ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಗೆ ನಡೆದ ಚುನಾವಣೆ ಮತ ಎಣಿಕೆ ಅ. 31 ರಂದು ಸೋಮವಾರ ನಗರದ ದರಬಾರ ಹೈಸ್ಕೂಲ್ ಮತ ಎಣಿಕೆ ಕೇಂದ್ರದಲ್ಲಿ ನಡೆಯಲಿದೆ.
ಈ ಮತ ಎಣಿಕೆಯಲ್ಲಿ ವಾರ್ಡ್ ಸಂಖ್ಯೆ 15ರ ಫಲಿತಾಂಶ ಬಹುತೇಕ ಮೊದಲಿಗೆ ಪ್ರಕಟವಾಗಲಿದೆ. ವಾರ್ಡ್ ಸಂಖ್ಯೆ 21ರ ಫಲಿತಾಂಶ ಬಹುತೇಕ ಕೊನೆಗೆ ಪ್ರಕಟವಾಗಲಿದೆ. ಇದಕ್ಕೆ ಏನು ಕಾರಣ ಎಂಬುದರ ಮಾಹಿತಿ ಇಲ್ಲಿದೆ.
ಏಳು ಕೊಠಡಿಗಳಲ್ಲಿ ತಲಾ ಐದು ವಾರ್ಡುಗಳ ಮತ ಎಣಿಕೆ
ಮತ ಎಣಿಕೆಗೆ ವಿಜಯಪುರ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಒಟ್ಟು 35 ವಾರ್ಡುಗಳ ಮತ ಎಣಿಕೆ ಕಾರ್ಯ ಏಳು ಕೊಠಡಿಗಳಲ್ಲಿ ನಡೆಯಲಿದೆ. ತಲಾ ಒಂದು ಕೊಠಡಿಯಲ್ಲಿ ಐದು ವಾರ್ಡುಗಳ ಮತ ಎಣಿಕೆ ನಡೆಯಲಿದೆ. ಈ ಮತ ಎಣಿಗೆಕೆ ಐದು ಟೇಬಲ್ ಗಳನ್ನು ಹಾಕಲಾಗಿದ್ದು, ಒಂದೊಂದು ಟೇಬಲ್ ಮೇಲೆ ಒಂದೊಂದು ವಾರ್ಡುಗಳ ಮತ ಎಣಿಕೆ ನಡೆಯಲಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಮಾಹಿತಿ ನೀಡಿದ್ದಾರೆ.
ಬೆ. 11ರೊಳಗೆ ಎಲ್ಲ ಫಲಿತಾಂಶ ಪ್ರಕಟ ನಿರೀಕ್ಷೆ
ಎಲ್ಲ ಅಂದುಕೊಂಡಂತೆ ನಡೆದರೆ ಬಹುತೇಕ 11 ಗಂಟೆಯೊಳಗೆ ಎಲ್ಲ ಫಲಿತಾಂಶ ಪ್ರಕಟವಾಗಲಿದೆ. ಈ ಮತ ಎಣಿಕೆಯಲ್ಲಿ ವಾರ್ಡ್ ಸಂಖ್ಯೆ 15ರ ಫಲಿತಾಂಶ ಮೊದಲಿಗೆ ಪ್ರಕಟವಾಗಲಿದೆ. ವಾರ್ಡ್ ಸಂಖ್ಯೆ 21ರ ಫಲಿತಾಂಶ ಬಹುತೇಕ ಕೊನೆಗೆ ಪ್ರಕಟವಾಗಲಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಮತ ಎಣಿಕೆ ಸುತ್ತುಗಳು. ವಾರ್ಡ್ ಸಂಖ್ಯೆ 15ರ ಮತ ಎಣಿಕೆ ಮೂರು ಸುತ್ತಗಳಲ್ಲಿ ಪೂರ್ಣಗೊಂಡರೆ ವಾರ್ಡ್ ಸಂಖ್ಯೆ 21ರ ಮತ ಎಣಿಕೆ 13 ಸುತ್ತುಗಳಲ್ಲಿ ಪೂರ್ಣವಾಗಲಿದೆ.
ಮತ ಎಣಿಕೆ ಅಧಿಕಾರಿ, ಸಿಬ್ಬಂದಿ ಮಾಹಿತಿ
ವಿಜಯಪುರ ಮಹಾನಗರ ಪಾಲಿಕೆಯ 35 ವಾರ್ಡಗಳ ಚುನಾವಣೆಯ ಮತ ಎಣಿಕೆ ಕಾರ್ಯಕ್ಕೆ 35 ಮತ ಎಣಿಕೆ ಮೇಲ್ವಿಚಾರಕರು, 35 ಮತ ಎಣಿಕೆ ಸಹಾಯಕರು, 7 ಜನ ಮತ ಎಣಿಕೆ ಡಾಟಾ ಎಂಟ್ರಿ ಮೇಲ್ವಿಚಾರಕರು, 7 ಜನ ಕಂಪ್ಯೂಟರ್ ಆಪರೇಟರ್, 35 ವಿದ್ಯುನ್ಮಾನ ಮತಯಂತ್ರಗಳನ್ನು ಸಾಗಿಸುವ ಸಿಬ್ಬಂದಿಗಳು ಹಾಗೂ ಇತರೆ ಕಾರ್ಯಗಳಿಗಾಗಿ 60 ಜನರು ಸೇರಿದಂತೆ 179 ಜನರನ್ನು ನಿಯೋಜಿಸಲಾಗಿದೆ.
ಪೊಲೀಸ್ ಬಂದೋಬಸ್ತ್
ಮತ ಎಣಿಕೆಗೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, 3 ಡಿವೈಎಸ್‍ಪಿ, 8 ಸಿಪಿಐ, 32 ಪಿಎಸ್‍ಐ, 35 ಎಎಸ್‍ಐ, 76 ಹೆಡ್ ಕಾನ್ಸಟೇಬಲ್, 128 ಪೊಲೀಸ್ ಕಾನ್ಸಟೇಬಲ್, 17 ಮಹಿಳಾ ಪೊಲೀಸ್ ಕಾನ್ಸಟೇಬಲ್, 4 ಐ.ಆರ್.ಬಿ. ಹಾಗೂ 6 ಡಿಎಆರ್ ತುಕಡಿಗಳನ್ನು ಪೊಲೀಸ್ ಇಲಾಖೆಯಿಂದ ನಿಯೋಜಿಸಲಾಗಿದೆ.
ಮತ ಎಣಿಕೆ ಕೇಂದ್ರ ಪ್ರವೇಶ
ಮತ ಎಣಿಕೆ ಕೇಂದ್ರದಲ್ಲಿ ಎಣಿಕೆ ಕಾರ್ಯಕ್ಕೆ ನಿಯೋಜಿಸಲಾದ ಅಧಿಕಾರಿ, ಸಿಬ್ಬಂದಿಗಳು, ರಾಜ್ಯ ಚುನಾವಣಾ ಆಯೋಗದಿಂದ ಅನುಮತಿ ಹೊಂದಿದ ವ್ಯಕ್ತಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಿಂದ ಅಧಿಕೃತ ಪಾಸ್ ಪಡೆದ ಮಾಧ್ಯಮದವರು, ಸ್ಪರ್ಧಿಸಿದ ಅಭ್ಯರ್ಥಿ, ಅವರ ಚುನಾವಣೆ ಏಜೆಂಟರು ಮತ್ತು ಮತ ಎಣಿಕೆ ಏಜೆಂಟರಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗಿದೆ.
ಪಾರ್ಕಿಂಗ್ ವ್ಯವಸ್ಥೆ
ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆ ದಿನದಂದು ಮತ ಎಣಿಕೆ ಕಾರ್ಯಕ್ಕೆ ನಿಯೋಜಿಸಲಾದ ಅಧಿಕಾರಿ, ಸಿಬ್ಬಂದಿಗಳು, ಅಭ್ಯರ್ಥಿ ಹಾಗೂ ಮತ ಎಣಿಕೆ ಏಜೆಂಟರುಗಳ ವಾಹನ ನಿಲುಗಡೆಗೆ ದರಬಾರ ಶಾಲೆಯ ಪಕ್ಕದಲ್ಲಿರುವ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಯಾವ ಕೊಠಡಿಯಲ್ಲಿ ಯಾವ ವಾರ್ಡು, ಎಷ್ಟು ಸುತ್ತಿನ ಮತ ಎಣಿಕೆ
ಕೊಠಡಿ ನಂ. 1ರಲ್ಲಿ ನಡೆಯುವ ವಾರ್ಡುಗಳ ಮತ ಎಣಿಕೆ ಮತ್ತು ಸುತ್ತುಗಳು
- 08
- 10
- 10
- 06
- 06
ಕೊಠಡಿ ನಂ. 2ರಲ್ಲಿ ನಡೆಯುವ ವಾರ್ಡುಗಳ ಮತ ಎಣಿಕೆ ಮತ್ತು ಸುತ್ತುಗಳು
- 06
- 12
- 12
- 06
- 07
ಕೊಠಡಿ ನಂ. 3ರಲ್ಲಿ ನಡೆಯುವ ವಾರ್ಡುಗಳ ಮತ ಎಣಿಕೆ ಮತ್ತು ಸುತ್ತುಗಳು
- 12
- 08
- 10
- 11
- 03
ಕೊಠಡಿ ನಂ. 4ರಲ್ಲಿ ನಡೆಯುವ ವಾರ್ಡುಗಳ ಮತ ಎಣಿಕೆ ಮತ್ತು ಸುತ್ತುಗಳು
- 10
- 06
- 12
- 09
- 11
ಕೊಠಡಿ ನಂ. 5ರಲ್ಲಿ ನಡೆಯುವ ವಾರ್ಡುಗಳ ಮತ ಎಣಿಕೆ ಮತ್ತು ಸುತ್ತುಗಳು
- 13
- 12
- 10
- 08
- 07
ಕೊಠಡಿ ನಂ. 6ರಲ್ಲಿ ನಡೆಯುವ ವಾರ್ಡುಗಳ ಮತ ಎಣಿಕೆ ಮತ್ತು ಸುತ್ತುಗಳು
- 05
- 07
- 09
- 10
- 09
ಕೊಠಡಿ ನಂ. 7ರಲ್ಲಿ ನಡೆಯುವ ವಾರ್ಡುಗಳ ಮತ ಎಣಿಕೆ ಮತ್ತು ಸುತ್ತುಗಳು
- 09
- 08
- 07
- 07
- 07
ಯಾವುದೇ ತಾಂತ್ರಿಕ ಮತ್ತೀತರೆ ಸಮಸ್ಯೆಗಳು ಎದುರಾಗದಿದ್ದರೆ ಮತ ಎಣಿಕೆ ಕಾರ್ಯ ಬೇಗನೆ ಮುಕ್ತಾಯವಾಗುವ ಸಾಧ್ಯತೆಗಳಿವೆ.