Niketraj Mourya: ನೀರಾವರಿ ಕ್ಷೇತ್ರದಲ್ಲಿ ಎಂ. ಬಿ. ಪಾಟೀಲ ರಾಜ್ಯದ ಇತಿಹಾಸದಲ್ಲಿ ಎಲ್ಲ ಸಚಿವರಿಗಿಂತ ಹೆಚ್ಚು ಕೆಲಸಗಳನ್ನು ಮಾಡಿದ್ದಾರೆ- ನಿಕೇತರಾಜ ಮೌರ್ಯ

ವಿಜಯಪುರ: ಕರ್ನಾಟಕದ ಇತಿಹಾಸದಲ್ಲಿ ಜಲಸಂಪನ್ಮೂಲ ಸಚಿವರಾಗಿ ಎಂ.ಬಿ.ಪಾಟೀಲರು ಈ ಹಿಂದೆ ಯಾರೂ ಮಾಡದಷ್ಟು ನೀರಾವರಿ ಕೆಲಸಗಳನ್ನು ಮಾಡುವ ಮೂಲಕ ಛಾಪು ಮೂಡಿಸಿದ್ದಾರೆ.  ಇದು ರಾಜಕಾರಣಿಯಾಗಿ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳ ಒಂದು ಮುಖವಾದರೆ, ಫ.ಗು.ಹಳಕಟ್ಟಿ, ಆದಿಲಶಾಹಿ ಮತ್ತು ಡಾ. ಎಂ.ಎಂ.ಕಲಬುರ್ಗಿ ಕುರಿತ ಸಂಪುಟಗಳನ್ನು ಕನ್ನಡ ಸೇರಿದಂತೆ ನಾನಾ ಭಾμÉಗಳಿಗೆ ಅನುವಾದ ಮಾಡಿ ಪ್ರಕಟ ಮಾಡುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೂ ಅಮೋಘ ಕೊಡುಗೆ ನೀಡಿದ್ದಾರೆ ಎಂದು ಖ್ಯಾತ ವಾಗ್ಮಿ ನಿಕೇತರಾಜ ಮೌರ್ಯ ಹೇಳಿದರು.

ವಿಜಯಪುರದಲ್ಲಿ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿದ್ದ ಯುವ ಸಂಭ್ರಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಇಂಥ ಒಳ್ಳೆಯ ಕೆಲಸ ಮಾಡುವ ವ್ಯಕ್ತಿಗಳ ಪರ ಯುವಕರು ಪಕ್ಷಾತೀತವಾಗಿ ನಿಲ್ಲಬೇಕು. ಎಂ.ಬಿ.ಪಾಟೀಲರು ಕೇವಲ ಪ್ರಬಲ ರಾಜಕಾರಣಿಯμÉ್ಟೀ ಅಲ್ಲ ಅಭಿವೃದ್ಧಿಯ ಕನಸುಗಾರರಾಗಿದ್ದಾರೆ ಎಂದು ಅವರು ಹೇಳಿದರು.

ಇತ್ತೀಚಿನ ದಿನಗಳಲ್ಲಿ ದೇಶಪ್ರೇಮ ಎಂಬುದು ರಾಜಕಾರಣಿಗಳ ಸರಕು ಆಗಿದೆ. ಡೊಂಬರಾಟದ ಭಾಷಣ ದೇಶಪ್ರೇಮ ಎಂಬತಾಗಿದೆ. ಧರ್ಮಗಳ ಮಧ್ಯೆ ಗೋಡೆ ಕಟ್ಟುವವರು ದೇಶದ್ರೋಹಿಗಳು. ಸೇತುವೆ ನಿರ್ಮಿಸುವವರು ದೇಶಪ್ರೇಮಿಗಳು. ದೇಶವನ್ನು ಕಟ್ಟಲು ಜಾತಿ ಮತ್ತು ಧರ್ಮ ಮೆಟ್ಟಿ ನಿಲ್ಲಬೇಕು. ಆದರೆ ಈಗಿನ ವ್ಯವಸ್ಥೆಗಳು ಉದ್ಯಮಪತಿಗಳ ಪರ ಕಾರ್ಯನಿರ್ವಹಿಸುತ್ತಿರುವುದು ವಿಪರ್ಯಾಸವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇರುವ ಸುಳ್ಳು ವಿಷಯಗಳನ್ನು ನೋಡಿ ರಾಷ್ಟ್ರನಾಯಕರನ್ನು ಅವಮಾನಿಸುವ ಪ್ರವೃತ್ತಿ ಹೆಚ್ಚುತ್ತಿದೆ. ಭಾರತ ಮಾತಾ ಕೀ ಜೈ ಎನ್ನುವುದು ಮಾತ್ರ ದೇಶಪ್ರೇಮವಲ್ಲ ಪ್ರತಿಯೊಬ್ಬ ಭಾರತೀಯರನ್ನು ಪ್ರೀತಿಸುವುದು ನಿಜವಾದ ದೇಶಪ್ರೇಮ ಎಂದು ಅವರು ಹೇಳಿದರು.

ವ್ಯಕ್ತಿಯ ಸನ್ನಡತೆಯಿಂದ ಅವರ ವ್ಯಕ್ತಿತ್ವ ನಿರ್ಮಾಣವಾಗುತ್ತದೆ ಹೊರತು ಜಾತಿಯಿಂದಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದ್ದು, ಭಾರತ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ವಿಶ್ವದಲ್ಲಿ ಸಾಕಷ್ಟು ಸಾಧನೆ ಮಾಡಿದೆ. ಆದರೆ ನಮ್ಮ ಟಿವಿ ಮಾಧ್ಯಮಗಳು ಈಗಲೂ ಕೂಡ ಜ್ಯೋತಿಷ್ಯದ ಹೆಸರಿನಲ್ಲಿ ಮೌಢ್ಯಗಳನ್ನು ಬಿತ್ತರಿಸುತ್ತಿವೆ. 12ನೇ ಶತಮಾನದ ಬಸವಣ್ಣ ಮತ್ತು ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ ಅವರ ಬೋಧನೆಗಳು ನಮಗೆ ಮಾದರಿಯಾಗಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಯ ಅಭ್ಯುದ್ಯಯಕ್ಕೆ ಅವರು ಪ್ರತಿಪಾಧಿಸಿದ ಚಿಂತನೆಗಳು ನಮಗೆ ಪ್ರೇರಣೆಯಾಗಬೇಕು. ಸ್ವಾಮಿ ವಿವೇಕಾನಂದರ ಆದರ್ಶಗಳು ನಮಗೆ ಮಾದರಿಯಾಗಿವೆ ಎಂದು ಅವರು ನಿಕೇತರಾಜ ಮೌರ್ಯ ಹೇಳಿದರು.
ಈ ಸಂದರ್ಭದಲ್ಲಿ ಸುನೀಲಗೌಡ ಪಾಟೀಲ, ಮಮದಾಪುರ ವಿರಕ್ತಮಠದ ಅಭಿನವ ಮುರುಘೇಂದ್ರ ಶ್ರೀಗಳು, ಹೊಳೆಬಬಲಾದಿ ಮಠದ ಶ್ರೀ ಅಪ್ಪಯ್ಯ ಹಿರೇಮಠ ಸ್ವಾಮೀಜಿ, ಸಂಗಮೇಶ ಬಬಲೇಶ್ವರ, ತಮ್ಮಣ್ಣ ಹಂಗರಗಿ,  ಮುಖಂಡರಾದ ಎನ್.ಎಸ್.ಅಳ್ಳೊಳ್ಳಿ, ಬಸವರಾಜ ದೇಸಾಯಿ, ಕುಮಾರ ದೇಸಾಯಿ ಜೈನಾಪುರ, ಸೋಮನಾಥ ಬಾಗಲಕೋಟ, ವಿ.ಎಸ್.ಪಾಟೀಲ, ಶ್ರೀಶೈಲಗೌಡ ಪಾಟೀಲ ನಿಡೋಣಿ, ಅರ್ಜುನ ಹಿರು ರಾಠೋಡ, ಸುಭಾಷ ಛಾಯಾಗೋಳ, ಬಾಪುಗೌಡ ಪಾಟೀಲ ಶೇಗುಣಸಿ, ಸಿದ್ಧಣ್ಣ ಸಕ್ರಿ, ಬಿ.ಎಲ್.ಡಿ.ಇ. ಸಂಸ್ಥೆಯ ನಿರ್ದೇಶಕ ಬಸನಗೌಡ ಪಾಟೀಲ, ಹಮೀದ್ ಮುಶ್ರಿಫ್, ಆನಂದ ದೊಡಮನಿ, ಮೊಹಮ್ಮದ ಕಪಾಲ ಎಂಜಿನಿಯರ, ನಾಗರಾಜ ಹದ್ದಿ, ಜುಗುನು ಮಹಾರಾಜ, ಮಧು ಸಾಹುಕಾರ ಜಾದವ, ಮುತ್ತಣ್ಣ ಶಿವಣ್ಣವರ, ಆರ್.ಜಿ.ಯರನಾಳ, ಸುನೀಲಗೌಡ ಪಾಟೀಲ ಅವರ ಕುಟುಂಬ ಸದಸ್ಯರು. ಮುಂತಾದವರು ಉಪಸ್ಥಿತರಿದ್ದರು.

ಡಾ. ಮಹಾಂತೇಶ ಬಿರಾದಾರ ಸ್ವಾಗತಿಸಿದರು. ಶಂಕರ ಸಿದರೆಡ್ಡಿ ಪ್ರಾರ್ಥಿಸಿದರು. ಪ್ರಶಾಂತ ಜಂಡೆ ಮತ್ತು ನಾಗಪ್ಪ ಹೊಳೆಪ್ಪಗೋಳ ನಿರೂಪಿಸಿದರು. ಸೋಮನಾಥ ಕಳ್ಳಿಮನಿ ವಂದಿಸಿದರು.

Leave a Reply

ಹೊಸ ಪೋಸ್ಟ್‌