ವಿಜಯಪುರ: ವಿಜಯಪುರ-ಬಾಗಲಕೋಟ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲರ 50 ನೇ ಹುಟ್ಟುಹಬ್ಬವನ್ನು ಯುವ ಸಂಭ್ರಮ ಕಾರ್ಯಕ್ರಮವಾಗಿ ಆಚರಿಸಲು ಸಿದ್ಧತೆಗಳು ಪೂರ್ಣಗೊಂಡಿವೆ.
ಅ. 31 ರಂದು ಸೋಮವಾರ ಬೆ.11ಕ್ಕೆ ವಿಜಯಪುರ ನಗರದ ಬಿ. ಎಂ. ಪಾಟೀಲ ರಸ್ತೆಯಲ್ಲಿರುವ ಪಾಟೀಲ ಗಾರ್ಡೇನಿಯಾದಲ್ಲಿ ನಡೆಯುವ ಯುವ ಸಂಭ್ರದಲ್ಲಿ ಆರಂಭದಲ್ಲಿ ನಾನಾ ಜಾನಪದ ಕಲಾ ತಂಡಗಳು ಪ್ರದರ್ಶನ ನೀಡಲಿವೆ. ವೇದಿಕೆ ಕಾರ್ಯಕ್ರಮದಲ್ಲಿ ಖ್ಯಾತ ವಾಗ್ಮಿ ನಿಕೇತರಾಜ್ ಮೌರ್ಯ ಪ್ರದಾನ ಭಾಷಣ ಮಾಡಲಿದ್ದಾರೆ. ಮಮದಾಪುರ ವಿರಕ್ತಮಠದ ಶ್ರೀ ಅಭಿನವ ಮುರುಘೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ನಂತರ ಖ್ಯಾತ ಕಲಾವಿದ ಅಜೇಯ ವಾರಿಯರ್ ನೇತೃತ್ವದ ತಂಡ ಸಂಗೀತ ಕಾರ್ಯಕ್ರಮ ನಡೆಸಿ ಕೊಡಲಿದೆ.
ಯುಕರಿಗಾಗಿ 10 ಸಾವಿರ ಆಸನಗಳನ್ನು ಹಾಕಲಾಗಿದ್ದು, ಎಲ್ಲರಿಗೂ ಸ್ವಾದಿಷ್ಟ ಬೋಜನ ಸಿದ್ಧಪಡಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಯುವ ಸಂಭ್ರಮ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿ ಯುವಕರು ಸೇರಬಹುದು ಎಂದು ಅಂದಾಜು ಮಾಡಲಾಗಿದೆ.