RSS VHP Ramalingareddy: ಆರ್ ಎಸ್ ಎಸ್, ವಿ ಎಚ್ ಪಿ ಬ್ರಿಟೀಷರೊಂದಿಗೆ ಶಾಮೀಲಾಗಿತ್ತು- ಕಾಂಗ್ರೆಸ್ ಶಾಸಕ ರಾಮಲಿಂಗಾರೆಡ್ಡಿ ಆರೋಪ

ವಿಜಯಪುರ: ಆರ್ ಎಸ್ ಎಸ್ ಮತ್ತು ವಿ ಎಚ್ ಪಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟೀಷರೊಂದಿಗೆ ಶಾಮಿಲಾಗಿತ್ತು ಎಂದು ಮಾಜಿ ಸಚಿವ ಮತ್ತು ಕಾಂಗ್ರೆಸ್ ಶಾಸಕ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಡೆಸುತ್ತಿರುವುದು ಭಾರತ್ ಜೋಡೋ ಯಾತ್ರೆಯಲ್ಲ.  ಅದು ಭಾರತ್ ತೋಡೋ ಯಾತ್ರೆ ಎಂದು ಬಿಜೆಪಿ ಮುಖಂಡರು ಮಾಡುತ್ತಿರುವ ಟೀಕೆಗೆ ಆಕ್ರೋಶ ವ್ಯಕ್ತಪಡಿಸಿರು.

ಬಿಜೆಪಿಯವರಿಗೆ ಮಾಡಲು ಕೆಲಸವಿಲ್ಲ. 1947 ರ ಮುಂಚೆ 547 ಕ್ಕೂ ಹೆಚ್ಚು ಸಣ್ಣ ಪುಟ್ಟ ರಾಜ್ಯಗಳಿದ್ದವು.  ಆ ಎಲ್ಲ ರಾಜ್ಯಗಳನ್ನು ಒಟ್ಟು ಮಾಡಿದ್ದು ಯಾರು? ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿ ಅವರ ನೇತೃತ್ವದಲ್ಲಿ ಲಕ್ಷಾಂತರ ಜನರು ಭಾಗಿಯಾಗಿದ್ದೇವು.  ಆಗ ಆರ್ ಎಸ್ ಎಸ್ ಮತ್ತು ವಿ ಎಚ್ ಪಿ ಯವುರ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿರಲಿಲ್ಲ.  ಇವರೆಲ್ಲರೂ ಬ್ರಿಟೀಷರ ಜೊತೆಗೆ ಶಾಮೀಲಾಗಿದ್ದರು ಎಂದು ಆರೋಪಿಸಿದರು.

ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದು ಕಾಂಗ್ರೆಸ್ ಪಕ್ಷ.  ಬಿಜೆಪಿಯೇ ದೇಶವನ್ನು ಛಿದ್ರ ಛಿದ್ರವನ್ನಾಗಿ ಮಾಡುತ್ತಿದೆ ಎಂದು ತಿರುಗೇಟು ನೀಡಿದ ಅವರು, ದೇಶದ ಸ್ವಾತಂತ್ರ್ಯ ಹೋರಾಟ ಮಾಡದ ಬಿಜೆಪಿ ಪೂರ್ವಜರು ದೇಶ ಭಕ್ತರೆಂದು ಅವರೇ ಹೇಳಿಕೊಳ್ಳುತ್ತಾರೆ.  ಇಂದು ರಾಹುಲ್ ಗಾಂಧಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ.  ಬಿಜೆಪಿಯ ಅನ್ಯಾಯ ಮತ್ತು ಅಕ್ರಮವನ್ನು ಹೊರ ಹಾಕಲು ಭಾರತ ಜೋಡೋ ಯಾತ್ರೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಬಿಜೆಪಿಯವರು ಸುಳ್ಳು ಜನ, ಬಿಜೆಪಿ ಅಂದರೆ ಬುರುಡೆ ಜನರ ಪಕ್ಷ ಎಂದು ಹೆಸರನ್ನು ಬದಲಾಯಿಸಬೇಕೆಂದು ವ್ಯಂಗ್ಯವಾಡಿದ ಅವರು, ಬಿಜೆಪಿಯವರು ಜನರಿಗೆ ಸುಳ್ಳು ಹೇಳಿ ಆಧಿಕಾರದಲ್ಲಿದ್ದಾರೆ.  ಇದು ಬಹಳ ದಿನ ನಡೆಯುವುದಿಲ್ಲ ಎಂದು ಕಿಡಿ ಕಾರಿದರು.

ಬಿಜೆಪಿಯವರು ಸುಳ್ಳು ಜನ, ಬಿಜೆಪಿ ಅಂದರೆ ಬುರುಡೆ ಜನರ ಪಕ್ಷ ಎಂದು ಹೆಸರನ್ನು ಬದಲಾಯಿಸಬೇಕೆಂದು ಒತ್ತಾಯ ಮಾಡಿದರು.  ಬಿಜೆಪಿಯವರು ಜನರಿಗೆ ಸುಳ್ಳು ಹೇಳಿ ಆಧಿಕಾರದಲ್ಲಿದ್ದಾರೆ.  ಇದು ಬಹಳ ದಿನ ನಡೆಯಲ್ಲಾ ಎಂದು ಕಿಡಿ ಕಾರಿದರು.

ಪಿ ಎಸ್ ಐ ಅಕ್ರಮ ನೇಮಕಾತಿ ಹಗರಣ ಹಾಲಿ ನ್ಯಾಯಾಧೀಶರಿಂದ ತನಿಖೆಯಾಗಲಿ 

ರಾಜ್ಯದಲ್ಲಿ ನಡೆದಿರುವ ಪಿ ಎಸ್ ಐ ನೇಮಕಾತಿ ಹಗಣದ ತನಿಖೆಯನ್ನು ಹಾಲಿ ನ್ಯಾಯಾದೀಶರಿಂದ ನಡೆಸಬೇಕು.  ಸದ್ಯಕ್ಕೆ ಅಕ್ರಮ ಪಿ ಎಸ್ ಐ ನೇಮಕಾತಿ ಹಗರಣದ ತನಿಖೆಯಾಗುತ್ತಿದೆ.  ಇಡೀ ಪ್ರಕರಣವನ್ನು ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು.  ಹಾಲಿ ನ್ಯಾಯಾದೀಶರ ನೇತೃತ್ವದಲ್ಲಿ ತನಿಖೆ ನಡೆದರೆ ಇನ್ನೂ ಅಕ್ರಮಗಳು ಹೊರ ಬರುವ ಸಾಧ್ಯತೆಯಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.

ಬಿಜೆಪಿ ಸರಕಾರದ ವಿರುದ್ದ ಕಿಡಿ ಕಾರಿದ ಕಾಂಗ್ರೆಸ್ ಶಾಸಕರು, ಬಿಜೆಪಿ ಸರಕಾರದಲ್ಲಿಯೇ ಇಂಥ ಅಕ್ರಮಗಳು ನಡೆಯುತ್ತವೆ.  1947 ರಿಂದ ರಾಜ್ಯದಲ್ಲಿ ಆಡಳಿತ ಮಾಡಿದ ಇತರ ಪಕ್ಷಗಳ ಆಡಳಿತದಲ್ಲಿ ಇಂಥ ಅಕ್ರಮ ನಡೆದಿರಲಿಲ್ಲ.  ಪಿ ಎಸ್ ಐ ಅಸಿಸ್ಟಂಟ್ ಪ್ರೊಪೇಸರ್ಸ್, ಎಫ್ ಡಿ ಎ ನೇಮಕಾತಿಯಲ್ಲಿ ಅಕ್ರಮಗಳು ಹಿಂದೆ ನಡೆದಿರಲಿಲ್.  ಇದೆಲ್ಲ ನಡೆದಿದ್ದು ಬಿಜೆಪಿ ಸರಕಾದಲ್ಲಿ.  ಬಿಜೆಪಿ ಆಡಳಿತ ಬಿಗಿ ಇಲ್ಲ.  ಆಡಳಿತ ನಡೆಸುವ ಅಭ್ಯಾಸವೂ ಇಲ್ ಎಂದು ಟೀಕಿಸಿದರು.

ಬಿಜೆಪಿಯವರು ಪ್ರಚಾರ ಪ್ರಿಯರು.  ಬರೀ ಬುರುಡೆ ಮಾತನ್ನಾಡುತ್ತಾರೆ.  ಬಣ್ಣ ಬಣ್ಣದ ಮಾತುಗಳಿಂದ ಜನರಿಗೆ ಸುಳ್ಳು ಹೇಳುತ್ತಾರೆ.  ಬಿಜೆಪಿಯವರ ಸುಳ್ಳು ಇದೀಗ ಜನರಿಗೆ ಗೊತ್ತಾಗಿದೆ.  ಕಾರಣ ಜನರು ಬಿಜೆಪಿಯನ್ನು ತಿರಸ್ಕಾರ ಮಾಡುತ್ತಾರೆ ಎಂದು ರಾಮಲಿಂಗಾರೆಡ್ಡಿ ಭವಿಷ್ಯ ನುಡಿದರು.

ಎ ಐ ಸಿ ಸಿ ಚುನಾವಣೆ ವಿಚಾರ

ಎ ಐ ಸಿ ಸಿ ಅಧ್ಯಕ್ಷ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಪರ ಬೆಂಬಲ ಸೂಚಿಸಿದರು.

ಅಖಿಲ ಭಾರತ ಕಾಂಗ್ರೆಸ್ ಕಮೀಟಿ ಆಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.  ಕಾಂಗ್ರೆಸ್ ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹಾಗೂ ಶಶಿ ತರೂರ್ ಮಧ್ಯೆ ಸ್ಪರ್ದೆ ಏರ್ಪಟ್ಟಿದೆ.  ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜ್ಯದ ಹಿರಿಯ‌ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ಸ್ಪರ್ಧಿಸಿದ್ದು, ಸಹಜವಾಗಿ ಅವರು ನಮ್ಮ ರಾಜ್ಯದ ವರಾಗಿದ್ದಾರೆ ಎನ್ನುವ ಮೂಲಕ ಮಾಜಿ ಸಚಿವ ರಾಮಲಿಂಗಾರೆಡ್ಡಿ ಖರ್ಗೆ ಪರ ತಮ್ಮ ಬೆಂಬಲ ಸೂಚಿಸಿದ್ದಾರೆ.  ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಹಾಗೂ ಶಶಿ ತರೂರ ಸ್ಪರ್ಧಿಸುತ್ತಿದ್ದಾರೆ.  ಖರ್ಗೆ ನಮ್ಮ ರಾಜ್ಯದವರೆ ಆಗಿದ್ದಾರೆ.  ಹೀಗಾಗಿ ಅವರತ್ತ ಒಲವು ಜಾಸ್ತಿ ಇದೆ ಎಂದು ಅವರು ಹೇಳಿದರು.

ಎ ಐ ಸಿ ಸಿ ಅಧ್ಯಕ್ಷ ಸ್ಥಾನಕ್ಕೆ ಗಾಂಧಿ ಪರಿವಾರದವರು ಬಿಟ್ಟು ಬೇರೆ ನಾಯಕರಿಗೆ ಅವಕಾಶ ನೀಡಲಾಗುತ್ತಿದೆ.  ಇದು ಯಾವ ಸಂದೇಶ ರವಾನೆಯಾಗುತ್ತದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಸಹ ಇದನ್ನೇ ಪ್ರತಿಪಾದಿಸಿದ್ದರು.  ಗಾಂಧಿ ಕುಟುಂಬ ಬಿಟ್ಟು ಬೇರೆ ನಾಯಕರಿಗೆ ಕಾಂಗ್ರೆಸ್ ಸರ್ವೋಚ್ಚ ಸ್ಥಾನ ನೀಡಬೇಕು ಎಂದು ಬಯಸಿದ್ದರು.  ಅದಕ್ಕೆ ತಕ್ಕಂತೆ ಈಗ ಕಾಲ ಕೂಡಿ ಬಂದಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.

Leave a Reply

ಹೊಸ ಪೋಸ್ಟ್‌