Election Vehicles: ಮಹಾನಗರ ಪಾಲಿಕೆ ಚುನಾವಣೆ: ಮತಗಟ್ಟೆ ಸಿಬ್ಬಂದಿಗಳು ಮಸ್ಟರಿಂಗ್ ಕೇಂದ್ರಕ್ಕೆ ತೆರಳಲು ವಾಹನ ವ್ಯವಸ್ಥೆ ಜಿಲ್ಲಾಧಿಕಾರಿ

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಗೆ ಅ. 28 ರಂದು ಮತದಾನ ನಡೆಯಲಿದ್ದು, ಸುವ್ಯವಸ್ಥಿತವಾಗಿ ಮತದಾನ ನಡೆಯುವ ದೃಷ್ಟಿಯಿಂದ ನಾನಾ ತಾಲೂಕುಗಳಿಂದ  ಅವಶ್ಯಕ ಮತಗಟ್ಟೆ ಸಿಬ್ಬಂದಿಗಳನ್ನು ನಿಯೋಜಿಸಿ ಆದೇಶಿಸಲಾಗಿದ್ದು, ನಿಯೋಜಿತ ಮತಗಟ್ಟೆ ಸಿಬ್ಬಂದಿಗಳು ಮಸ್ಟರಿಂಗ್ ಕೇಂದ್ರಕ್ಕೆ ತೆರಳಲು  ಜಿಲ್ಲೆಯ ಆಯಾ ತಾಲೂಕುಗಳಿಂದ ವಾಹನ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅವರು ತಿಳಿಸಿದ್ದಾರೆ.

ನಿಯೋಜಿತ ಮತಗಟ್ಟೆ ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಮಸ್ಟರಿಂಗ್ ಕೇಂದ್ರವಾದ ವಿಜಯಪುರ ನಗರದ ವಿ.ಬಿ.ದರಬಾರ ಶಾಲೆಗೆ ತಲುಪಲು ಅನುಕೂಲವಾಗುವಂತೆ ಅಕ್ಟೋಬರ್ 27ರಂದು ಬೆಳಿಗ್ಗೆ 6 ಗಂಟೆಗೆ ಕೆಕೆಆರ್‍ಟಿಸಿ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ.  ಜಿಲ್ಲೆಯ ವಿವಿಧ ತಾಲೂಕುಗಳಿಂದ ಒಟ್ಟು 884 ಮತಗಟ್ಟೆ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಈ ಸಿಬ್ಬಂದಿಗಳ ಅನುಕೂಲಕ್ಕಾಗಿ 17 ಬಸ್‍ಗಳ ವ್ಯವಸ್ಥೆ ಮಾಡಲಾಗಿದೆ.

ಬಬಲೇಶ್ವರ ತಾಲೂಕಿನಿಂದ 238 ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, 05 ಬಸ್‍ಗಳು ಬಬಲೇಶ್ವರ ಬಸ್ ನಿಲ್ದಾಣದಿಂದ, ದೇವರಹಿಪ್ಪರಗಿ ತಾಲೂಕಿನಿಂದ 105 ಸಿಬ್ಬಂದಿಗಳನ್ನು ನಿಯೋಜಿಸಿದ್ದು,  02 ಬಸ್‍ಗಳು ದೇವರಹಿಪ್ಪರಗಿ ಬಸ್ ನಿಲ್ದಾಣದಿಂದ, ಇಂಡಿ ತಾಲೂಕಿನಿಂದ 162 ಸಿಬ್ಬಂದಿಗಳನ್ನು ನಿಯೋಜಿಸಿದ್ದು, 03 ಬಸ್‍ಗಳು ಇಂಡಿ ಬಸ್ ನಿಲ್ದಾಣದಿಂದ, ಕೊಲ್ಹಾರ ತಾಲೂಕಿನಿಂದ 70 ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, 01 ಬಸ್ ಕೊಲ್ಹಾರ ಬಸ್ ನಿಲ್ದಾಣದಿಂದ ಹಾಗೂ ತಿಕೋಟಾ ತಾಲೂಕಿನಿಂದ 309 ಸಿಬ್ಬಂದಿಗಳನ್ನು ನಿಯೋಜಿಸಿದ್ದು, ತಿಕೋಟಾ ಬಸ್ ನಿಲ್ದಾಣದಿಂದ 06 ಬಸ್‍ಗಳು ಅಕ್ಟೋಬರ್ 27ರಂದು ಬೆಳಿಗ್ಗೆ 6 ಗಂಟೆಗೆ ಹೊರಡಲಿವೆ. ಒಟ್ಟು 884 ಸಿಬ್ಬಂದಿಗಳಿಗೆ 17 ಬಸ್‍ಗಳಿಂದ ವಿಜಯಪುರದ ವಿ.ಬಿ.ದರಬಾರ ಶಾಲೆಗೆ ತಲುಪಲು ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಸಿಬ್ಬಂದಿಗಳ ನಿಯೋಜನೆ : ಮತಗಟ್ಟೆ ಸಿಬ್ಬಂದಿಗಳು ಆಯಾ ತಾಲೂಕಿನಿಂದ ಮಸ್ಟರಿಂಗ್ ಕೇಂದ್ರವಾದ ವಿಜಯಪುರ ನಗರದ ವಿ.ಬಿ.ದರಬಾರ ಶಾಲೆಗೆ ಸಮಯಕ್ಕೆ ಸರಿಯಾಗಿ ತೆರಳಲು ಅನುಕೂಲವಾಗುವಂತೆ ನೋಡಿಕೊಳ್ಳಲು ಹಾಗೂ ಮತಗಟ್ಟೆ ಸಿಬ್ಬಂದಿಗಳ ಹಿತದೃಷ್ಟಿಯಿಂದ 5 ಜನ ಸಿಬ್ಬಂದಿಗಳನ್ನು ನಿಯೋಜಿಸಿ ಆದೇಶಿಸಲಾಗಿದೆ.

ಬಬಲೇಶ್ವರ ತಾಲೂಕಿಗೆ ಕಂದಾಯ ನಿರೀಕ್ಷಕ ಎಸ್.ಎ.ಗುಮಾಸ್ತೆ (ಮೊ:9480644727), ದೇವರಹಿಪ್ಪರಿಗೆ ತಾಲೂಕಿಗೆ ಕಂದಾಯ ನಿರೀಕ್ಷಕ ಆನಂದ ಪಮ್ಮಾರ (ಮೊ:8277563932), ಇಂಡಿ ತಾಲೂಕಿಗೆ ಕಂದಾಯ ನಿರೀಕ್ಷಕ ಬಸವರಾಜ ರಾವೂರ (ಮೊ:9902552065), ಕೊಲ್ಹಾರ ತಾಲೂಕಿಗೆ ಕಂದಾಯ ನಿರೀಕ್ಷಕ ಬಿ.ಎಸ್.ಪಾಟೀಲ (ಮೊ:7676357795) ಹಾಗೂ ತಿಕೋಟಾ ತಾಲೂಕಿಗೆ ಕಂದಾಯ ನಿರೀಕ್ಷಕ ಮಾಜೀದ ಇನಾಮದಾರ (ಮೊ:9448210037) ಇವರನ್ನು ನಿಯೋಜಿಸಲಾಗಿದೆ.
ನಿಯೋಜಿತ ಆಯಾ ತಾಲೂಕಿನ ಮತಗಟ್ಟೆ ಸಿಬ್ಬಂದಿಗಳು ಅಕ್ಟೋಬರ್ 27ರಂದು ಬೆಳಿಗ್ಗೆ 6 ಗಂಟೆಯೊಳಗಾಗಿ ಬಸ್ ಬಿಡುವ ಸ್ಥಳದಲ್ಲಿ ಹಾಜರಾಗಬೇಕು. ಒಂದು ವೇಳೆ ನಿಗದಿತ ಸಮಯಕ್ಕೆ ಬಾರದಿದ್ದಲ್ಲಿ ಸಿಬ್ಬಂದಿಗಳು ತಾವೇ ನೇರವಾಗಿ ಬೆಳಿಗ್ಗೆ 8 ಗಂಟೆಯೊಳಗೆ ಮಸ್ಟರಿಂಗ್ ಕೇಂದ್ರಕ್ಕೆ ಹಾಜರಾಗಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌