Cabinet Protest Yatnal: ಸಿಎಂಗೆ ಸಚಿವ ಸಂಪುಟ ವಿಸ್ತರಣೆ ಇಷ್ಟವಿಲ್ಲ- ನನ್ನ ವಿರುದ್ಧ ಪ್ರತಿಭಟನೆ ಮುಂದುವರೆಸಿದರೆ ಅವರಿಗೆ ಹಿನ್ನೆಡೆ- ಶಾಸಕ ಯತ್ನಾಳ
ವಿಜಯಪುರ: ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆಯ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಆಸಕ್ತಿಯಿಲ್ಲ. ಇನ್ನೂ ಆರು ತಿಂಗಳು ಆರಾಮಾಗಿ ಕಳೆಯಬೇಕು ಎಂಬ ಉದ್ದೇಶ ಸಿಎಂ ಗಿದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. ವಿಜಯಪುರದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಮುಗಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. ವಿಜಯಪುರ ಜಿಲ್ಲೆಗೆ ಉತ್ತಮ ಸಚಿವರನ್ನು ಜಿಲ್ಲಾ ಉಸ್ತುವಾರಿಯಾಗಿ ನೇಮಕ ಮಾಡಬೇಕು ಎಂದು ಬೊಮ್ಮಾಯಿ ಅವರಿಗೆ ಹೇಳಿದ್ದೇನೆ. […]
Rajyotsava Inamadar: ರಾಜ್ಯೋತ್ಸವ ನಿತ್ಯೋತ್ಸವವಾಗಬೇಕು- ಡಾ. ಅರುಣ ಇನಾಮದಾರ
ವಿಜಯಪುರ: ಕನ್ನಡ ರಾಜ್ಯೋತ್ಸವ ಒಂದು ದಿನಕ್ಕೆ ಸೀಮತವಾಗದೇ ನಿತ್ಯೋತ್ಸವ ಆಗಬೇಕು ಎಂದು ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಪತಿ ಡಾ. ಅರುಣ ಇನಾಮದಾರ ಹೇಳಿದರು. ಬಿ ಎಲ್ ಡಿ ಇ ಡೀಮ್ಡ್ ವಿವಿಯಲ್ಲಿ ನಡೆದ 67ನೇ ಕರ್ನಾಟಕ ರಾಜ್ಯೋತ್ಸವವನ್ನು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕರ್ನಾಟಕದ ಏಕೀಕರಣಕ್ಕಾಗಿ ಶ್ರಮಿಸಿದ ಆಲೂರು ವೆಂಕಟರಾಯರು ಸೇರಿದಂತೆ ಇತರ ಮಹನೀಯರ ಕೊಡುಗೆ ಅನನ್ಯ. ಎಲ್ಲ ವೈದ್ಯಕೀಯ ವಿಭಾಗದ ವೈದ್ಯರು ರೋಗಿಗಳೊಂದಿಗೆ ಕನ್ನಡದಲ್ಲಿ ವ್ಯವಹರಿಸಬೇಕು ಎಂದು ಡಾ. ಅರುಣ ಇನಾಮದಾರ ಹೇಳಿದರು. […]
PSI Scam: ಪಿ ಎಸ್ ಐ ಹಗರಣ: ಕಲಬುರಗಿಯಲ್ಲಿ ಆರು ಚಾರ್ಜಶೀಟ್ ಸಲ್ಲಿಸಿದ ಪ್ರಕಾಶ ರಾಠೋಡ ನೇತೃತ್ವದ ಸಿಐಡಿ ತಂಡ
ವಿಜಯಪುರ: ಪಿ ಎಸ್ ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಡಿವೈಎಸ್ಪಿ ಪ್ರಕಾಶ ರಾಠೋಡ ನೇತೃತ್ವದ ಸಿಐಡಿ ತಂಡ 6 ಚಾರ್ಜಶೀಟ್ ಸಲ್ಲಿಸಿದೆ. ಕಲಬುರಗಿಯಲ್ಲಿ ಸುಮಾರು ಆರು ತಿಂಗಳು 20 ದಿನ ತನಿಖೆ ನಡೆಸಿದ ಈ ತಂಡ ಬ್ಲ್ಯೂಟೂಥ್ ಡಿವೈಸ್ ಬಳಕೆ ಮಾಡಿ ಅಕ್ರಮ ನಡೆಸಿರುವ ಕುರಿತು ಕಲಬುರಗಿ ನಗರದ ನಾನಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳ ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸಿದೆ. ಆರು ಚಾರ್ಜಶೀಟ್ ಗಳ ಮಾಹಿತಿ ಇಲ್ಲಿದೆ. 1. ಯುನಿವರ್ಸಿಟಿ […]
Niketraj Mourya: ನೀರಾವರಿ ಕ್ಷೇತ್ರದಲ್ಲಿ ಎಂ. ಬಿ. ಪಾಟೀಲ ರಾಜ್ಯದ ಇತಿಹಾಸದಲ್ಲಿ ಎಲ್ಲ ಸಚಿವರಿಗಿಂತ ಹೆಚ್ಚು ಕೆಲಸಗಳನ್ನು ಮಾಡಿದ್ದಾರೆ- ನಿಕೇತರಾಜ ಮೌರ್ಯ
ವಿಜಯಪುರ: ಕರ್ನಾಟಕದ ಇತಿಹಾಸದಲ್ಲಿ ಜಲಸಂಪನ್ಮೂಲ ಸಚಿವರಾಗಿ ಎಂ.ಬಿ.ಪಾಟೀಲರು ಈ ಹಿಂದೆ ಯಾರೂ ಮಾಡದಷ್ಟು ನೀರಾವರಿ ಕೆಲಸಗಳನ್ನು ಮಾಡುವ ಮೂಲಕ ಛಾಪು ಮೂಡಿಸಿದ್ದಾರೆ. ಇದು ರಾಜಕಾರಣಿಯಾಗಿ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳ ಒಂದು ಮುಖವಾದರೆ, ಫ.ಗು.ಹಳಕಟ್ಟಿ, ಆದಿಲಶಾಹಿ ಮತ್ತು ಡಾ. ಎಂ.ಎಂ.ಕಲಬುರ್ಗಿ ಕುರಿತ ಸಂಪುಟಗಳನ್ನು ಕನ್ನಡ ಸೇರಿದಂತೆ ನಾನಾ ಭಾμÉಗಳಿಗೆ ಅನುವಾದ ಮಾಡಿ ಪ್ರಕಟ ಮಾಡುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೂ ಅಮೋಘ ಕೊಡುಗೆ ನೀಡಿದ್ದಾರೆ ಎಂದು ಖ್ಯಾತ ವಾಗ್ಮಿ ನಿಕೇತರಾಜ ಮೌರ್ಯ ಹೇಳಿದರು. ವಿಜಯಪುರದಲ್ಲಿ ವಿಧಾನ ಪರಿಷತ್ ಸದಸ್ಯ […]