ವಿಜಯಪುರ: ಬಿಜೆಪಿಯಲ್ಲಿದ್ದು ಅಧಿಕಾರ ಅನುಭವಿಸಿದ ಮಾಜಿ ಮೇಯರ್ ಮತ್ತು ಉಪಮೇಯರ್ ಟಿಕೆಟ್ ನಿರಾಕರಣೆ ಹಿನ್ನೆಲೆಯಲ್ಲಿ ಕಮಲ ತೊರೆದು ತೆನೆ ಹೊತ್ತ ಮಹಿಳೆಯ ಪಾಳೆಯ ಸೇರಿದ್ದಾರೆ.
ವಿಜಯಪುರ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಸಂಗೀತಾ ಪೋಳ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬೆಂಬಲಿಗರಾಗಿದ್ದು ಬಿಜೆಪಿಯಲ್ಲಿಯೇ ತಮ್ಮ ಅಸ್ತಿತ್ವ ಕಂಡುಕೊಂಡು ಎರಡು ಬಾರಿ ಮೇಯರ್ ಆಗಿದ್ದರು. ಅಲ್ಲದೇ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಅವರ ಆಪ್ತರಲ್ಲಿ ಒಬ್ಬರಾಗಿರುವ ಆನಂದ ಧುಮಾಳೆ ಕೂಡ ಟಿಕೆಟ್ ನಿರಾಕರಣೆ ಹಿನ್ನೆಲೆಯಲ್ಲಿ ಬಿಜೆಪಿ ತೊರೆದು ತೆನೆ ಹೊತ್ತ ಮಹಿಳೆಯ ಪಾಳೆಯ ಸೇರಿದ್ದಾರೆ.
ಪರಿಶಿಷ್ಠ ಜಾತಿಯ ಮಹಿಳೆಗೆ ಮೀಸಲಾಗಿರುವ ವಾರ್ಡ್ ಸಂಖ್ಯೆ 33 ರಿಂದ ಸಂಗೀತಾ ಪೋಳ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇತ್ತ ಹಿಂದುಳಿದ ಬ ವರ್ಗಕ್ಕೆ ಮೀಸಲಾಗಿರುವ 30ನೇ ವಾರ್ಡಿನಿಂದ ಜೆಡಿಎಸ್ ಅಭ್ಯರ್ಥಿಯಾಗಿ ಆನಂದ ಧುಮಾಳೆ ಕಣಕ್ಕಿಳಿದಿದ್ದಾರೆ.
ಈ ಮೂಲಕ ಬಿಜೆಪಿ ಟಿಕೆಟ್ ಆಕಾಂಕ್ಷಿತರು ಕೊನೆ ಘಳಿಗೆಯಲ್ಲಿ ಟೆಕೆಟ್ ಸಿಗದ ಕಾರಣ ಜೆಡಿಎಸ್ ಸೇರ್ಪಡೆಯಾಗುವ ಮೂಲಕ ಬಿಜೆಪಿಗೆ ಆಘಾತ ನೀಡಿದ್ದಾರೆ.
ಜೆಡಿಎಸ್ 25 ವಾರ್ಡುಗಳಿಗೆ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ವಾರ್ಡುಗಳು ಮತ್ತು ಜೆಡಿಎಸ್ ಅಭ್ಯರ್ಥಿಗಳ ಮಾಹಿತಿ ಇಲ್ಲಿದೆ
- ಇಬ್ರಾಹಿಂ ಇರಫಾನ ಹತ್ತರಕಿ
- ಅಬ್ದುಲ್ ರಜಾಕ್ ರಜಾಕ್‌ಸಾಬ ಲೋಣಿ
- ಸುವರ್ಣ ವಿಠ್ಠಲ ಭಜಂತ್ರಿ
- ರಾಜು ಅಣದು ಚವ್ಹಾಣ
- –
- –
- ಹಾಸೀಂಪೀರ ರಾಜೇಸಾಬ ಜಾನವೇಕರ
- ಖಾಜಾಅಮೀನ್ ರಜಾಕಸಾಬ ಸೈಯ್ಯದ
- –
- –
- ಸಂತೋಷಕುಮಾರ ತುಳಜಾರಾಮ ಹಿರೆರೂಗಿ
- ಸಂಗೀತಾ ಪ್ರಕಾಶ ಚವ್ಹಾಣ
- –
- ಸಂಗಪ್ಪ ಲಕ್ಷ್ಮಣ ಗುಣಕಿ
- ಸಾಹಿರಾಬಾನು ಮಹ್ಮದರಫೀಕ ಆಲಮೇಲ
- ಮಿನಾಜ ಹೆರಮತುಲ್ಲಾ ಬಿಜಾಪುರ
- ಗೀತಾ ಈರಮ್ಮ ಬಸವರಾಜ ರಾಮತಾಳ
- ಸುಜಾತಾ ನವೀನ ಕಣಬೂರ
- ಜಯಶ್ರೀ ಚನ್ನಬಸಪ್ಪ ಸಾವಕಾರ
- ಬಿಸ್ಮಿಲ್ಲಾಬೇಗಂ ದಸ್ತಗೀರಸಾಬ ಸಾಲೋಟಗಿ
- ಅಫ್ರಿನ್ ಅಬ್ದುಲ್ ರೆಹಮಾನ ಹಿಪ್ಪರಗಿ(ಮುಲ್ಲಾ)
- –
- ಇಮಾಮಜಾಫರಸಾಧಿಕ ಅಮಾರತವಾಲೆ
- –
- ನೂರಜಹಾನ ಅಬ್ದುಲಸತ್ತಾರ ನಾಗರಬೋಡಿ
- ಮಹ್ಮದಆರಿಫ್ ಕೆ. ಇನಾಮದಾರ
- ರೇಶ್ಮಾ ಇಮ್ರಾನ ಶೇಖ
- ಮೆಹರನಿಗಾರ ಅಜೀಜ ಮುಕಬಿಲ್
- ಮಹಿಬೂಬಸಾಬ ಅಮೀರಮಜಾ ಕಲಾದಗಿ
- ಆನಂದ ಧುಮಾಳೆ
- –
- –
- ಸಂಗೀತಾ ಸಂತೋಷ ಪೋಳ
- ಶಾಹೀನಕೌಸರ ಅನ್ವರಹುಸೇನ ಮಕಾನದಾರ
- –
ಈ ಮಧ್ಯೆ ಬಿಜೆಪಿಯಿಂದ ಬಂಡಾಯವೆದ್ದು ನಾನಾ ಪಕ್ಷಗಳಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳ ವಿರುದ್ಧ ಬಿಜೆಪಿ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಕುತೂಹಲ ಕೆರಳಿಸಿದೆ.