Short Film Shooting: ಕಥೆಗಾರ ಡಾ. ಚನ್ನಪ್ಪ ಕಟ್ಟಿ ಅವರ ಊದ್ರ್ವರೇತ ಕಥೆಯಾಧಾರಿತ ಕಿರು ಚಲನಚಿತ್ರ ಶೂಟಿಂಗ್ ಆರಂಭ

ವಿಜಯಪುರ: ಜಿಲ್ಲೆ ಸಿಂದಗಿಯ ಕಥೆಗಾರ ಡಾ. ಚನ್ನಪ್ಪ ಕಟ್ಟಿ ಅವರ’ಊದ್ರ್ವರೇತ ಕಥೆಯಾಧಾರಿತ ಕಿರು ಚಲನಚಿತ್ರದ ಚಿತ್ರೀಕರಣ ವಿಜಯಪುರ ನಗರದ ಪ್ರತಿಷ್ಠಿತ ಬಿ ಎಲ್ ಡಿ ಇ ಸಂಸ್ಥೆಯ ಆವರಣದಲ್ಲಿರುವ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಸಭಾ ಭವನದಲ್ಲಿ ಪ್ರಾರಂಭವಾಯಿತು.

ಕೇಂದ್ರದ ಕಾರ್ಯದರ್ಶಿ ಡಾ. ಎಂ. ಎಸ್. ಮದಭಾವಿ ಅವರು ಪೂಜೆ ಮಾಡುವ ಮೂಲಕ ಕಿಚು ಚಲನಚಿತ್ರ ಶೂಟಿಂಗ್ ಗೆ ಚಾಲನೆ ನೀಡಿದರು.

ಡಾ. ಚನ್ನಪ್ಪ ಕಟ್ಟಿ ಅವರ ಊದ್ರ್ವರೇತ ಕಥೆಯಾಧಾರಿತ ಕಿರು ಚಲನಚಿತ್ರಕ್ಕೆ ಡಾ. ಎಸ್. ಬಿ. ಮಾಡಗಿ ಕ್ಲ್ಯಾಪ್ ಮಾಡಿದರು

ಈ ಸಂದರ್ಭದಲ್ಲಿ ಡಾ. ಎಸ್. ಬಿ. ಮಾಡಗಿ ಕ್ಲ್ಯಾಪ್ ಮಾಡಿದರು.  ಸಿಂದಗಿಯ ಜಾನಪದ ವಿದ್ವಾಂಸ ಡಾ. ಎಂ. ಎಂ. ಪಡಶೆಟ್ಟಿ, ಹುಬ್ಬಳ್ಳಿಯ ಎಂ. ಕೆ. ಗಾವರವಾಡ, ಬಾದಾಮಿಯ ಎಸ್. ಸಿ. ಅಂಗಡಿ, ವಿ. ಟಿ. ಪೂಜಾರ, ಬಿ. ಎಸ್. ಪಾಟೀಲ ಪಡೇಕನೂರ, ಜಗದೀಶ ಬಿ. ಧನಗೊಂಡ, ಶರಣು ಪೂಜಾರ, ವಿ. ಡಿ. ಐಹೊಳಿ, ಚಿದಂಬರ ಬಂಡಗರ, ಗುರನಾಥ ಅರಳಗುಂಡಗಿ, ದೇವು ಮಾಕೊಂಡ ಶುಭ ಹಾರೈಸಿದರು.

ಕಿರು ಚಲನಚಿತ್ರದ ನಿರ್ದೇಶಕ ಸುನೀಲ ಸುಧಾಕರ ಹಾಗೂ ಅವರ ತಂಡ ಚಿತ್ರೀಕರಣ ನಡೆಸಿಕೊಟ್ಟರು.  ವಿಜಯಪುರದ ಸುತ್ತಮುತ್ತ ಮತ್ತು ಐತಿಹಾಸಿಕ ಪ್ರವಾಸಿ ತಾಣಗಳಾದ ಮಹಾಕೂಟ, ಬಾದಾಮಿಯ ಪರಿಸರದಲ್ಲಿ ಈ ಚಿತ್ರದ ಚಿತ್ರೀಕರಣವು ನಡೆಯಲಿದೆ ಎಂದು ಅವರು ತಿಳಿಸಿದರು.

Leave a Reply

ಹೊಸ ಪೋಸ್ಟ್‌