Sports Devanand Chavan: ದೈಹಿಕ, ಮಾನಸಿಕ ವಿಕಾಸಕ್ಕೆ ಕ್ರೀಡೆ ಸಹಕಾರಿ-ಶಾಸಕ ಡಾ. ದೇವಾನಂದ ಚವ್ಹಾಣ

ವಿಜಯಪುರ: ಕ್ರೀಡಾ ಚಟುವಟಿಕೆಗಳು ದೈಹಿಕ, ಮಾನಸಿಕ ಹಾಗೂ ಬೌದ್ಧಿಕ ವಿಕಾಸಕ್ಕೆ ಅತಿಮುಖ್ಯವಾಗಿವೆ ಎಂದು ನಾಗಠಾಣ(ಮೀ) ಜೆಡಿಎಸ್ ಶಾಸಕ ಡಾ. ದೇವಾನಂದ ಚವ್ಹಾಣ ಹೇಳಿದ್ದಾರೆ.

ವಿಜಯಪುರ ನಗರದ ಡಾ. ಬಿ. ಆರ್. ಅಂಬೇಡ್ಕರ ಜಿಲ್ಲಾ ಕ್ರೀಡಾಂಗಣದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ವಿಜಯಪುರದ ಎಸ್. ಕೆ. ವಿ. ಎಂ. ಎಸ್. ಪಿಯು ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ 2022-23ನೇ ವರ್ಷದ ರಾಜ್ಯಮಟ್ಟದ ಪದವಿ ಪೂರ್ವ ಕಾಲೇಜುಗಳ ಟೈಕ್ವಾಂಡೋ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರೂ.

ಕ್ರೀಡಾಕೂಟ ಉದ್ಘಾಟಿಸಿ ಜೆಡಿಎಸ್ ಶಾಸಕ ಡಾ. ದೇವಾನಂದ ಚವ್ಹಾಣ ಮಾತನಾಡಿದರು

ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಉತ್ತಮ ಆರೋಗ್ಯ ದೊರಕುತ್ತದೆ.  ಮಾಸಿಕವಾಗಿಯೂ ಸದೃಢಗೊಳ್ಳಲು ಸಹಕಾರಿಯಾಗುತ್ತದೆ ಎಂದು ಅವರು ಡಾ. ದೇವಾನಂದ ಚವ್ಹಾಣ ಹೇಳಿದರು.

ಈ ಸ್ಪರ್ಧೆಯಲ್ಲಿ 16 ನಾನಾ ಜಿಲ್ಲೆಗಳ ಬಾಲಕ ಹಾಗೂ 11 ನಾನಾ ಜಿಲ್ಲೆಗಳ ಬಾಲಕಿಯರ ತಂಡಗಳು ಪಾಲ್ಗೋಂಡಿದ್ದು, ಒಟ್ಟಾರೆ 230 ಬಾಲಕರು ಹಾಗೂ 130 ಬಾಲಕಿಯರು ಭಾಗವಹಿಸಿದ್ದಾರೆ.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿಬಿಪಿಎಚ್‍ಡಬ್ಲೂ ಸಂಸ್ಥೆಯ ಖಜಾಂಚಿ ವಿನೋದ ಖೇಡ ವಹಿಸಿದ್ದರು.  ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್. ಎನ್. ಬಗಲಿ, ವಿಕಾಶ ಖೇಡ, ಎಸ್. ಎಸ್. ಗೌರಿ, ವಿಜಯಕುಮಾರ ರಾಠೋಡ, ಎಂ. ಡಿ. ಹೆಬ್ಬಿ, ಜೆ. ಆರ್. ಕುಲಕರ್ಣಿ, ಕೆ. ಎ. ಉಪ್ಪಾರ, ಕೆ. ಜಿ. ಲಮಾಣಿ, ಎಸ್. ಬಿ. ಗೋಗಿ, ಸಿ. ಬಿ. ನಾಟಿಕಾರ, ಬಿ. ಐ. ಗಂಗನಹಳ್ಳಿ, ಜಿ. ಡಿ. ಅಂಕಮಂಚಿ, ಎಸ್. ಆರ್. ಮುತ್ತಗಿ, ಸಿ. ಕೆ. ಹೊಸಮನಿ, ಬಿ. ಬಿ. ಚವ್ಹಾಣ ಹಾಗೂ ಬಿ. ಟಿ. ಗೊಂಗಡಿ ಸೇರಿದಂತೆ ಜಿಲ್ಲೆಯ ನಾನಾ ಪಿಯು ಕಾಲೇಜುಗಳ ಪ್ರಾಚಾರ್ಯರು, ಉಪನ್ಯಾಸಕರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌