Sugarcane FRP: ಬಸವ ನಾಡಿನಲ್ಲಿ ಕಬ್ಬಿನ ಎಫ್ ಆರ್ ಪಿ ದರ ಪ್ರಕಟ- ಡಿಸಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ

ವಿಜಯಪುರ: ಜಿಲ್ಲೆಯಲ್ಲಿ ಪ್ರಸಕ್ತ 2022-23ನೇ ವರ್ಷದಲ್ಲಿ ನುರಿಸುವ ಕಬ್ಬಿಗೆ (ನ್ಯಾಯಸಮ್ಮತ ಶ್ರಮಕ್ಕೆ ತಕ್ಕ ಸಮಯೋಚಿತ ಬೆಲೆ) ಎಪ್ ಆರ್ ಪಿ ದರ ನಿಗದಿ ಪಡಿಸಲಾಗಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ತಿಳಿಸಿದ್ದಾರೆ.

2021-22ನೇ ವರ್ಷದಲ್ಲಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ನುರಿಸಿದ ಕಬ್ಬಿನಿಂದ ಉತ್ಪಾದನೆಯಾದ ಸಕ್ಕರೆಯ ಇಳುವರಿ ಆಧರಿಸಿ ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶನಾಲಯದ ಆಯುಕ್ತರು ಪ್ರತಿ ಟನ್ ಕಬ್ಬಿಗೆ ಕಟಾವು ಮತ್ತು ಸಾಗಾಣಿಕೆ ಸೇರಿದಂತೆ ಕಾರ್ಖಾನೆವಾರು ಎಪ್ ಆರ್ ಪಿ ನಿಗದಿ ಮಾಡಿದ್ದಾರೆ ಎಂದು ಅವರು ತಿಳಸಿದ್ದಾರೆ.

ರೈತರು ಕಬ್ಬು ಸಾಗಿಸುತ್ತಿರುವ ಸಂಗ್ರಹ ಚಿತ್ರ

ಕಾರ್ಖಾನೆವಾರು ಪ್ರತಿಟನ್ ಕಬ್ಬಿಗೆ ನಿಗದಿ ಪಡಿಸಿರುವ ಎಫ್ ಆರ್ ಪಿ (Fare and Remunerity  Price) ನ್ಯಾಯಸಮ್ಮತ ಶ್ರಮಕ್ಕೆ ತಕ್ಕ ಬೆಲೆ ದರ ಇಂತಿದೆ.

 

  1. ಹಾವಿನಾಳ- ಇಂಡಿಯನ ಶುಗರ್ ಮ್ಯಾನುಫ್ಯಾಕ್ಟರಿಂಗ್ ಕಂ- ರೂ. 2821
  2. ನಾದ ಕೆ. ಡಿ- ಜಮಖಂಡಿ ಶುಗರ್ಸ್ ನಾದ ಕೆಡಿ- ರೂ. 3279
  3. ಆಲಮೇಲ- ಕೆಪಿಆರ್ ಶುಗರ್ಸ್- ರೂ. 3163
  4. ಮಲಘಾಣ- ಮೆ. ಮನಾಲಿ ಶುಗರ್ಸ ಲಿ- ರೂ. 2821
  5. ಚಿಕ್ಕಗಲಗಲಿ- ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ- ರೂ. 3401
  6. ಯರಗಲ್ ಬಿ. ಕೆ- ಸಂಗಮನಾಥ ಶುಗರ್ಸ್- ರೂ. 3047
  7. ಯ.ರಗಲ್- ಶ್ರೀ ಬಾಲಾಜಿ ಶುಗರ್ಸ- ರೂ. 3218
  8. ಕಾರಜೋಳ- ಶ್ರೀ ಬಸವೇಶ್ವರ ಶುಗರ್ಸ- ರೂ. 3294
  9. ಮರಗೂರ- ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ನಿ- ರೂ. 3044.

Leave a Reply

ಹೊಸ ಪೋಸ್ಟ್‌