Hijab Eshwarappa: ಇಸ್ಲಾಂ, ಖುರಾನ್ ನಲ್ಲಿ ಹಿಜಾಬ್ ಕಡ್ಡಾಯ ಇಲ್ಲ- ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ

ವಿಜಯಪುರ: ಹಿಜಾಬ್ ಇಸ್ಲಾಂ ಧರ್ಮದಲ್ಲಿ ಕಡ್ಡಾಯ ಇಲ್ಲ.  ಕುರಾನ್ ನಲ್ಲಿಯೂ ಇಲ್ಲ ಎಂದು ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದ್ದಾರೆ.

ವಿಜಯಪುದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಿಜಾಬ್ ಕುರಿತು ಐದು ಅಥವಾ ಏಳು ಜನರ ಪೀಠದಲ್ಲಿ ವಿಚಾರಣೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.  ಇಡೀ ದೇಶವಷ್ಟೇ ಅಲ್ಲ, ವಿಶ್ವವೇ ಇತ್ತ ಕಡೆ ನೋಡುತ್ತೀತ್ತು.  ಹಿಜಾಬ್ ಧರಿಸಬೇಕೋ ಬೇಡವೋ? ಸಮವಸ್ತ್ರವಾಗಿ ಬಳಸಬೇಕೋ ಬೇಡವೋ? ಇಸ್ಲಾಂ ನಲ್ಲಿ ಹಿಜಾಬ್ ಇದೆಯೋ ಇಲ್ಲವೋ ಎಂಬುದರ ಕುರಿತು ಚರ್ಚೆಯಾಯಿತು.  ಈ ಸಂದರ್ಭದಲ್ಲಿ ಇಡೀ ದೇಶದ ಜನ ಒಂದು ರೀತಿಯಲ್ಲಿ ಯಾವುದು ಸರಿ ಮತ್ತು ಯಾವುದು ತಪ್ಪು ಎಂಬುದರ ಕುರಿತು ಚರ್ಚೆನ್ನು ಮಾಡುವಂತಾಯಿತು ಎಂದು ಹೇಳಿದರು.

ಇಸ್ಲಾಂ ಧರ್ಮದಲ್ಲಿ ಹಿಜಾಬ್ ಧರಿಸಬೇಕು ಎಂಬುದು ಇಲ್ಲ ಎಂದು ಸ್ಪಷ್ಟವಾಗಿ ಇದೆ.  ಯಾರಾರು ಖುರಾನ್ ಓದಿದ್ದಾರೋ ಅವರೆಲ್ಲರೂ ಇದನ್ನು ಗಮನಿಸಿದ್ದಾರೆ.  ಖುರಾನ್ ನಲ್ಲಿ ಇದು ಇಲ್ಲ.  ಸಂವಿಧಾನಕ್ಕೆ ಗೌರವ ಕೊಡಬೇಕು ಎನ್ನುವ ಅಂಶ ಬಹಳ ಮುಖ್ಯ.  ಇಬ್ಬರೂ ನ್ಯಾಯಮೂರ್ತಿಗಳು ಇಂದು ನೀಡಿರುವ ತೀರ್ಪು ಬೇರೆ ಬೇರೆ ಇವೆ.  ಇಬ್ಬರೂ ಬೇರೆ ಬೇರೆ ಯಾಕೆ ತೀರ್ಪು ನೀಡಿದ್ದಾರೆ ಎಂದು ಕೇಳುವ ಹಕ್ಕು ಯಾರಿಗೂ ಇಲ್ಲ.  ಆದರೆ, ಇದು ಧಾರ್ಮಿಕ ಆಚರಣೆ ಅಲ್ಲ.  ಹಿಜಾಬ್ ಇಸ್ಲಾಮಿನ ಅವಿಭಾಜ್ಯ ಅಂಗ ಹಿಜಾಬ್ ಅಲ್ಲ ಎಂಬ ಅಂಶದ ಕುರಿತು ಚರ್ಚೆಯಾಗಿದೆ.  ಸಮಾನತೆಗೆ ಎಲ್ಲ ಮಕ್ಕಳೂ ಒಂದೇ ರೀತಿ ಇರಬೇಕು ಎಂಬವುದಕ್ಕೋಸ್ಕರ ಶಿಸ್ತಿಗಾಗಿ ಯುನಿಫಾರಂ ಇರಬೇಕು ಎಂಬುದಕ ಕುರಿತು ನಡೆದ ಚರ್ಚೆಯನ್ನು ಹೈಕೋರ್ಟ್ ಕೂಡ ಎತ್ತಿ ಹಿಡಿದಿತ್ತು ಎಂದು ಅವರು ಹೇಳಿದರು.

ಆದರೆ, ಆರು ಜನ ವಿದ್ಯಾರ್ಥಿನಿಯರು ಉಡುಪಿಯಲ್ಲಿ ಹಿಜಾಬ್ ಬೇಕು ಎಂದು 20-30 ವರ್ಷಗಳಿಂದ ನಡೆಯುತ್ತಿದ್ದ ಕಾಲೇಜಿನಲ್ಲಿ ಹಿಜಾಬ್ ಧರಿಸಿಕೊಂಡು ಬಂದು ಈ ಚರ್ಚೆಗೆ ನಾಂದಿ ಹಾಡಿದರು.  ಆ ಆರು ಜನ ಹೆಣ್ಣು ಮಕ್ಕಳಿಗೆ ಯಾವ ರಾಷ್ಟ್ರದ್ರೋಹಿಗಳು ಹಿಜಾಬ್ ವಿಚಾರ ಕಲಿಸಿಕೊಟ್ಟವರು ವಿಚಾರ ಇಡೀ ದೇಶದಲ್ಲಿ ಹಿಂದೂ ಮುಸ್ಲಿಮರು ಎಂಬುವುದಕ್ಕಿಂತಲೂ ಮುಸ್ಲಿಮರು ದಂಗೆ ಏಳಲು ಅವಕಾಶ ನೀಡಿದು.  ಮುಸ್ಲಿಮರು ದಂಗೆ ಶುರು ಮಾಡುತ್ತಿದ್ದಂತೆ, ಇಡೀ ದೇಶದ ಹಿಂದುಗಳು ಸ್ವಾಭಾವಿಕವಾಗಿ ನಾವೂ ಕೂಡ ನಮ್ಮ ಧರ್ಮದಂತೆ ಕೇಸರಿ ಶಾಲು ಹಾಕಿಕೊಂಡು ಹೋಗಬೇಕು ಎಂಬ ವಿಚಾರ ಬಂತು.  ಆಗ ರಾಜ್ಯ ಸರಕಾರ ಹಿಜಾಬ್ ಮತ್ತು ಕೇಸರಿ ಹಾಕುವ ಅಗತ್ಯವಿಲ್ಲ.  ಆಯಾ ಶಾಲಾ ಕಾಲೇಜುಗಳಲ್ಲಿ ಯಾವ ಸಮವಸ್ತ್ರ ಧರಿಸಬೇಕು ಎಂಬ ನಿಯಮವಿದೆಯೋ ಅದನ್ನು ಪಾಲಿಸಲು ಸೂಚನೆ ನೀಡಿತ್ತು.  ಇನದ್ನು ಹೈಕೋರ್ಟ್ ಎತ್ತಿ ಹಿಡಿದಿದ್ದನ್ನು ಇಡೀ ರಾಜ್ಯ ಸ್ವಾಗತಿಸಿತ್ತು.  ಇಷ್ಟಕ್ಕೂ ಸುಮ್ಮನಾಗದ ರಾಷ್ಟ್ರದ್ರೋಹಿಗಳು ಸುಪ್ರೀಂ ಕೋರ್ಟಿಗೆ ಮೊರೆ ಹೋಗಿ 26 ಅರ್ಜಿಗಳನ್ನು ಸಲ್ಲಿಸಿದರು.  ಆರು ಜನ ಹೆಣ್ಣು ಮಕ್ಕಳಿಗೆ ಕರೆದು ಬುದ್ದಿ ಹೇಳಿ ಇದು ಇಸ್ಲಾಂ, ಖುರಾನ್ ನಲ್ಲಿ ಹಿಜಾಬ್ ಇಲ್ಲ.  ನಿಮಗೆ ಯಾರೋ ರಾಷ್ಟರದ್ರೋಹಿ ಹೇಳಿದರು ಎಂದು ಅವರ ಸಮುದಾಯದವರು ಬುದ್ದಿ ಹೇಳಿದ್ದರೆ ಇದು ಇಲ್ಲಿಯತನಕ ಬರುತ್ತಿರಲಿಲ್ಲ.  ಅಕ್ಕ-ತಂಗಿಯರ ರೂಪದಲ್ಲಿಯೇ ಸ್ವಾಭಾವಿಕವಾಗಿ ವಿದ್ಯಾರ್ಥಿನಿಯರು ಓದುತ್ತಿದ್ದರು.  ಯಾರು ಬೆಂಕಿ ಹಚ್ಚುವ ಕೆಲಸ ಮಾಡಿದ್ದರೋ ಅವರು ಈಗ ರಾಜ್ಯ ಮತ್ತು ದೇಶದಲ್ಲಿ ಹೆಣ್ಣು ಮಕ್ಕಳಲ್ಲಿ ಎರಡು ಭಾಗ ಆಗುವಂತೆ ಮಾಡಿದೆ.  ಈಗ ನಮಗೆ ಸುಪ್ರೀಂ ಕೋರ್ಟ್ ಮೇಲೆ ನಂಬಿಕೆಯಿದೆ.  ಸಂವಿಧಾನಬದ್ಧವಾಗಿ ಐದು ಅಥವಾ ಏಳು ನ್ಯಾಯಾದೀಶರ ಪೀಠ ಏನು ತೀರ್ಪು ಕೊಡುತ್ತೋ ಅದಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಕೆ. ಎಸ್. ಈಶ್ವರಪ್ಪ ಹೇಳಿದರು.

ಹೈಕೋರ್ಟಿನ ವಿಚಾರವನ್ನು ಓರ್ವ ನ್ಯಾಯಮೂರ್ತಿ ಎತ್ತಿ ಹಿಡಿದಿದ್ದರೇ, ಇನ್ನೋಬ್ಬ ನ್ಯಾಯಮೂರ್ತಿಗಳು ಅದನ್ನು ರದ್ದು ಪಡಿಸಿದ್ದಾರೆ.  ಈಗ ಗೆಲುವು ಸೋಲಿನ ಪ್ರಶ್ನೆ ಇಲ್ಲಿಲ್ಲ.  ಈಗ ಸುಪ್ರೀಂ ಕೋರ್ಟ್ ಏನು ತೀರ್ಮಾನ ಕೊಡುತ್ತೋ ಅದಕ್ಕೆ ಎಲ್ಲರೂ ಬದ್ಧವಾಗಿರಬೇಕು ಅವರು ಹೇಳಿದರು.

ಪಿ ಎಫ್ ಐ ಸೇರಿದಂತೆ ರಾಷ್ಟ್ರವಿರೋಧಿ ಚಟುವಟಿಕೆ ಮಾಡುವ ವ್ಯಕ್ತಿಗಳು ಎಲ್ಲಿಂದ ಬಂದರು? ಯಾರು ಗೋವನ್ನು ಕಳ್ಳತನ ಮತ್ತು ಗೋ ಹತ್ಯೆ ಮಾಡುತ್ತಿದ್ದಾರೆ ಅಂಥವನ್ನು ಬಿಗಿ ಮಾಡಿ ಎಂದು ಬಿಜೆಪಿ ಒತ್ತಾಯ ಮಾಡಿದರೂ ಕೂಡ ಗೋಹತ್ಯೆ ಮಾಡುವರಿಗೆ ರಕ್ಷಣೆ ನೀಡಿ ಗೋರಕ್ಷರಿಗೆ ಶಿಕ್ಷೆ ನೀಡಿದರು.  ಹೀಗಾಗಿ ಪಿ ಎಫ್ ಐ ರಾಜ್ಯದಲ್ಲಿ ಅತೀ ಹೆಚ್ಚು ಬೆಳೆಯಲು ಕಾಂಗ್ರೆಸ್ ಕಾರಣ.  ಪಿ ಎಫ್ ಐ ಕಾಂಗ್ರೆಸ್ಸಿನ ಪಾಪದ ಕೂಸು.  ಆಗ ಬಿಜೆಪಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೋರಾಟ ಮಾಡಿದಾಗ ಕೆಲವು ಜನರನ್ನು ಬಂಧಿಸಿ ಕೇಸ್ ಹಾಕಿದರು.  ಕಾಂಗ್ರೆಸ್ ಮತ್ತು ಸಿದ್ಧರಾಮಯ್ಯ ಅಧಿಕಾರಕ್ಕೆ ಬಂದ ಮೇಲೆ ಆ ಕೇಸ್ ಗಳನ್ನು ಹಿಂಪಡೆದರು.  ಆಗ ಪಿ ಎಫ್ ಐ ಗೆ ನಮ್ಮ ಜೊತೆ ಕಾಂಗ್ರೆಸ್ ಇದೆ ಎಂದು ಶಕ್ತಿ ಸಿಕ್ಕಿತು.  ಹೀಗಾಗಿ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ರಾಷ್ಟ್ರವಿರೋಧಿ ಚಟುವಟಿಕೆಗಳು ನಡೆಯುತ್ತಿದೆ.  ಇದಕ್ಕೆ ಅಂತ್ಯಹಾಕುವ ಸಮಯ ಬಂದಿದೆ.  ನರೇಂದ್ರ ಮೋದಿ ಪ್ರಧಾನಿಯಾದ ನಂತರ ಇಂಥ ರಾಷ್ಟ್ರದ್ರೋಹಿ ಚಟುವಟಿಕೆಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ಸಿಗುವುದಿಲ್ಲ.  ಭಯೋತ್ಪಾನದೆ ಚಟುವಟಿಕೆ, ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ಬಾಂಬ್ ತಯಾರಿ, ಅತ್ಯಾಚಾರ ಸೇರಿದಂತೆ ಯಾವುದೇ ಕಾರಣಕ್ಕೂ ಅವಕಾಶ ಸಿಗುವುದಿಲ್ಲ.  ರಾಷ್ಟ್ರದ್ರೋಹಿಗಳು ಕದ್ದುಮುಚ್ಚಿ ಮಾಡುತ್ತಿರುವ ಮಾಡುತ್ತಿರುವ ಕೃತ್ಯಗಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಂತ್ಯ ಕಾಣಿಸಲಿವೆ ಂದು ಮಾಜಿ ಸಚಿವರು ಹೇಳಿದರು.

ಮೋದಿ ಪ್ರಧಾನಿಯಾಗುವ ಮುಂಚೆ ಇಡೀ ವಿಶ್ವ ಪಾಕಿಸ್ತಾನದ ಜೊತೆಯಲ್ಲಿತ್ತು.  ಭಾರತ ಒಬ್ಬಂಟಿಯಾಗಿತ್ತು.  ಎಲ್ಲರೊಂದಿಗೆ ಸ್ನೇಹ ಬೆಳೆಸಿ, ಶಸ್ತ್ರಾಸ್ತ್ರಗಳನ್ನು ಹೆಚ್ಚಿಸಿಕೊಳ್ಳಲು ಬಜೆಟ್ ನಲ್ಲಿ ಹೆಚ್ಚಿನ ಹಣ ನೀಡಲಾಯಿತು.  ಈಗ ಇಡೀ ವಿಶ್ವ ಭಾರತ ನಮ್ಮ ಅಣ್ಣತಮ್ಮ ಎಂದು ಹೇಳುತ್ತಿದೆ.  ಇಂದು ಇಡೀ ವಿಶ್ವ ಮೋದಿ ಜೊತೆಗಿದೆ.  ಪಾಕಿಸ್ತಾನ ಒಬ್ಬಂಟಿಯಾಗಿದೆ.  ಪಾಕಿಸ್ತಾನವೇ ಹೆದರಿಕೊಂಡು ಸಾಯ್ತಿರಬೇಕಾದರೆ ಈ ಸಿದ್ಧರಾಮಯ್ಯ ನಮಗೆ ಯಾವ ಲೆಕ್ಕ ಎಂದು ಪ್ರಶ್ನಿಸಿದ ಅವರು, ಎನೋ ಬಾಯಿಗೆ ಬಂದಂಗೆ ಹೇಳಿಕೊಂಡು ಹೋಗುತ್ತಾರೆ.  ನಾವು ಎಲ್ಲದಕ್ಕೂ ಉತ್ತರ ಕೊಡುವ ಅಗತ್ಯವಿಲ್ಲ.  ಆದರೆ, ಅವರು ಪ್ರತಿಪಕ್ಷದ ನಾಯಕರಾಗಿರುವುದದಿಂದ ನಿರ್ಲಕ್ಷಿಸುವಂತಿಲ್ಲ ಮಾಜಿ ಸಚಿವ ಕೆ. ಎಸ್ ಈಶ್ವರಪ್ಪ ಹೇಳಿದರು.

Leave a Reply

ಹೊಸ ಪೋಸ್ಟ್‌