BJP Expel: ಬಿಜೆಪಿಯಿಂದ 14 ಮುಖಂಡರ ಉಚ್ಛಾಟನೆ- ಆರ್. ಎಸ್. ಪಾಟೀಲ ಕೂಚಬಾಳ

ವಿಜಯಪುರ: ವಿಜಯಪುರ‌ ಮಹಾನಗರ ಪಾಲಿಕೆ ಚುನೆವಣೆಯಲ್ಲಿ ಬಂಡಾಯದ ಬೇಗುದಿಗೆ ಸಿಲುಕಿರುವ ಬಿಜೆಪಿ ಈಗ ಕ್ರಮ ಕೈಗೊಳ್ಳುವ ಮೂಲಕ ಬಿಜೆಪಿ ಅಭ್ಯರ್ಥಿಗಳಿಗೆ ತಟ್ಟಿರುವ ಬಿಸಿ ಕಡಿಮೆ ಮಾಡಲು ಮುಂದಾಗಿದೆ.

ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಪಕ್ಷೇತರರಾಗಿ ಮತ್ತು ಪಕ್ಷಾಂತರವಾಗಿ ಬೇರೆ ಪಕ್ಷಗಳ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ನಾನಾ ವಾರ್ಡುಗಳಲ್ಲಿ ಕಣದಲ್ಲಿರುವ ಅಭ್ಯರ್ಥಿಗಳನ್ನು ಉಚ್ಛಾಟನೆ ಮಾಡಿ ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ ಆದೇಶ ಹೊರಡಿಸಿದ್ದಾರೆ.

ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದಡಿ‌ನ 14 ಜನ ಮುಖಂಡರನ್ನು ಬಿಜೆಪಿ ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ‌.

ಬಿಜೆಪಿ ವಿಜಯಪುರ ಜಿಲ್ಲಾಧ್ಯಕ್ಷರ ಆದೇಶ ಪ್ರತಿ

ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಾರತಿ ಭುಯ್ಯಾರ, ಅಲ್ಪಸಂಖ್ಯಾತ ಮೋರ್ಚಾ ನಗರ ಮಂಡಳ ಅಧ್ಯಕ್ಷ ಅಲ್ತಾಫ್ ಇಟಗಿ, ಪರಿಶಿಷ್ಟ ಜಾತಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಬಾಬು ಜಾಧವ, ಜಿಲ್ಲಾ ಬಾಜಪಾ ವಿಶೇಷ ಆಹ್ವಾನಿತ ಬಾಬು ಶಿರಶ್ಯಾಡ, ಸಹಕಾರಿ ಪ್ರಕೋಷ್ಠ ನಗರ ಮಂಡಳ ಸಂಚಾಲಕ ಅಶೋಕ ನ್ಯಾಮಗೊಂಡ, ಹಿಂದುಳಿದ ಮೋರ್ಚಾ ನಗರ ಮಂಡಳ ಉಪಾಧ್ಯಕ್ಷ ಚಿನ್ನಪ್ಪ ಚಿನಗುಂಡಿ, ನಗರ ಮಂಡಳ ಕಾರ್ಯದರ್ಶಿ ಬಸವರಾಜ ಗೊಳಸಂಗಿ, ಎಸ್.ಟಿ ಮೋರ್ಚಾ ನಗರ ಘಟಕದ ಅಧ್ಯಕ್ಷ ಅಭಿಷೇಕ ಸಾವಂತ, ಕೈಗಾರಿಕಾ ಪ್ರಕೋಷ್ಠ ನಗರ ಸಂಚಾಲಕ ಬಾಬು ಏಳಗಂಟಿ, ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ರವಿಕಾಂತ ಬಗಲಿ, ಬಿಜೆಪಿ ಕಾರ್ಯಕರ್ತರಾದ ಬಸಪ್ಪ ಹಳ್ಳಿ, ಸವಿತಾ ಪಾಟೀಲ, ಮಾಜಿ ಮೇಯರ್ ಸಂಗೀತಾ ಪೋಳ, ಗ್ರಾಮೀಣ ಪಂಚಾಯತ್ ರಾಜ್ ಪ್ರಕೋಷ್ಠ ಜಿಲ್ಲಾ ಸಹ ಸಂಚಾಲಕ ರಾಜು ಬಿರಾದಾರ ಅವರನ್ನು ಉಚ್ಚಾಟನೆ ಮಾಡಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

Leave a Reply

ಹೊಸ ಪೋಸ್ಟ್‌