KUWJ Conference: ಕಾರ್ಯನಿರತ ಪತ್ರಕರ್ತರಕ್ಕೆ ನಾನಾ ಸಮಿತಿಗಳ ರಚನೆ- ಕಾರ್ಯಕ್ರಮ ಯಶಸ್ಸಿಗೆ ಪೂರ್ವಭಾವಿ ಸಭೆ

ವಿಜಯಪುರ: ಬಸವ ನಾಡು ವಿಜಯಪುರದಲ್ಲಿ ನಡೆಯಲಿರುವ ಪತ್ರಕರ್ತರ 37 ನೇ ರಾಜ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ನಾನಾ ಸಮಿತಿಗಳನ್ನು ರಚನೆ ಮಾಡಲಾಗಿದೆ. 

ಈ ಹಿನ್ನೆಲೆಯಲ್ಲಿ ನಗರದ ಪತ್ರಿಕಾ ಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ಮತ್ತು ಕಾನಿಪ ಜಿಲ್ಲಾ ಸಲಹಾ ಸಮಿತಿ ಸದಸ್ಯ ಗೋಪಾಲ ನಾಯಕ, ವಿಜಯಪುರದಲ್ಲಿ ನಡೆಸಲು ಅವಕಾಶ ದೊರೆತಿದ್ದು ಹೆಮ್ಮೆಯ ವಿಷಯ.  ಜಿಲ್ಲೆಯ ಎಲ್ಲ ಪತ್ರಕರ್ತರು ಒಗ್ಗೂಡಿ ಈ ಸಮ್ಮೇಳನ ಯಶಸ್ವಿಗೊಳಿಸಬೇಕು ಎಂದು ಹೇಳಿದರು.

ಹಿರಿಯ ಪತ್ರಕರ್ತ ಗೋಪಾಲ ನಾಯಕ ಮಾತನಾಡಿದರು

ಸಮ್ಮೇಳನದ ಸಿದ್ಧತೆಗೆ ರಚಿಸಲಾದ ನಾನಾ ಸಮಿತಿಗಳ ಸದಸ್ಯರು ತಮ್ಮ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕು.  ಇಂದಿನಿಂದಲೇ ಎಲ್ಲರೂ ಸಮ್ಮೇಳನದ ಸಿದ್ಧತೆಯಲ್ಲಿ ತೊಡಗಬೇಕು.  ಪತ್ರಕರ್ತರು ತಮ್ಮ ದೈನಂದಿನ ಕೆಲಸದ ಜೊತೆಗೆ ಸಮ್ಮೇಳನದ ಕೆಲಸಕ್ಕೂ ಸಮಯ ಮತ್ತು ಶಕ್ತಿಯನ್ನು ವಿನಿಯೋಗಿಸಬೇಕು ಎಂದು ಗೋಪಾಲ ನಾಯಕ ಹೇಳಿದರು.

ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ ಮಾತನಾಡಿ, ಮುದ್ರಣ ಹಾಗೂ ದೃಶ್ಯ ಮಾಧ್ಯಮ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.  ಎರಡೂ ಮಾಧ್ಯಮಗಳಲ್ಲಿ ಕೆಲಸ ಮಾಡುವ ಎಲ್ಲ  ಪತ್ರಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿ ಸಮ್ಮೇಳನ ಯಶಸ್ವಿಗೊಳಿಸಿ ಬಸವ ನಾಡಿನ ಕೀರ್ತಿ ಹೆಚ್ಚಿಸಬೇಕು ಎಂದು ಹೇಳಿದರು.

ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ ಮಾತನಾಡಿದರು

ಜಿಲ್ಲೆಯಲ್ಲಿ ನಡೆಯುತ್ತಿರುವ ಈ ಸಮ್ಮೇಳನ ನಮ್ಮ ಮನೆಯ ಕಾರ್ಯಕ್ರಮ, ನಮ್ಮ ಮನೆಗೆ ಅತಿಥಿಗಳು ಬಂದಿದ್ದಾರೆ ಎಂಬ ಭಾವದೊಂದಿಗೆ ಸಮ್ಮೇಳನದ ಸಿದ್ಧತೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು.  ಎಲ್ಲರೂ ಆರಂಭದಿಂದ ಕೊನೆಯವರೆಗೂ ಉತ್ಸಾಹದಿಂದ, ಪರಸ್ಪರ ಸಹಕಾರ ಹಾಗೂ ಸಮನ್ವಯತೆಯಿಂದ ಕೆಲಸ ಮಾಡಿದಾಗ ಮಾತ್ರ ಸಮ್ಮೇಳನ ಸಂಪೂರ್ಣ ಯಶಸ್ವಿಯಾಗುತ್ತದೆ ಎಂದು ಸಂಗಮೇಶ ಟಿ. ಚೂರಿ ಹೇಳಿದರು.

ಈ ಸಮ್ಮೇಳನದ ಯಶಸ್ವಿಗಾಗಿ ಹಣಕಾಸು ಸಮಿತಿ, ವಸತಿ ಸಮಿತಿ, ಆಹಾರ ಸಮಿತಿ, ಪ್ರಚಾರ ಸಮಿತಿ, ಸಾರಿಗೆ ಸಮಿತಿ, ವೇದಿಕೆ ಸಮಿತಿ, ಸಾಂಸ್ಕೃತಿಕ ಕಾರ್ಯಕ್ರಮ ಸಮಿತಿ, ಸ್ಮರಣ ಸಂಚಿಕೆ ಸಮಿತಿ ಮತ್ತಿತರ ಸಮಿತಿಗಳನ್ನು ರಚಿಸಲಾಯಿತು.

ಸಮ್ಮೇಳನದ ಸ್ಥಳ ಆಯ್ಕೆ, ದಿನಾಂಕ ನಿಗದಿ, ಅನುದಾನ ಕ್ರೋಡೀಕರಿಸುವುದು ಸೇರಿದಂತೆ ನಾನಾ ವಿಷಯಗಳ ಕುರಿತು ಸಭೆಯಲ್ಲಿ ಸುದೀರ್ಘ ಚರ್ಚೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಫಿರೋಜ್ ರೋಜಿನದಾರ, ಇಂದುಶೇಖರ ಮಣೂರ, ಪ್ರಕಾಶ ಬೆಣ್ಣೂರ, ಕೆ. ಕೆ. ಕುಲಕರ್ಣಿ, ಮೋಹನ ಕುಲಕರ್ಣಿ, ರಾಹುಲ ಆಪ್ಟೆ, ಡಿ. ಬಿ. ವಡವಡಗಿ, ಸದಸ್ಯರಾದ ಸುಶೀಲೇಂದ್ರ ನಾಯಕ, ಮಹೇಶ ವಿ. ಶಟಗಾರ, ಜಿ. ಎಸ್. ಕಮತರ, ಶರಣು ಮಸಳಿ, ಬಸವರಾಜ ಉಳ್ಳಾಗಡ್ಡಿ, ಸುನೀಲ ಕಾಂಬಳೆ, ಅರವಿಂದ ಖಡೆಖಡೆ, ಮಲ್ಲಿಕಾರ್ಜುನ ತೊರಗಲ್ಲಮಠ, ಬಾಬು ವಾಡೇದ, ಸೀತಾರಾಮ ಕುಲಕರ್ಣಿ, ಅಶೋಕ ಯಡಳ್ಳಿ, ರಾಜು ಕೊಂಡಗೂಳಿ, ಗುರು ಗದ್ದನಕೇರಿ, ದೇವೇಂದ್ರ ಹೆಳವರ, ಶಶಿ ಮೆಂಡೇಗಾರ, ವಿಜಯಕುಮಾರ ಸಾರವಾಡ, ಇರ್ಫಾನ್ ಶೇಖ, ಟಿ. ಕೆ. ಮಲಗೊಂಡ, ಸಚೇಂದ್ರ ಲಂಬು, ಮೊಹ್ಮದ ಸಮೀರ ಇನಾಮದಾರ, ಅರವಿಂದ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.

ಕಾನಿಪ ರಾಷ್ಟ್ರೀಯ ಮಂಡಳಿ ಸದಸ್ಯರಿಗೆ ಸನ್ಮಾನ

 

ಈ ಸಂದರ್ಭದಲ್ಲಿ ಸಂಘದ ರಾಷ್ಟ್ರೀಯ ಮಂಡಳಿ ಸದಸ್ಯ ಮಹೇಶ ವಿ. ಶಟಗಾರ ಅವರನ್ನು ಕಾನಿಪ ಸಂಘದಿಂದ ಸ್ವಾಗತಿಸಿ, ಸನ್ಮಾನಿಸಲಾಯಿತು.

 

ಖಾಸಗಿ ವಾಹಿನಿಗೆ ಶುಭ ಹಾರೈಕೆ

ಇದಕ್ಕೂ ಮೊದಲು ಇದೇ ದಿನ ಲೋಕಾರ್ಪಣೆಯಾಗಿರುವ ಖಾಸಗಿ ಸುದ್ದಿ ವಾಹಿನಿ ರಫ್ತಾರ್ ತಂಡಕ್ಕೆ ಕೋರಲಾಯಿತು.  ಅಲ್ಲದೇ, ಕೇಕ್ ಕತ್ತರಿಸುವ ಮೂಲಕ ಮೂಲಕ ಖಾಸಗಿ ವಾಹಿನಿಗೆ ಶುಭ ಹಾರೈಸಲಾಯಿತು.  ಈ ವಾಹಿನಿಯ ಜಿಲ್ಲಾ ವರದಿಗಾರ ರಾಜು ಪಾಟೀಲ, ಕ್ಯಾಮೆರಾಮನ್ ಭೀಮು ಕುಂಟೋಜಿ ಅವರನ್ನು ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು.

Leave a Reply

ಹೊಸ ಪೋಸ್ಟ್‌