Health Checkup Camps: ಮಮದಾಪುರ, ಹೊರ್ತಿ, ಮನಗೂಳಿಯಲ್ಲಿ ಆರೋಗ್ಯ ತಪಾಸಣೆ ಬೃಹತ್ ಶಿಬಿರ- ನೂರಾರು ಜನರಿಗೆ ಚಿಕಿತ್ಸೆ
ವಿಜಯಪುರ: ಎಂ. ಬಿ. ಪಾಟೀಲ ಅವರು ಬರಪೀಡಿತ ಪ್ರದೇಶಕ್ಕೆ ನೀರು ಒದಗಿಸಿದ್ದಲ್ಲದೇ, ಬಿ. ಎಲ್. ಡಿ. ಇ ಆಸ್ಪತ್ರೆಯಿಂದ ಉಚಿತ ಆರೋಗ್ಯ ಶಿಬಿರ ಆಯೋಜಿಸಿ ಜನರಿಗೆ ಆರೋಗ್ಯ ಭಾಗ್ಯವನ್ನು ಕಲ್ಪಿಸುತ್ತಿದ್ದಾರೆ ಎಂದು ಮಮದಾಪುರ ವಿರಕ್ತಮಠದ ಪೂಜ್ಯ ಅಭಿನವ ಮುರುಘೇಂದ್ರ ಸ್ವಾಮೀಜಿ ಹೇಳಿದರು. ಬಬಲೇಶ್ವರ ತಾಲೂಕಿನ ಮಮದಾಪುರ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಎಂ. ಬಿ. ಪಾಟೀಲರು ಸಪ್ತ ಕೆರೆಗಳನ್ನು ತುಂಬಿಸಿದ್ದರಿಂದ ರೈತರಿಗೆ ಅನುಕೂಲ ಕಲ್ಪಿಸಿದ್ದಾರೆ. ಅಲ್ಲದೇ, ಗುಳೆ ಹೋಗುವದನ್ನು […]
Vote Counting: ವಾ. ನಂ. 15ರ ಫಲಿತಾಂಶ ಮೊದಲಿಗೆ ಪ್ರಕಟ- ವಾ. ನಂ. 21ರ ಫಲಿತಾಂಶ ಬಹುತೇಕ ಲಾಸ್ಟ್- ವಾರ್ಡವಾರು ಎಷ್ಟು ಸುತ್ತುಗಳ ಮತ ಎಣಿಕೆ ಗೊತ್ತಾ?
ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಗೆ ನಡೆದ ಚುನಾವಣೆ ಮತ ಎಣಿಕೆ ಅ. 31 ರಂದು ಸೋಮವಾರ ನಗರದ ದರಬಾರ ಹೈಸ್ಕೂಲ್ ಮತ ಎಣಿಕೆ ಕೇಂದ್ರದಲ್ಲಿ ನಡೆಯಲಿದೆ. ಈ ಮತ ಎಣಿಕೆಯಲ್ಲಿ ವಾರ್ಡ್ ಸಂಖ್ಯೆ 15ರ ಫಲಿತಾಂಶ ಬಹುತೇಕ ಮೊದಲಿಗೆ ಪ್ರಕಟವಾಗಲಿದೆ. ವಾರ್ಡ್ ಸಂಖ್ಯೆ 21ರ ಫಲಿತಾಂಶ ಬಹುತೇಕ ಕೊನೆಗೆ ಪ್ರಕಟವಾಗಲಿದೆ. ಇದಕ್ಕೆ ಏನು ಕಾರಣ ಎಂಬುದರ ಮಾಹಿತಿ ಇಲ್ಲಿದೆ. ಏಳು ಕೊಠಡಿಗಳಲ್ಲಿ ತಲಾ ಐದು ವಾರ್ಡುಗಳ ಮತ ಎಣಿಕೆ ಮತ ಎಣಿಕೆಗೆ ವಿಜಯಪುರ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು […]
Two Earthquakes: ಬಸವ ನಾಡಿನಲ್ಲಿ ಮತ್ತೆ ಎರಡು ಬಾರಿ ಭೂಕಂಪನ- ಎಲ್ಲಿ? ಯಾವಾಗ ಗೊತ್ತಾ?
ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪನ ಉಂಟಾಗಿದೆ. ಎರಡು ದಿನ ಈ ಭೂಕಂಪನ ಅನುಭವಕ್ಕೆ ಬಂದಿದೆ. ಶುಕ್ರವಾರ ರಾತ್ರಿ 9.47ಕ್ಕೆ ಈ ಭೂಕಂಪನ ಸಂಭವಿಸಿದ್ದು, ವಿಜಯಪುರ ನಗರ ಮತ್ತು ಮನಗೂಳಿ ಸುತ್ತಮುತ್ತ ಭೂಮಿ ಕಂಪಿಸಿದ ಅನುಭವವಾಗಿದೆ. ಮನಗೂಳಿಯಿಂದ ನೈರುತ್ಯ ಭಾಗದಲ್ಲಿ 3.9 ಕಿ. ಮೀ. ದೂರದಲ್ಲಿ ಭೂಕಂಪನದ ಕೇಂದ್ರಬಿಂದು ಪತ್ತೆಯಾಗಿದೆ. ರಿಕ್ಚರ್ ಮಾಪಕದಲ್ಲಿ 2.8 ತೀವ್ರತೆಯ ಭೂಕಂಪನ ಇದಾಗಿದ್ದು, ಭೂಮಿ 10 ಕಿ. ಮೀ. ಆಳದಲ್ಲಿ ಈ ಕಂಪನ ಉಂಟಾಗಿದೆ. ನಸುಕಿನ ಜಾವ ಮತ್ತೆ […]
Intelligent Girl: ವೋಟ್ ಹಾಕದಿದ್ರೆ ಅಪ್ಪನಿಗೆ ಹೇಳ್ತಿನಿ ಎಂದ ಬಿ. ಎಂ. ಪಾಟೀಲ ಶಾಲೆಯ ಬಾಲಕಿ- ಮಗಳ ಮತಪ್ರಜ್ಞೆಗೆ ಮೆಚ್ಚಿ ಹಕ್ಕು ಚಲಾಯಿಸಿದ ತಾಯಿ
ಮಹೇಶ ವಿ. ಶಟಗಾರ ವಿಜಯಪುರ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ದೇಶದ ಬೇರುಗಳನ್ನು ಗಟ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಯಾರಿಗೆ ವೋಟು ಹಾಕಿದರೇನು ಬಂತು? ವೋಟಿಂಗ್ ದಿನ ರಜೆಯಲ್ಲಿ ಮನೆಯಲ್ಲಿ ಕಾಲ ಕಳೆದರೆ ಸಾಕು ಎಂದು ಬಹಳಷ್ಟು ಜನ ತಮ್ಮ ಹಕ್ಕು ಚಲಾಯಿಸದೇ ಮನೆಯಲ್ಲಿಯೇ ಕುಳಿತುಕೊಂಡು ಇಲ್ಲವೇ ಬೇರೆ ಕಡೆಗೆ ಪ್ರವಾಸ ಮಾಡುತ್ತ ಎಂಜಾಯ್ ಮಾಡುತ್ತಾರೆ. ವಿಜಯಪುರ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಶೇ. 55.27 ರಷ್ಟು ಮತದಾರರು ಮಾತ್ರ ತಮ್ಮ ಹಕ್ಕು ಚಲಾಯಿಸಿದ್ದು, ಇನ್ನುಳಿದ ಶೇ. 44. 63 […]