MBP CM: ಎಂಬಿಪಿ ಮುಂದಿನ ದಿನಗಳಲ್ಲಿ ಸಿಎಂ ಆಗಿ ರೈತರ ಕಣ್ಣೀರು ಒರೆಸಲಿ- ಮಲಘಾಣ ಗ್ರಾಮದ ರೈತನ ಆಶಯ

ವಿಜಯಪುರ: ಎಂ. ಬಿ. ಪಾಟೀಲ ಅವರು ಮುಂಬರುವ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಇಡೀ ರಾಜ್ಯದ ರೈತರ ಕಣ್ಣೀರು ಒರೆಸುವಂತಾಗಲಿ ಎಂದು ಮಲಘಾಣದ ಗ್ರಾಮಸ್ಖ ಈರಯ್ಯ  ಕಟಗೇರಿಮಠ ಆಶಯ ವ್ಯಕ್ತಪಡಿಸಿದ್ದಾರೆ.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಅವರ ಜನ್ಮದಿನದ ಅಂಗವಾಗಿ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಲಘಾಣ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಲಘಾಣ ಗ್ರಾಮಕ್ಕೆ ಆಗಮಿಸಿದ ಬಸನಗೌಡ ಪಾಟೀಲ ಅವರನ್ನು ಅಲ್ಲಿನ ನಿವಾಸಿಗಳು ಸ್ವಾಗತಿಸಿದರು

 

ಈ ಭಾಗದಲ್ಲಿ 600 ರಿಂದ 700 ಅಡಿವರೆಗೆ ಬೋರವೆಲ್ ಕೊರೆಯಿಸಿದರೂ ಒಂದು ಹನಿ ನೀರು ಬರುತ್ತಿರಲಿಲ್ಲ.  ಆದರೆ, ಇದೀಗ ಕೇವಲ 40-100 ಅಡಿವರೆಗೆ ಅಗೆದರೆ ಸಾಕು ನೀರು ಚಿಮ್ಮುತ್ತಿದೆ.  ರೈತರು ಆರ್ಥಿಕವಾಗಿ ಸದೃಢರಾಗಲು ಎಂ. ಬಿ. ಪಾಟೀಲರೇ ಕಾರಣ.  ಮುಂದಿನ ದಿನಗಳಲ್ಲಿ ಎಂ. ಬಿ. ಪಾಟೀಲರು ರಾಜ್ಯದ ಮುಖ್ಯಮಂತ್ರಿಯಾಗಿ ಇಡೀ ರಾಜ್ಯದ ರೈತರ ಕಣ್ಣಿರು ಒರೆಸುವ ಕಾರ್ಯ ಮಾಡಬೇಕಿದೆ ಎಂದು ಹೇಳಿದರು.

ನಿವೃತ್ತ ಶಿಕ್ಷಕ ಎಸ್. ಎಸ್. ಗರಸಂಗಿ ಮಾತನಾಡಿ, ಕ್ಷೇತ್ರದ ಗ್ರಾಮವಿಲ್ಲದಿದ್ದರೂ ಗ್ರಾಮಕ್ಕೆ ಮಹತ್ವ ನೀಡಿ, ನೀರಾವರಿ ಸೌಕರ್ಯ ಒದಗಿಸಿ ರೈತರಿಗೆ ಆರ್ಥಿಕ ಪ್ರಗತಿ ಹೊಂದಲು ಸಾಧ್ಯ ಮಾಡಿಕೊಟ್ಟ ಮಾಜಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲರ ಋಣ ಎಂದೂ ತೀರಿಸಲಾಗದು ಎಂದು ಹೇಳಿದರು.

ಈ ಹಿಂದೆ ಮಲಘಾಣ ಗ್ರಾಮದಲ್ಲಿ ನೀರು ಅಭಾವದಿಂದ 100 ರಿಂದ 150 ಟನ್ ಕಬ್ಬು ಬೆಳೆಯುವುದು ಕಷ್ಟಕರವಾಗಿತ್ತು.  ಇದರಿಂದ ರೈತರು ತಮ್ಮ ಭೂಮಿಯನ್ನು ಮಾರುವಂತ ಪರಿಸ್ಥಿತಿ ಎದುರಾಗಿತ್ತು.  ಎಂ. ಬಿ. ಪಾಟೀಲ ಅರು ನೀರಾವರಿ ಯೋಜನೆಗಳನ್ನು ರೂಪಿಸಿ ಮಲಘಾಣ ಗ್ರಾಮ ಹಸಿರಿನಿಂದ ಕಂಗೊಳಿಸುತ್ತಿದೆ. ಅಲ್ಲದೇ, ಈ ಗ್ರಾಮದಿಂದ 30 ರಿಂದ 40 ಸಾವಿರ ಟನ್ ಕಬ್ಬು ಕಾರ್ಖಾನೆಗೆ ರವಾನೆಯಾಗುತ್ತಿದೆ. ರೈತರು ನಾನಾ ಬೆಳೆಗಳನ್ನು ಬೆಳೆಯುತ್ತಿದ್ದಾರೆ ಇದರಿಂದ ರೈತರ ಆದಾಯವು ದ್ವಿಗುಣಗೊಂಡು, ಆರ್ಥಿಕ ಸಬಲರಾಗಲು ಸಾಧ್ಯವಾಗಿದೆ ಎಂದು ಹೇಳಿದರು.

ಬಸನಗೌಡ ಪಾಟೀಲರಿಗೆ ಸನ್ಮಾನ

ಮಲಘಾಣ ಗ್ರಾಮದಲ್ಲಿ ಎಂ. ಬಿ. ಪಾಟೀಲ ಅವರ ಜನ್ಮದಿನವನ್ನು ಪ್ರತಿ ವರ್ಷದಂತೆ ಈ ವರ್ಷವೂ ಅದ್ದೂರಿಯಾಗಿ ಆಚರಿಸಲಾಯಿತು.  ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಂ. ಬಿ. ಪಾಟೀಲ ಅವರ ಪುತ್ರ ಬಸನಗೌಡ ಪಾಟೀಲ ಅವರನ್ನು ಸ್ವಾಗತಿಸಿ, ಗ್ರಾಮಸ್ಥರ ಪರವಾಗಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿ. ಎಲ್. ಡಿ. ಇ ನಿರ್ದೇಶಕ ಬಸವನಗೌಡ ಪಾಟೀಲ, ಈ ಭಾಗ ಎಂ. ಬಿ. ಪಾಟೀಲ ಅವರ ಕ್ಷೇತ್ರವಾಗಿರದಿದ್ದರೂ, ನಮ್ಮ ತಂದೆಯವರ ಮೇಲೆ ಇಟ್ಟಿರುವ ಪ್ರೀತಿ, ಅಭಿಮಾನ ನೋಡಿ ನನಗೆ ಹೃದಯ ತುಂಬಿ ಬಂದಿದೆ.  ನಮ್ಮ ಕುಟುಂಬದ ಪರವಾಗಿ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಲಘಾಣ ಗ್ರಾ. ಪಂ. ಅಧ್ಯಕ್ಷ ಸುರೇಶ ವಠಾರ, ಗ್ರಾ. ಪಂ. ಮಾಜಿ ಅಧ್ಯಕ್ಷ ಅಶೋಕ ನಿಂಗನೂರ, ಪಿಕೆಪಿಎಸ್ ಮಾಜಿ ಅಧ್ಯಕ್ಷ ಚಂದ್ರಶೇಖರ ಅಮಲಜೇರಿ, ಸುರೇಶ ಬಿರಾದಾದ, ಶಂಕರಗೌಡ ಪಾಟೀಲ ಸೇರಿದಂತೆ ಮಲಘಾಣ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌