ವಿಜಯಪುರ: ಭಾರತಿಯ ಪರಂಪರೆಯಲ್ಲಿ ವಿಜಯದಶಮಿ ಹಬ್ಬಕ್ಕೆ ವಿಶೇಷವಾದ ಸ್ಥಾನವಿದೆ. ಈ ಹಬ್ಬ ಅನ್ಯಾಯದ ವಿರುದ್ಧ ಜಯಗಳಿಸಿದ ವಿಜಯದ ಸಂಕೇತವಾಗಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ ಹೇಳಿದ್ದಾರೆ.
ವಿಜಯಪುರ ನಗರದಲ್ಲಿರುವ ಸ್ವಗೃಹದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಬನ್ನಿ ವಿನಿಮಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಜಯದಶಮಿ ಹಬ್ಬ ಭಾರತಾದ್ಯಂತ ಅತ್ಯಂತ ಸಡಗರದಿಂದ ಆಚರಿಸಲಾಗುತ್ತದೆ. ವಿಜಯದ ಸಂಕೇತವಾಗಿಯೂ ಇದನ್ನು ಆಚರಿಸಲಾಗುತ್ತದೆ. ಅದರಲ್ಲೂ ಬನ್ನಿ ವಿನಿಮಯದಿಂದ ಪರಸ್ಪರ ಸ್ನೇಹ, ಪ್ರೀತಿ, ವಾತ್ಸಲ್ಯದಿಂದ ಬದುಕು ಸಾಗಿಸುವ ಭರವಸೆ ಮೂಡುತ್ತದೆ ಎಂದು ಅವರು ಹೇಳಿದರು.
ಆದಿಶಕ್ತಿ ಜಾಮುಂಡೆಶ್ವರಿ ನಾಡಿನ ಎಲ್ಲರಿಗೂ ಸುಖ ಸಂಪತ್ತು, ಆರೋಗ್ಯವನ್ನು ಕರುಣಿಸಲಿ. ಎಲ್ಲ ಕಷ್ಟಗಳು ದೂರವಾಗಿ ನಾಡಿನಲ್ಲಿ ಶಾಂತಿ ನೆಲೆಸಲಿ ಎಂದು ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು ನಾನು ನೀವು ಬಂಗಾರವಾಗಿರೋಣ ಎಂದು ಉಮೇಶ ಕಾರಜೋಳ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಜಿ. ಪಂ. ಮಾಜಿ ಸದಸ್ಯ ಭೀಮಾಶಂಕರ ಬಿರಾದಾರ, ನಾಗುಸಾಹುಕಾರ ಬಿರಾದಾರ, ಲಕ್ಷ್ಮಣ ಬಿರಾದಾರ, ನರಸಪ್ಪ ಪೂಜಾರಿ, ವಿರೇಶ ಗೊಬ್ಬೂರ, ಶಿವಾನಂದ ಖವೇಖರ, ಸಾಗರ ಗಾಯಕವಾಡ, ರಾಹುಲ ಕಾರಜೋಳ, ಸಂತೋಷ ಝಳಕಿ, ಚಾಂದಸಾಬ ಮುಲ್ಲಾ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು, ಕಾರಜೋಳ ಅಭಿಮಾನಿಗಳು, ಜಿಲ್ಲೆಯ ನಾನಾ ಮಂಡಲ ಕಾರ್ಯಕರ್ತರು ಭಾಗವಹಿಸಿದ್ದರು.