ವಿಜಯಪುರ: ಪಿ ಎಸ್ ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಡಿವೈಎಸ್ಪಿ ಪ್ರಕಾಶ ರಾಠೋಡ ನೇತೃತ್ವದ ಸಿಐಡಿ ತಂಡ 6 ಚಾರ್ಜಶೀಟ್ ಸಲ್ಲಿಸಿದೆ.
ಕಲಬುರಗಿಯಲ್ಲಿ ಸುಮಾರು ಆರು ತಿಂಗಳು 20 ದಿನ ತನಿಖೆ ನಡೆಸಿದ ಈ ತಂಡ ಬ್ಲ್ಯೂಟೂಥ್ ಡಿವೈಸ್ ಬಳಕೆ ಮಾಡಿ ಅಕ್ರಮ ನಡೆಸಿರುವ ಕುರಿತು ಕಲಬುರಗಿ ನಗರದ ನಾನಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳ ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸಿದೆ.
ಆರು ಚಾರ್ಜಶೀಟ್ ಗಳ ಮಾಹಿತಿ ಇಲ್ಲಿದೆ.
1. ಯುನಿವರ್ಸಿಟಿ ಪೊಲೀಸ್ ಠಾಣೆ
ದಾಖಲಾಗಿದ್ದ ದೂರು ಸಂಖ್ಯೆ- 182/2022
ಚಾರ್ಜಶೀಟ್ ಪುಟಗಳ ಸಂಖ್ಯೆ- 626
ಆರೋಪಿಗಳ ಸಂಖ್ಯೆ- 3
ಸಂಗ್ರಹಿಸಲಾದ ದಾಖಲೆಗಳು- 71
ಸಾಕ್ಷಿ ನುಡಿದವರ ಸಂಖ್ಯೆ- 39.
2. ಅಶೋಕ ನಗರ ಪೊಲೀಸ್ ಠಾಣೆ
ದಾಖಲಾಗಿದ್ದ ದೂರು ಸಂಖ್ಯೆ- 92/22
ಚಾರ್ಜಶೀಟ್ ಪುಟಗಳ ಸಂಖ್ಯೆ- 1318
ಆರೋಪಿಗಳ ಸಂಖ್ಯೆ- 4
ಸಂಗ್ರಹಿಸಲಾದ ದಾಖಲೆಗಳು- 112
ಸಾಕ್ಷಿ ನುಡಿದವರ ಸಂಖ್ಯೆ- 84
3. ಅಶೋಕ ನಗರ ಪೊಲೀಸ್ ಠಾಣೆ
ದಾಖಲಾಗಿದ್ದ ದೂರು ಸಂಖ್ಯೆ- 96/2022
ಚಾರ್ಜಶೀಟ್ ಪುಟಗಳ ಸಂಖ್ಯೆ- 788
ಆರೋಪಿಗಳ ಸಂಖ್ಯೆ- 6
ಸಂಗ್ರಹಿಸಲಾದ ದಾಖಲೆಗಳು- 123
ಸಾಕ್ಷಿ ನುಡಿದವರ ಸಂಖ್ಯೆ- 35
4. ಅಶೋಕ ನಗರ ಪೊಲೀಸ್ ಠಾಣೆ
ದಾಖಲಾಗಿದ್ದ ದೂರು ಸಂಖ್ಯೆ- 98/2022
ಚಾರ್ಜಶೀಟ್ ಪುಟಗಳ ಸಂಖ್ಯೆ- 1048
ಆರೋಪಿಗಳ ಸಂಖ್ಯೆ- 4
ಸಂಗ್ರಹಿಸಲಾದ ದಾಖಲೆಗಳು- 146
ಸಾಕ್ಷಿ ನುಡಿದವರ ಸಂಖ್ಯೆ- 66
5. ಅಶೋಕ ನಗರ ಪೊಲೀಸ್ ಠಾಣೆ
ದಾಖಲಾಗಿದ್ದ ದೂರು ಸಂಖ್ಯೆ- 99/2022
ಚಾರ್ಜಶೀಟ್ ಪುಟಗಳ ಸಂಖ್ಯೆ- 988
ಆರೋಪಿಗಳ ಸಂಖ್ಯೆ- 4
ಸಂಗ್ರಹಿಸಲಾದ ದಾಖಲೆಗಳು- 133
ಸಾಕ್ಷಿ ನುಡಿದವರ ಸಂಖ್ಯೆ- 60
6. ಸ್ಟೇಷನ್ ಬಜಾರ್ ಪೊಲೀಸ್ ಠಾಣೆ
ದಾಖಲಾಗಿದ್ದ ದೂರು ಸಂಖ್ಯೆ- 57/2022
ಚಾರ್ಜಶೀಟ್ ಪುಟಗಳ ಸಂಖ್ಯೆ- 888
ಆರೋಪಿಗಳ ಸಂಖ್ಯೆ- 10
ಸಂಗ್ರಹಿಸಲಾದ ದಾಖಲೆಗಳು- 97
ಸಾಕ್ಷಿ ನುಡಿದವರ ಸಂಖ್ಯೆ- 34
ಈ ಕೇಸುಗಳ ವಿಚಾರಣೆ ನಡೆಸುತ್ರಿರುವ ಕಲಬುರಗಿಯ 3ನೇ ಹೆಚ್ಚುವರಿ ಸಿಜೆ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯ, ಪ್ರಿನ್ಸಿಪಲ್ ಸಿಜೆ ಆ್ಯಂಡ್ ಜೆ ಎಂ ಎಫ್ ಸಿ ಕೋರ್ಟ್ ಹಾಗೂ 5ನೇ ಹೆಚ್ಚುವರಿ ಸಿಜೆ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯಗಳಿಗೆ ಸಿಐಡಿ ಅಧಿಕಾರಿಗಳ ತಂಡ ಆರೋಪ ಪಟ್ಟಿ ಸಲ್ಲಿಸಿದೆ.
ಅಷ್ಟೇ ಅಲ್ಲ, ಈ ಪ್ರಕರಣ ಸಂಬಂಧ ನಾಪತ್ತೆಯಾಗಿರುವ ಆರೋಪಿಗಳ ಪತ್ತೆ ಕಾರ್ಯವನ್ನು ಈ ತಂಡ ಮುಂದುವರೆಸಿದೆ ಎಂದು ಸಿಐಡಿ ಮೂಲಗಳು ಬಸವ ನಾಡು ವೆಬ್ ಗೆ ಮಾಹಿತಿ ನೀಡಿವೆ.