Chennamma Jayanti:: ವಿಜಯಪುರ ಜಿಲ್ಲಾಡಳಿತದಿಂದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ

ವಿಜಯಪುರ: ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಅರ್ಥಪೂರ್ಣ, ಅತ್ಯಂತ ಸರಳವಾಗಿ ಆಚರಿಸಲಾಯಿತು.

ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಕಿತ್ತೂರು ರಾಣಿ ಚೆನ್ನಮ್ಮ ಅವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ, ಪುಷ್ಪ ನಮನ ಸಲ್ಲಿಸಿದರು. ನಂತರ ಎಲ್ಲರಿಗೂ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಶುಭಾಶಯಗಳನ್ನು ತಿಳಿಸಿದರು.

ವಿಜಯಪುರ ಡಿಸಿ ಕಚೇರಿಯಲ್ಲಿ ವೀರಮಾತೆ ರಾಣಿ ಕಿತ್ತೂರು ಚೆನ್ನಮ್ಮ ಜಯಂತಿ ಆಚರಿಸಲಾಯಿತು

ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ. ನಾಗರಾಜ್, ಜಿಲ್ಲಾ ಪಂಚಮಸಾಲಿ ಸಮಾಜದ ಅಧ್ಯಕ್ಷ ಬಿ. ಎಂ. ಪಾಟೀಲ, ಗುರುಶಾಂತ ನಿಡೋಣಿ, ಸಮಾಜದ ಮುಖಂಡರಾದ ಶಶಿಧರ ಸಾತಲಗಾಂವ, ವೀರೇಶ ಕಸಬೇಗೌಡ, ಬಿ. ಎಸ್. ಪಾಟೀಲ, ಶಂಕರಗೌಡ ಸವನಹಳ್ಳಿ, ಹರಿಶಗೌಡ ಪಾಟೀಲ, ಬಿ. ಡಿ. ಪಾಟೀಲ, ನಿಂಗನಗೌಡ ಸೋಲಾಪುರ, ಮಲ್ಲಿಕಾರ್ಜುನ ಅಮರನ್ನವರ, ಭೀಮರಾಯ ಜಿಗಜಿಣಗಿ, ವಿದ್ಯಾವತಿ ಅಂಕಲಗಿ, ದೇವೇಂದ್ರ ಮಿರೇಕರ, ಅರವಿಂದ ಹಂಗರಗಿ, ಮಂಜುನಾಥ ನಿಡೋಣಿ, ದಾನೇಶ ಅವಟಿ, ನಿಂಗಪ್ಪ ಸಂಗಾಪುರ, ಸಿದ್ದು ಅವಟಿ, ವಿಜಯಕುಮಾರ ಜಾಧವ, ಕಲಾ ಉಮರಾಣಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌