ವಿಜಯಪುರ: ಬಿಜೆಪಿ ರಾಜ್ಯ ಉಸ್ತುವಾರಿ ಅರುಣಸಿಂಗ್ ತಮ್ಮ ವಿರುದ್ಧ ನೀಡಿರುವ ಹೇಳಿಕೆಯ ಬಗ್ಗೆ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ನಯವಾಗಿಯೇ ಎಚ್ಚರಿಕೆ ನೀಡಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಂಥ, ಇಂಥ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನನಗೆ ಸಮಯ ಇಲ್ಲ ಎಂದು ಹೇಳಿದರು.
ಮಹಾನಗರ ಪಾಲಿಕೆ ಚುನಾವಣೆ ಹಿನ್ನಲೆಯಲ್ಲಿ ನನಗೆ ಬೇರೆ ಪ್ರತಿಕ್ರಿತೆ ನೀಡಲು ಸಮಯ ಇಲ್ಲ. ನಾನು ಯಾರನ್ನಾದರೂ ಬಿಡ್ತೀನಾ? ನಾನು ಯಾರ ಮನೆಗೂ ಹೋಗಿ ನಿಂತಿಲ್ಲ. ವೇದಿಕೆಯಲ್ಲಿ ಅಬ್ಬರಿಸುತ್ತೇನೆ. ನನ್ನ ಬಗ್ಗೆ ಅರುಣ್ ಸಿಂಗ್ ಅವರಿಗೆ ಮಿಸ್ ಗೈಡ್ ಮಾಡಿದ್ದಾರಾ ಗೊತ್ತಿಲ್ಲ. ಮಿಸ್‌ಗೈಡ್ ಬಗ್ಗೆ ಅರುಣಸಿಂಗ್‌ರನ್ನು ಕೇಳಿ ಎಂದು ಮಾಧ್ಯಮದವರಿಗೆ ಅವರು ಸಲಹೆ ನೀಡಿದರು.
ಕಾಂತಾರ ಚಲನಚಿತ್ರದ ಕುರಿತು ನಟ ಚೇತನ್ ನೀಡಿರುವ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಯತ್ನಾಳ, ನಟ ಚೇತನ್ ನಾಲಾಯಕ ಎಂದು ವಾಗ್ದಾಳಿ ನಡೆಸಿದರು.
ಈ ಹಿಂದೆ ನಟ ಚೇತನ ವಿಜಯಪುರಕ್ಕೂ ನಾಟಕ ಮಾಡಲು ಬಂದಿದ್ದ. ಅಂಬೇಡ್ಕರ ಜಯಂತಿಯಲ್ಲಿ ಪಾಲ್ಗೊಳ್ಳಲು ಬಂದಾಗ ಬೇಕಾಬಿಟ್ಟಿ ಹೇಳಿಕೆ ನೀಡಬೇಡ ಎಂದು ಹೇಳಿದ್ದೆ. ನಟ ಚೇತನ ಸಾಬರ(ಮುಸ್ಲಿಂ) ಏಜೆಂಟ್ ಆಗಿದ್ದಾರೆ. ಅವರು ರೊಕ್ಕಾ ಕೊಟ್ಟು ಇಂಥ ಅಯೋಗ್ಯ ಕೆಲಸ ಮಾಡಿಸುತ್ತಾರೆ. ನಮ್ಮ ವಿಜಯಪುರದಲ್ಲಿಯೂ ಇಂಥ ಹಿಂದೂ ನಾಯಕರಿದ್ದಾರೆ. ಬೆಳಿಗ್ಗೆ ಕೆಂಪ ನಾಮ ಹಾಕಿಕೊಂಡು ರಾತ್ರಿ ಹಿಂದೂ ವಿರೋಧಿ ಕೆಲಸ ಮಾಡುತ್ತಾರೆ. ಹಿಂದೂ ವಿರೋಧಿ ಮಾತನಾಡಿದರೆ ಶಬ್ಹಾಷ್ ಎನ್ನುತ್ತಾರೆ ಎಂದು ಹೀಗೆ ಮಾತನಾಡುತ್ತಾರೆ ಎಂದು ಆರೋಪಿಸಿದರು.
ದೈವಾರಾಧನೆ ಸಂಸ್ಕೃತಿಯ ಭಾಗ ಆಗಿದೆ. ಹಿಂದೂ ವಿರೋಧಿ ಮಾತನಾಡಿದವರು ಏನೇನು ಆಗಿ ಹೋಗಿದ್ದಾರೆ. ಈ ಹಿಂದೆ ಸುಪರ್ ಸ್ಟಾರ್ ಎನಿಸಿಕೊಂಡ ಚಿತ್ರನಟರಾದ ಖಾನ್ ಗಳು ಈಗ ಹೇಗಿದ್ಸಾರೆ? ಅವರ ಸಿನೇಮಾಗಳು ಈಗ ಮಕಾಡೆ ಮಲಗುತ್ತಿವೆ. ನಮ್ಮ ಆರಾಧನೆ ಬಗ್ಗೆ ಮಾತನಾಡುವವರಿಗೆ ದೇವರು ಶಿಕ್ಷೆ ನೀಡುತ್ತಾನೆ. ಈ ಹಿಂದೆ ಹಲವರು ಶಿಕ್ಷೆ ಅನುಭವಿಸಿದ್ದಾರೆ. ಮುಂದೆಯೂ ಕೆಲವರು ಶಿಕ್ಷೆ ಅನುಭವಿಸಲಿದ್ದಾರೆ ಎಂದು ಯತ್ನಾಳ ವಾಗ್ದಾಳಿ ನಡೆಸಿದರು.