Thieves Arrest: ಶಾಲೆಗಳ ಬಿಸಿಯೂಟದ ಅಕ್ಕಿ, ಇತರೆ ಸಾಮಗ್ರಿಗಳು ಕಳ್ಳರ ಬಂಧನ

ವಿಜಯಪುರ: ವಿಜಯಪುರ ಗ್ರಾಮೀಣ ಪೊಲೀಸ ಠಾಣೆ ವ್ಯಾಪ್ತಿಯ ಬುರಾಣಪುರ, ಇಟ್ಟಂಗಿಹಾಳ ಹಾಗೂ ಹಿಟ್ನಳ್ಳಿ ಗ್ರಾಮಗಳ  ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕೊಡುವ ಬಿಸಿಯೂಟದ ಸಾಮಗ್ರಿಗಳನ್ಬು ಕಳ್ಳತನ ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ ಎಚ್. ಡಿ. ಆನಂದಕುಮಾರ, ಈ ಪ್ರಕರಣಗಳ ತನಿಖೆಗಾಗಿ ಎಎಸ್ಪಿ ಡಾ. ರಾಮ ಲಕ್ಷ್ನಣಸಾ ಅರಸಿದ್ದಿ ಅವರ ಮಾರ್ಗದರ್ಶನದಲ್ಲಿ ವಿಜಯಪುರ ಡಿವೈಎಸ್ಪಿ ಸಿದ್ದೇಶ್ವರ, ವಿಜಯಪುರ ಗ್ರಾಮೀಣ ಸಿಪಿಐ ಸಂಗಮೇಶ ಪಾಲಭಾವಿ, ವಿಜಯಪುರ ಗ್ರಾಮೀಣ ಪಿ ಎಸ್ ಐ ಗಳಾದ ಜಿ. ಎಸ್. ಉಪ್ಪಾರ, ಆರ್. ಎ. ದಿನ್ನಿ, ಎನ್. ಬಿ. ಉಪ್ಪಲದಿನ್ನಿ, ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿಯಾದ ಎಂ. ಎನ್. ಮುಜಾವರ, ಎಂ. ಎಚ್. ಬಂಕಲಗಿ ಎ.‌ಎನ್.‌ ಪಾಟೀಲ, ಐ. ವೈ. ದಳವಾಯಿ, ಎ. ಎಸ್. ಬಿರಾದಾರ, ಎಂ. ಎಸ್. ಮೇಟಿ, ಬಿ. ಕೆ. ಬಾಗವಾನ, ಆರ್. ಎಂ. ನಾಟಿಕಾರ, ಎಚ್. ಎಸ್. ಸಣಬೆಂಕಿ, ಸಂಗಮೇಶ ಕೋಟ್ಯಾಳ, ಎಸ್. ಬಿ. ತೇಲಗಾಂವ, ಪರುಶುರಾಮ ವಾಲಿಕಾರ ಅವರನ್ನು ಒಳಗೊಂಡ ಒಂದು ವಿಶೇಷ ತಂಡ ರಚಿಸಲಾಗಿತ್ತು ಎಂದು ತಿಳಿಸಿದರು.

ವಿಜಯಪುರ ಎಸ್ಪಿ ಎಚ್. ಡಿ. ಆನಂದಕುಮಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡ ಪೊಲೀಸ್ ಅಧಿಕಾರಿಗಳು

ಈತನಿಖಾ ತಂಡವು 22.10.2022 ರಂದು ನಸುಕಿನ ಜಾವ 4ರ ಸುಮಾರಿಗೆ ಖಚಿತ ಮಾಹಿತಿ ಮೇರೆಗೆ ವಿಜಯಪುರ-ಸೋಲಾಪುರ ರಾಷ್ಟ್ರೀಯ ಹೆದ್ದಾರಿ ಮೇಲೆ ಗೂಡ್ಸ ವಾಹನಗಳಲ್ಲಿ ಬಿಸಿಯೂಟದ ಅಕ್ಕಿ, ಬೆಳೆ ಹಾಗೂ ಇತರೆ ಸಾಮಗ್ರಿಗಳನ್ನು ತುಂಬಿಕೊಂಡು ಮಾರಾಟ ಮಾಡಲು ಹೊರಟಿರುವ
ಮಾಹಿತಿ ಪಡೆದು ಪಿ ಎಸ್ ಐ ಆರ್. ಎ. ದಿನ್ನಿ ತಮ್ಮ ಅಪರಾಧ ವಿಭಾಗದ ಸಿಬ್ಬಂದಿ ಜನರೊಂದಿಗೆ ಕನ್ನಾಳ ಕ್ರಾಸ್ ಬಳಿ ತೆರಳಿ ಎರಡು ಮಿನಿ ಗೂಡ್ಸ್ ವಾಹನಗಳನ್ಬು ತಡೆದು ಪರಿಶೀಲಿಸಿದಾಗ ಮಧ್ಯಾಹ್ನ ಬಿಸಿಯೂಟದ ಸಾಮಗ್ರಿಗಳನ್ನು ಅಕ್ರಮವಾಗಿ ಸಾಗಿಸುತ್ತಿರುವ ಅಂಶ ಬೆಳಕಿಗೆ ಬಂದಿದೆ.

ಈ ಸಂಬಂಧ ಆರು ಜನರನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳನ್ನು ಕಾನ್ನಾಳ ಗ್ರಾಮದ ತರ್ಪಭೂಶನ್ ಉರ್ಫ ಶರತ್ ಭೀಮಾಶಂಕರ ದೊಡಮನಿ(22), ದೇವರ ಹಿಪ್ಪರಗಿ ತಾಲೂಕಿನ ಕೋರವಾರ ಗ್ರಾಮದ ಶ್ರೀಕಾಂತ ತಂದೆ ದೇವೆಂದ್ರಪ್ಪ ಅಪ್ಪು ಕಟ್ಟಿ ಉರ್ಫ್ ಕಟ್ಟಿಮನಿ(22), ಮಲ್ಲಿಕಾರ್ಜುನ ರಾಮಪ್ಪ ಮೋಪಗಾರ(21), ಸಂಜೀವಪ್ಪ ಉರ್ಫ್ ಸಂಜು ತಂದೆ ಮಾಳಪ್ಪ ಮ್ಯಾಗೇರಿ(22), ಸಚಿನ ತಂದೆ ಲಕ್ಷ್ಮಣ ಹುಣಶ್ಯಾಳ(22) ಮತ್ತು ಬಬಲೇಶ್ವರ ತಾಲೂಕಿನ ಶೇಗುಣಸಿ ಮೂಲದ ಸಂತೋಷ ಜಗದೀಶ ಹೊಸಕೋಟ(19), ಎಂದು ಗುರುತಿಸಲಾಗಿದೆ ಎಂದು ತಿಳಿಸಿದರು.

ಆರೋಪಿಗಳನ್ನು ವಿಚಾರಿಸಿದಾಗ ತಾವು ಹಿಟ್ನಳ್ಳಿ, ಬುರಾಣಪುರ, ಇಟ್ಟಂಗಿಹಾಳ, ಬಬಲೇಶ್ವರ, ಸಿಂದಗಿ, ಆಲಮೇಲ ಮುಂತಾದೆಡೆ
ಶಾಲೆಗಳಿಂದ ಕಳ್ಳತನ ಮಾಡಿಕೊಂಡು ಬಂದು ಆಹಾರ ಧಾನ್ಯಗಳನ್ನು ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ಒಪ್ಪಿಕೊಂಡಿರುತ್ತಾರೆ. ಆರೋಪಿಗಳು ಸಿಂದಗಿಯಲ್ಲಿ ಐದು, ಬಬಲೇಶ್ವರ, ವಿಜಯಪುರ ನಗರದ ಆದರ್ಶ ನಗರ, ಕಲಕೇರಿ, ಆಲಮೇಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ತಲಾ ಒಂದು ಬಿಸಿಯೂಟ ಸಾಮಗ್ರಿ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಎಸ್ಪಿ ತಿಳಿಸಿದರು.

ಈ ಆರೋಪಿಗಳಿಂದ ಆಹಾರ ಧಾನ್ಯಗಳನ್ನು ಖರೀದಿಸಿದ ಮಿಂಚನಾಳದ ರಾಹುಲ ಶಂಕರ ಪವಾರ(33), ವಿಜಯಪುರ ನಗರದ ಉಪ್ಪಲಿ ಬುರುಜ ಹತ್ತಿರದ ಬಿಡಿಇ ಸೊಸಾಯಿಟಿ ಶಾಲೆಯ ಹಿಂಬದಿ ಓಣಿಯ ನಿವಾಸಿ ನಾಗರಾಜ ಬಸವರಾಜ ಉಪ್ಪಿನ(41) ವರ್ಷ ಅವರನ್ನೂ ಬಂಧಿಸಲಾಗಿದೆ. ಅಲ್ಲದೇ, ಅವರಿಂದ ರೂ. 2.70 ಲಕ್ಷ ಮೌಲ್ಯದ 50 ಕ್ವಿಂಟಾಲ್ ಪಡಿತರ ಅಕ್ಕಿ, ರೂ. 2.24 ಲಕ್ಷ ಮೌಲ್ಯದ ತೊಗರಿ ಬೇಳೆ, ರೂ. 1.06 ಲಕ್ಷ ನಗದು, ಅಶೋಕ ಲೈಲೆಂಡ್ ಕಂಪನಿಯ ಸುಮಾರು ರೂ. 8 ಲಕ್ಷ ಮೌಲ್ಯಸ ಮಿನಿ ಗೂಡ್ಸ್ ವಾಹನ, ಅದೇ ಕಂಪನಿಯ ಸುಮಾರು ರೂ. 6.50 ಲಕ್ಷ ಮೌಲ್ಯದ ಮತ್ತೋಂದು ಮಿನಿ ಗೂಡ್ಸ್ ವಾಹನ, ರೂ. 4.50 ಲಕ್ಷ ಮೌಲ್ಯದ ಕ್ರೂಜರ ವಾಹನ ಸೇರಿ‌ ಒಟ್ಟು ರೂ.‌ 25 ಲಕ್ಷ ಮೌಲ್ಯದ ಮಾಲು ಹಾಗೂ ರೋಖ ಹಣ ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದ ಮತ್ತೋರ್ವ ಆರೋಪಿ ಬಸವನ ಬಾಗೇವಾಡಿ ತಾಲೂಕಿನ ಹಂಗರಗಿ ಗ್ರಾಮದ ಸಚೀನ‌ ಅಲ್ಲಮಪ್ರಭು ಇಂಗಳೇಶ್ವರ ಪರಾರಿಯಾಗಿದ್ದು, ಆತನ ಬಂಧನಕ್ಕೆ ಬಲೆ ಬಿಸಲಾಗಿದೆ ಎಂದು ಅವರು ತಿಳಿಸಿದರು.

ಈ ಪ್ರಕರಣಗಳ ಪತ್ತೆಯಲ್ಲಿ ಪಾಲ್ಗೊಂಡ ಎಲ್ಲ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಪ್ರಶಂಸನಾ ಪತ್ರ ಹಾಗೂ ನಗದು ಬಹುಮಾನ ಘೋಷಿಸಲಾಗಿದೆ ಎಂದು ವಿಜಯಪುರ ಎಸ್ಪಿ ಎಚ್. ಡಿ. ಆನಂದಕುಮಾರ ಇದೇ ವೇಳೆ ತಿಳಿಸಿದರು.

ಈ ಸಂದರ್ಭದಲ್ಲಿ ಎಎಸ್ಪಿ ಡಾ. ರಾಮ ಲಕ್ಷ್ನಣ ಅರಸಿದ್ಧಿ, ಡಿವೈಎಸ್ಪಿ ಸಿದ್ಧೇಶ್ವರ, ಸಿಪಿಐ ಸಂಗಮೇಶ ಪಾಲಭಾವಿ, ಪಿ ಎಸ್ ಐ ಗಳಾದ ಜಿ. ಎಸ್. ಉಪ್ಪಾರ, ಆರ್. ಎ. ದಿನ್ನಿ, ಎಸ್. ಬಿ. ಉಪ್ಪಲದಿನ್ನಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌