Two Earthquakes: ಬಸವ ನಾಡಿನಲ್ಲಿ ಮತ್ತೆ ಎರಡು ಬಾರಿ ಭೂಕಂಪನ- ಎಲ್ಲಿ? ಯಾವಾಗ ಗೊತ್ತಾ?

ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪನ ಉಂಟಾಗಿದೆ.  ಎರಡು ದಿನ ಈ ಭೂಕಂಪನ ಅನುಭವಕ್ಕೆ ಬಂದಿದೆ. 

ಶುಕ್ರವಾರ ರಾತ್ರಿ 9.47ಕ್ಕೆ ಈ ಭೂಕಂಪನ ಸಂಭವಿಸಿದ್ದು, ವಿಜಯಪುರ ನಗರ ಮತ್ತು ಮನಗೂಳಿ ಸುತ್ತಮುತ್ತ ಭೂಮಿ ಕಂಪಿಸಿದ ಅನುಭವವಾಗಿದೆ.

ಮನಗೂಳಿಯಿಂದ ನೈರುತ್ಯ ಭಾಗದಲ್ಲಿ 3.9 ಕಿ. ಮೀ. ದೂರದಲ್ಲಿ ಭೂಕಂಪನದ ಕೇಂದ್ರಬಿಂದು ಪತ್ತೆಯಾಗಿದೆ.  ರಿಕ್ಚರ್ ಮಾಪಕದಲ್ಲಿ 2.8 ತೀವ್ರತೆಯ ಭೂಕಂಪನ ಇದಾಗಿದ್ದು, ಭೂಮಿ 10 ಕಿ. ಮೀ. ಆಳದಲ್ಲಿ ಈ ಕಂಪನ ಉಂಟಾಗಿದೆ.

ನಸುಕಿನ ಜಾವ ಮತ್ತೆ ಭೂಕಂಪನ

ನಸುಕಿನ ಜಾವ 4.40ಕ್ಕೆ ಮತ್ತೆ ಭೂಕಪನ ಉಂಟಾಗಿದೆ.  ಈ ಭೂಕಂಪನದ ಕೇಂದ್ರ ಬಿಂದು ಹಂಚನಾಳ ಗ್ರಾಮದ ವಾಯವ್ಯ ಭಾಗದಲ್ಲಿ 2.8 ಕಿ. ಮೀ. ದೂರದಲ್ಲಿ ಪತ್ತೆಯಾಗಿದೆ.

ಇದೂ ಕೂಡ ರಿಕ್ಚರ್ ಮಾಪಕದಲ್ಲಿ 2.8 ತೀವ್ರತೆಯ ಭೂಕಂಪನ ದಾಖಲಾಗಿದ್ದು, ಭೂಮಿಯ ಒಳಗಡೆ 5 ಕಿ. ಮೀ. ಆಳದಲ್ಲಿ ಭೂಮಿ ಕಂಪಿಸಿದೆ.  ವಿಜಯಪುರ ನಗರ, ಹಂಚನಾಳ ಮತ್ತು ಸುತ್ತುಮತ್ತಲಿನ ಪ್ರದೇಶಗಳಲ್ಲಿ ಭೂಕಂಪನದ ಅನುಭವವಾಗಿದೆ.

ಪದೇ ಪದೇ ಊಂಟಾಗುತ್ತಿರುವ ಭೂಕಂಪನ ಗುಮ್ಮಟ ನಗರಿ ಜನತೆಯಲ್ಲಿ ಆತಂಕ ಮೂಡಿಸಿದೆ.  ಆದರೆ, ಇದು ಲಘು ಭೂಕಂಪನವಾಗಿದ್ದು, ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ವಿಜಯಪುರ ಜಿಲ್ಲಾಡಳಿತ ತಿಳಿಸಿದೆ.

Leave a Reply

ಹೊಸ ಪೋಸ್ಟ್‌