Yatnal Family Voting: ಕುಟುಂಬ ಸಮೇತ ಬಂದು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮತದಾನ ಮಾಡಿದ ಶಾಸಕ ಯತ್ನಾಳ

ವಿಜಯಪುರ: ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ತಮ್ಮ ಮತದಾನ ಮಾಡಿದ್ದಾರೆ.

ವಿಜಯಪುರ ನಗರದ ಎಸ್ ಎಸ್ ಹೈಸ್ಕೂಲ್ ಲಿನಲ್ಲಿರುವ ಮತಗಟ್ಟೆಗೆ ಕುಟುಂಬ ಸಮೇತ ಆಗಮಿಸಿದ ಅವರು, ತಮ್ಮ ಹಕ್ಕು ಚಲಾಯಿಸಿದರು.  ಪತ್ನಿ ಸುಜಾತಾ, ಮಕ್ಕಳಾದ ರಾಮನಗೌಡ ಮತ್ತು ಆದರ್ಶಗೌಡ ಜೊತೆ ಆಗಮಿಸಿದ ಅವರು ಮತ ಚಲಾಯಿಸಿದರು.

ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಬಾರಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಜಯಪುರದಲ್ಲಿ ಮತದಾನದ ಬಳಿಯ ಶಾಸಕ ಯತ್ನಾಳ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು

ಅಭಿವೃದ್ಧಿ ಮತ್ತು ಹಿಂದುತ್ವ ವಿಚಾರಧಾರೆಯಡಿ ಮತ ಕೇಳಿದ್ದೇವೆ ಎಂದು ಹೇಳಿದ ಅವರು, ಮತದಾರರ ಪಟ್ಟಿಯಲ್ಲಿನ ಲೋಪದೋಷಗಳ ಕುರಿತು ಪ್ರತಿಕ್ರಿಯೆ ನೀಡಿದರು.

ಕೆಲವು ಮತದಾರ ಹೆಸರುಗಳು ಎರಡು ಮತ್ತು ಮೂರು ಕಡೆಗಳಲ್ಲಿ ಇವೆ.  ಈ ಹಿನ್ನೆಲೆಯಲ್ಲಿ ಅಂಥ ಮತದಾರರ ಹೆಸರನ್ನು ಕೇವಲ ಒಂದು ಪಟ್ಟಿಯಲ್ಲಿ ಮಾತ್ರ ಉಳಿಸಿದ್ದಾರೆ.  ಇದನ್ನು ಸರಿ ಪಡಿಸುವ ಕೆಲಸವನ್ನು ತಹಸೀಲ್ದಾರರು ಮಾಡುತ್ತಿದ್ದಾರೆ ಎಂದು ಹೇಳಿದರು.

ಈ ಬಾರಿ ಸ್ಪಷ್ಟ ಬಹುಮತದೊಂದಿಗೆ ವಿಜಯಪುರ ಮಹಾನಗರ ಪಾಲಿಕೆಯನ್ನು ಕೈವಶ ಮಾಡಿಕೊಂಡು ವಿಜಯಪುರ ನಗರವನ್ನು ಅಭಿವೃದ್ಧಿಯಲ್ಲಿ ಮಾದರಿಯನ್ನಾಗಿ ಮಾಡುತ್ತೇವೆ ಎಂದು ಯತ್ನಾಳ ಹೇಳಿದರು.

Leave a Reply

ಹೊಸ ಪೋಸ್ಟ್‌