  ಸತ್ಯಣ್ಣ ಹಡಪದ ಸ್ವಾಗತಿಸಿದರು.  ಪ್ರತಿಷ್ಠಾನದ ಕಾರ್ಯದರ್ಶಿ ಗುರುಶಾಂತ ಕಾಪಸೆ ನಿರೂಪಿಸಿದರು.

Leave a Reply

ಹೊಸ ಪೋಸ್ಟ್‌