Health Checkup Camps: ಮಮದಾಪುರ, ಹೊರ್ತಿ, ಮನಗೂಳಿಯಲ್ಲಿ ಆರೋಗ್ಯ ತಪಾಸಣೆ ಬೃಹತ್ ಶಿಬಿರ- ನೂರಾರು ಜನರಿಗೆ ಚಿಕಿತ್ಸೆ

ವಿಜಯಪುರ: ಎಂ. ಬಿ. ಪಾಟೀಲ ಅವರು ಬರಪೀಡಿತ ಪ್ರದೇಶಕ್ಕೆ ನೀರು ಒದಗಿಸಿದ್ದಲ್ಲದೇ, ಬಿ. ಎಲ್. ಡಿ. ಇ ಆಸ್ಪತ್ರೆಯಿಂದ ಉಚಿತ ಆರೋಗ್ಯ ಶಿಬಿರ ಆಯೋಜಿಸಿ ಜನರಿಗೆ ಆರೋಗ್ಯ ಭಾಗ್ಯವನ್ನು ಕಲ್ಪಿಸುತ್ತಿದ್ದಾರೆ ಎಂದು ಮಮದಾಪುರ ವಿರಕ್ತಮಠದ ಪೂಜ್ಯ ಅಭಿನವ ಮುರುಘೇಂದ್ರ ಸ್ವಾಮೀಜಿ ಹೇಳಿದರು.

ಬಬಲೇಶ್ವರ ತಾಲೂಕಿನ ಮಮದಾಪುರ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಎಂ. ಬಿ. ಪಾಟೀಲರು ಸಪ್ತ ಕೆರೆಗಳನ್ನು ತುಂಬಿಸಿದ್ದರಿಂದ ರೈತರಿಗೆ ಅನುಕೂಲ ಕಲ್ಪಿಸಿದ್ದಾರೆ.  ಅಲ್ಲದೇ, ಗುಳೆ ಹೋಗುವದನ್ನು ತಪ್ಪಿಸಿ, ಸ್ವಾವಲಂಬಿ ಜೀವನ ನಡೆಸಲು ದಾರಿ ಮಾಡಿಕೊಟ್ಟಿದ್ದಾರೆ.  ಜೊತೆಗೆ ಜನರಿಗೆ ಆರೋಗ್ಯ ಸೇವೆಯನ್ನು ಒದಗಿಸುತ್ತಿದ್ದಾರೆ.  ವಿಜಯಪುರ ಜನತೆಯೇ ಪುಣ್ಯ ಎಂದು ಅವರು ಹೇಳಿದರು.

ಮಮದಾಪುರ ಆರೋಗ್ಯ ಶಿಬಿರದಲ್ಲಿ ಅಭಿನವ ಮುರುಘೇಂದ್ರ ಸ್ವಾಮೀಜಿ ರಕ್ತದಾನ ಮಾಡಿದರು

ಈ ಶಿಬಿರದಲ್ಲಿ ಪೂಜ್ಯ ಅಭಿನವ ಮುರುಘೇಂದ್ರ ಸ್ವಾಮೀಜಿ ಹಾಗೂ ಬಿ. ಎಲ್. ಡಿ. ಇ ಸಂಸ್ಥೆಯ ನಿರ್ದೇಶಕ ಕುಮಾರ ದೇಸಾಯಿ ಜೈನಾಪುರ ಸೇರಿದಂತೆ 20ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡಿದರು.

ಈ ಸಂದರ್ಭದಲ್ಲಿ ಡಾ. ಆನಂದ ಪಾಟೀಲ, ಡಾ. ವಿಜಯಕುಮಾರ ವಾರದ, ಮುಖಂಡರಾದ ಎಚ್. ಬಿ. ಹರನಟ್ಟಿ ಕೊಡಬಾಗಿ, ಮಲ್ಲಿಕಾರ್ಜುನ ಗಂಗೂರ, ಲಕ್ಷ್ಮಣ ತೇಲಿ, ಸೋಮು ಬಿರಾದಾರ, ಎಂ. ಎಸ್. ರಾಜಂಗಳ, ಸಿದ್ದಪ್ಪ ಗಡಂಚಿ, ರಾಮು ನಾಯಕ, ಶಾಂತು ಜಂಬಗಿ, ಸದಾಶಿವ ಹೆಬ್ಬಿ, ಕಾಂತು ಪಾಟೀಲ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

 

ಹೋರ್ತಿಯಲ್ಲೂ ಬೃಹತ್ ಉಚಿತ ಆರೋಗ್ಯ ಶಿಬಿರ

ಗ್ರಾಮೀಣ ಜನರಿಗೆ ಆರೋಗ್ಯದ ಕುರಿತು ಜಾಗೃತಿ ಮೂಡಿಸಲು ಮತ್ತು ಆರೋಗ್ಯ ಸೇವೆ ಒದಗಿಸಲು ಬಿ. ಎಲ್. ಡಿ. ಇ ಆಸ್ಪತ್ರೆಯಿಂದ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸಿದ್ದು, ಸಾರ್ವಜನಿಕರು ಶಿಬಿರಗಳ ಪ್ರಯೋಜನೆ ಪಡೆದುಕೊಂಡು, ಇತರರಿಗೂ ತಿಳಿಸಬೇಕು ಎಂದು ಡಾ. ಎಸ್. ಎನ್. ಬೆಂಟೂರ ಹೇಳಿದರು.

ಇಂಡಿ ತಾಲೂಕಿನ ಹೊರ್ತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬೃಹತ್ ಆರೋಗ್ಯ ಶಿಬಿರದಲ್ಲಿ ಮಾತನಾಡಿದ ಅವರು, ಗ್ರಾಮೀಣ ಜನರಲ್ಲಿ ಆರೋಗ್ಯದಲ್ಲಿ ಏರುಪೇರಾದರೆ ಬೇಗನೆ ಅದಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ಔಷಧಿ ಅಂಗಡಿಗಳಲ್ಲಿ ನೇರವಾಗಿ ಮಾತ್ರೆಗಳನ್ನು ಖರೀದಿಸಿ, ತಾತ್ಕಾಲಿಕ ಆರೋಗ್ಯ ಸುಧಾರಣೆ ಮಾಡಿಕೊಳ್ಳುತ್ತಾರೆ. ಇದರ ಬದಲು ವೈದ್ಯರನ್ನು ಸಂಪರ್ಕಿಸಿ, ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ ಎಂದು ಹೇಳಿದರು.

350 ಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ ಮಾಡಲಾಯಿತು. 50 ಹೆಚ್ಚು ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆಗೆ ಬಿ.ಎಲ್.ಡಿ.ಇ ಆಸ್ಪತ್ರೆಗೆ ಶಿಫಾರಸ್ಸು ಮಾಡಲಾಯಿತು.

ಈ ಸಂದರ್ಭದಲ್ಲಿ ಜಿ. ಪಂ. ಮಾಜಿ ಸದಸ್ಯ ಮಹಾದೇವ ಪೂಜಾರಿ, ಹೊರ್ತಿ ಗ್ರಾ. ಪಂ. ಅಧ್ಯಕ್ಷ ಅಮಸಿದ್ಧ ಲೋಣಿ, ಉಪಾಧ್ಯಕ್ಷ ಜಯಶ್ರೀ ಬೋಸಗಿ ಸೇರಿದಂತೆ ಸದಸ್ಯರು, ಬಬಲಾದ, ನಿಂಬಾಳ, ಕೋಳುರಗಿ, ಬಸನಾಳ, ಹಡಲಸಂಗ, ಕಪನಿಂಬರಗಿ ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಭಾಗವಹಿಸಿದ್ದರು.

ಮನಗೂಳಿಯಲ್ಲಿಯೂ ಆರೋಗ್ಯ ಶಿಬಿರ

ಬಸವನ ಬಾಗೇವಾಡಿ ತಾಲೂಕಿನ ಮನಗೂಳಿಯ ಬಿ.ಎಸ್.ಪಾಟೀಲ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುವ ಬೃಹತ್ ಆರೋಗ್ಯ ಶಿಬಿರವನ್ನು ಮುಖಂಡರಾದ ರವಿಗೌಡ ಪಾಟೀಲ ಉದ್ಘಾಟಿಸಿದರು.

458ಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ ಮಾಡಲಾಯಿತು. 95 ಹೆಚ್ಚು ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆಗೆ ಬಿ. ಎಲ್. ಡಿ. ಇ. ಆಸ್ಪತ್ರೆಗೆ ಶಿಫಾರಸ್ಸು ಮಾಡಲಾಯಿತು.

ಡಾ. ಎಸ್. ಎಸ್. ಪಾಟೀಲ, ಡಾ. ರಾಕೇಶ ಬಳಮಕರ, ಡಾ. ಬಿ. ಎಂ. ಬಾಗೇವಾಡಿ, ಡಾ. ಬಸವರಾಜ ಪಾಟೀಲ, ಮುಖಂಡರಾದ ಬಾಪುರಾಯಗೌಡ ಯಾದವಾಡ, ವೀರಪ್ಪ ಹುಣಸಿಕಟ್ಟಿ, ನಾಗಪ್ಪ ಬನಹಟ್ಟಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌