Sunilgouda Patil Voting: ಎಂ ಎಲ್ ಸಿ ಸುನೀಲಗೌಡ ಪಾಟೀಲರಿಂದ ಮತದಾನ

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಗೆ ನಡೆಯುತ್ತಿರುವ ಚುನಾವಣೆಗೆ ಮತದಾನ ಬಿರುಸಿನಿಂದ ಸಾಗಿದ್ದು, ವಿಧಾನ ಪರಿಷತ ಕಾಂಗ್ರೆಸ್ ಸದಸ್ಯ ಸುನೀಲಗೌಡ ಪಾಟೀಲ ತಮ್ಮ ಹಕ್ಕು ಚಲಾಯಿಸಿದ್ದಾರೆ.

ವಿಜಯಪುರ ನಗರದ ವಾರ್ಡ ಸಂಖ್ಯೆ 11ರಲ್ಲಿ ಬರುವ ಮದ್ದಿನ ಖಣಿ ಬಳಿ ಇರುವ ಮತಗಟ್ಟೆಗಯಲ್ಲಿ ಸದರಿಯಲ್ಲಿ ನಿಂತ ಅವರು, ತಮ್ಮ ಪಾಳಿ ಬಂದ ನಂತರ ಮತದಾನ ಮಾಡಿದರು.

ಬಳಿಕ ಮಾತನಾಡಿದ ಅವರು, ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮತದಾನದ ಬಳಿಕ ಎಂಎಲ್‌ಸಿ ಸುನೀಲಗೌಡ ಪಾಟೀಲ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು

ಮತದಾರರ ಪಟ್ಟಿ ಗೊಂದಲ ವಿಚಾರ

ಇದೇ ವೇಳೆ, ವಿಜಯಪುರ ನಗರದ ನಾನಾ ಮತಗಟ್ಟೆಗಳಲ್ಲಿ ಮತದಾರರ ಹೆಸರುಗಳನ್ನು ಅಳಿಸಿ ಹಾಕಿರುವ ಮತ್ತು ಬೇರೆ ಬೇರೆ ವಾರ್ಡುಗಳ ವ್ಯಾಪ್ತಿಗೆ ಸೇರಿಸಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಮತದಾರರ ಪಟ್ಟಿಯಲ್ಲಿ ಕೆಲವು ಗೊಂದಲಾಗಿದ್ದು ಕಂಡು ಬಂದಿವೆ.  ಸಂಬಂಧಿಸಿದ ಅಧಿಕಾರಿಗಳು ಸಮಸ್ಯೆ ಬಗೆ ಹರಿಸಬೇಕು.  ಇಲ್ಲದಿದ್ದರೆ ಮತದಾನ ಸ್ಥಗಿತ ಮಾಡಬೇಕೆಂದು ಒತ್ತಾಯಿಸಿದರು.

Leave a Reply

ಹೊಸ ಪೋಸ್ಟ್‌