ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆ-2022ಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಇರುವ ಮತಗಟ್ಟೆ ಹೆಸರು ಮತ್ತು ವಿಳಾಸವನ್ನು ಮರು ನಾಮಕರಣ ಮತ್ತು ವಿಂಗಡಣೆ ಮಾಡಿ ಅದೇ ಅವರಣದಲ್ಲಿನ ಬೇರೆ ಕೊಠಡಿಯಲ್ಲಿ ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ತಿಳಿಸಿದ್ದಾರೆ.
ಇತ್ತೀಚಿಗೆ ಸತತವಾಗಿ ಸುರಿದ ಮಳೆಯಿಂದಾಗಿ ಕೆಲವು ಸರಕಾರಿ, ಖಾಸಗಿ ಶಾಲೆಗಳಲ್ಲಿ ಸ್ಥಾಪಿಸಲಾದ ಮತಗಟ್ಟೆ ಕೇಂದ್ರಗಳಲ್ಲಿ ಮೇಲ್ಛಾವಣಿ ಸೋರುತ್ತಿದ್ದು, ಶಿಥಿಲಗೊಂಡಿವೆ. ಕೆಲವೊಂದು ಮತದಾನ ಕೇಂದ್ರಗಳ ವಿಳಾಸದಲ್ಲಿ ಇಲಾಖೆಯಿಂದ ಶಾಲೆಗಳಿಗೆ ಮರು ನಾಮಕರಣ-ವಿಂಗಡಣೆ ಮಾಡಿರುವುದರಿಂದ ಅದೇ ಆವರಣದಲ್ಲಿ ಬೇರೆ ಕೊಠಡಿಯಲ್ಲಿ ಮತದಾನ ಕೇಂದ್ರ ಸ್ಥಾಪಿಸಲು ರಾಜ್ಯ ಚುನಾವಣಾ ಆಯೋಗದ ಅನುಮತಿ ಪಡೆದಿದ್ದು, ಬದಲಾವಣೆಗೊಂಡಿರುವ ಮತಗಟ್ಟೆಗಳ ವಿವರ ಈ ಕೆಳಗಿನಂತಿದೆ.
ವಾರ್ಡ ನಂ.27ರಲ್ಲಿ ಪ್ರಸ್ತುತ ಸರಕಾರಿ ಗಂಡು ಮಕ್ಕಳ ಪದವಿಪೂರ್ವ ಕಾಲೇಜು ಕೋಣೆÉ ನಂ. 07ರಲ್ಲಿದ್ದ ಮತಗಟ್ಟೆ ಸಂಖ್ಯೆ 231ನ್ನು ಅದೇ ಶಾಲೆಯ ಕೋಣೆ ನಂ.02 ರಲ್ಲಿ ಬದಲಾಯಿಸಿ, ಸ್ಥಾಪಿಸಲಾಗಿದೆ.
ವಾರ್ಡ ನಂ.27ರಲ್ಲಿ ಪ್ರಸ್ತುತ ಸರಕಾರಿ ಗಂಡು ಮಕ್ಕಳ ಪದವಿಪೂರ್ವ ಕಾಲೇಜು ಕೋಣೆÉ ನಂ. 09ರಲ್ಲಿದ್ದ ಮತಗಟ್ಟೆ ಸಂಖ್ಯೆ 232ನ್ನು ಅದೇ ಶಾಲೆಯ ಕೋಣೆ ನಂ.04 ರಲ್ಲಿ ಬದಲಾಯಿಸಿ ಸ್ಥಾಪಿಸಲಾಗಿದೆ.
ವಾರ್ಡ ನಂ.14ರಲ್ಲಿ ಪ್ರಸ್ತುತ ಶಿಕಾರಖಾನೆಯಲ್ಲಿರುವ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನಂ.20,ರ ಕೋಣೆÉ ನಂ.01ರಲ್ಲಿದ್ದ ಮತಗಟ್ಟೆ ಸಂಖ್ಯೆ 118ನ್ನು ಶಿಕಾರಖಾನೆಯ ನಮ್ಮ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ಪೂರ್ವಭಾಗದ ಕೋಣೆ ನಂ.01 ರಲ್ಲಿ ಬದಲಾಯಿಸಿ ಸ್ಥಾಪಿಸಲಾಗಿದೆ.
ವಾರ್ಡ ನಂ.14ರಲ್ಲಿರುವ ಶಿಕಾರಖಾನೆಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನಂ.20ರ ಕೋಣೆ ನಂ.02ರಲ್ಲಿದ್ದ ಮತಗಟ್ಟೆ ಸಂಖ್ಯೆ 119ನ್ನು ಶಿಕಾರಖಾನೆಯ ನಮ್ಮ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ಪಶ್ಚಿಮ ಭಾಗದ ಕೋಣೆ ನಂ.01 ರಲ್ಲಿ ಬದಲಾಯಿಸಿ ಸ್ಥಾಪಿಸಲಾಗಿದೆ.
ವಾರ್ಡ ನಂ.11ರಲ್ಲಿರುವ ಎಸ್.ಎಸ್.ರೋಡ ಸಿದ್ದೇಶ್ವರ ಕಲಾ ವಿಶ್ವವಿದ್ಯಾಲಯ ಕೋಣೆ ನಂ.04 ರಲ್ಲಿ ಸ್ಥಾಪಿಸಲಾದ ಮತಗಟ್ಟೆ ಸಂಖ್ಯೆ 84ನ್ನು ಸಿದ್ದೇಶ್ವರ ಕಲಾ ವಿಶ್ವವಿದ್ಯಾಲಯದ ಹೊಸ ಕಟ್ಟಡದ ಕೋಣೆ ನಂ.01ರಲ್ಲಿ ಬದಲಾಯಿಸಿ ಸ್ಥಾಪಿಸಲಾಗಿದೆ.
ವಾರ್ಡ ನಂ.9ರಲ್ಲಿರುವ ಗಾಂಧಿಚೌಕ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆ ನಂ.1 ರಲ್ಲಿ ಪ್ರಸ್ತುತ ಸ್ಥಾಪಿಸಲಾದ ಮತಗಟ್ಟೆ ಸಂಖ್ಯೆ 72ನ್ನು ನಗರದ ಗಾಂಧಿಚೌಕ್‍ನಲ್ಲಿರುವ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆ ನಂ.01ರ ಗ್ರಂಥಾಲಯ ಕೋಣೆಯಲ್ಲಿ ಬದಲಾಯಿಸಿ ಸ್ಥಾಪಿಸಲಾಗಿದೆ.
ವಾರ್ಡ ನಂ.7ರಲ್ಲಿ ಎಸ್.ಪಿ.ಕಚೇರಿ ಹಿಂಭಾಗ ಇರುವ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ನಂ.,18 ಕೋಣೆ ನಂ.02 ರಲ್ಲಿ ಸ್ಥಾಪಿಸಲಾದ ಮತಗಟ್ಟೆ ಸಂಖ್ಯೆ 51ನ್ನು ಎಸ್.ಪಿ. ಕಚೇರಿ ಹಿಂಭಾಗ ಇರುವ ಸರ್ಕಾರಿ ಮೌಲಾನಾ ಆಜಾದ ಮಾದರಿ ಆಂಗ್ಲ ಮಾಧ್ಯಮ ಶಾಲೆ ನಂ.01ರ ಉತ್ತರ ಭಾಗದ ಮೊದಲನೆ ಕೋಣೆಯಲ್ಲಿ ಬದಲಾಯಿಸಿ ಸ್ಥಾಪಿಸಲಾಗಿದೆ.
ಮತದಾನ ಕೇಂದ್ರಗಳ ವಿಳಾಸದಲ್ಲಿ ಇಲಾಖೆಯಿಂದ ಶಾಲೆಗಳಿಗೆ ಮರುನಾಮಕರಣ-ವಿಂಗಡಣೆತ ಮಾಡಿ, ಅದೇ ಶಾಲೆ-ಆವರಣದಲ್ಲಿನ ಮತಗಟ್ಟೆಗಳ ಹೆಸರು ತಿದ್ದುಪಡಿ : ವಾರ್ಡ ನಂ. 13ರಲ್ಲಿ ಪ್ರಸ್ತುತ ಇರುವ ಶಹಾಪೇಟೆಯ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆ ನಂ.07 ರ ಕೋಣೆ ನಂ.6 ರಲ್ಲಿ ಸ್ಥಾಪಿಸಲಾದ ಮತಗಟ್ಟೆ ಸಂಖ್ಯೆ 106ನ್ನು ತಿದ್ದುಪಡಿ ಮಾಡಿ, ಶಹಾಪೇಟೆಯ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆ ನಂ.08ರ ಕೋಣೆ ನಂ.06ರಲ್ಲಿ ಸ್ಥಾಪಿಸಲಾಗಿದೆ.
ವಾರ್ಡ ನಂ. 13ರಲ್ಲಿ ಪ್ರಸ್ತುತ ಇರುವ ಶಹಾಪೇಟೆಯ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆ ನಂ.08 ರ ಕೋಣೆ ನಂ.3 ರಲ್ಲಿ ಸ್ಥಾಪಿಸಲಾದ ಮತಗಟ್ಟೆ ಸಂಖ್ಯೆ 107ನ್ನು ತಿದ್ದುಪಡಿ ಮಾಡಿ, ಶಹಾಪೇಟೆಯ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆ ನಂ.08ರ ಕೋಣೆ ನಂ.03ರಲ್ಲಿ ಸ್ಥಾಪಿಸಲಾಗಿದೆ.
ವಾರ್ಡ ನಂ. 13ರಲ್ಲಿ ಪ್ರಸ್ತುತ ಇರುವ ಶಹಾಪೇಟೆಯ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆ ನಂ.08 ರ ಕೋಣೆ ನಂ.4 ರಲ್ಲಿ ಸ್ಥಾಪಿಸಲಾದ ಮತಗಟ್ಟೆ ಸಂಖ್ಯೆ 108ನ್ನು ತಿದ್ದುಪಡಿ ಮಾಡಿ, ಶಹಾಪೇಟೆಯ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆ ನಂ.08ರ ಕೋಣೆ ನಂ.04ರಲ್ಲಿ ಸ್ಥಾಪಿಸಲಾಗಿದೆ.
ವಾರ್ಡ ನಂ. 34ರಲ್ಲಿ ಪ್ರಸ್ತುತ ಇರುವ ರಹೀಂ ನಗರದ ಸರ್ಕಾರಿ ಉರ್ದು ಗಂಡು ಮಕ್ಕಳ ಶಾಲೆ ಕೋಣೆ ನಂ.01ರಲ್ಲಿ ಸ್ಥಾಪಿಸಲಾದ ಮತಗಟ್ಟೆ ಸಂಖ್ಯೆ 291ನ್ನು ತಿದ್ದುಪಡಿ ಮಾಡಿ ರಹೀಂ ನಗರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ನಂ.39ರ ಕೋಣೆ ನಂ.01 ರಲ್ಲಿ ಸ್ಥಾಪಿಸಲಾಗಿದೆ.
ವಾರ್ಡ ನಂ. 34ರಲ್ಲಿ ಪ್ರಸ್ತುತ ಇರುವ ರಹೀಂ ನಗರದ ಸರ್ಕಾರಿ ಉರ್ದು ಗಂಡು ಮಕ್ಕಳ ಶಾಲೆ ಕೋಣೆ ನಂ.03ರಲ್ಲಿ ಸ್ಥಾಪಿಸಲಾದ ಮತಗಟ್ಟೆ ಸಂಖ್ಯೆ 292ನ್ನು ತಿದ್ದುಪಡಿ ಮಾಡಿ ರಹೀಂ ನಗರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ನಂ.39ರ ಕೋಣೆ ನಂ.03 ರಲ್ಲಿ ಸ್ಥಾಪಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.