RSS Procession: ವಿಜಯಪುರದಲ್ಲಿ ಗಮನ ಸೆಳೆದ ಆರ್ ಎಸ್ ಎಸ್ ಗಣವೇಷಧಾರಿಗಳ ಪಥಸಂಚಲನ

ವಿಜಯಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘ ವಿಜಯಪುರ ನಗರದ ವಾರ್ಷಿಕೋತ್ಸವದ ಅಂಗವಾಗಿ ವಿಜಯಪುರದಲ್ಲಿ ಆರ್ ಎಸ್ ಎಸ್ ಗಣವೇಷಧಾರಿಗಳ ಆಕರ್ಷಕ ಪಥ ಸಂಚಲನ ನಡೆಯಿತು. 

ನಗರದ ನಾನಾ ಶಾಖೆಗಳ 900ಕ್ಕೂ ಹೆಚ್ಚು ಸ್ವಯಂ ಸೇವಕರು ಪಥಸಂಚಲನ ದಲ್ಲಿ ಪಾಲ್ಗೊಂಡರು.

ಬಸವ ನಾಡಿನಲ್ಲಿ ಆರ್ ಎಸ್ ಎಸ್ ಗಣವೇಷಧಾರಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು

ಈ ಕಾರ್ಯಕ್ರಮದಲ್ಲಿ ನಗರದ ಆಭರಣ ವರ್ತಕರಾದ ಪ್ರಕಾಶ ಸೋನಾರ, ವಿಭಾಗ ಸಂಘಚಾಲಕರಾದ ಚಿದಂಬರ ಕರಮಕರ ಉಪಸ್ಥಿತರಿದ್ದರು, ನಗರದ ಗಣ್ಯರು, ಮಾತೆಯರು ಉಪಸ್ಥಿತರಿದ್ದರು.

ಮೆರವಣಿಗೆಯುದ್ಧಕ್ಕೂ ಸ್ವಯಂ ಸೇವಕರ ಮೇಲೆ ಅಲ್ಲಲ್ಲಿ ಸಾರ್ವಜನಿಕರು ಪುಷ್ಪ ಮಳೆ ಸುರಿಸುವ ಮೂಲಕ ಸ್ವಾಗತ ಕೋರಿದರು.

ಬಳಿಕ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಆರ್ ಎಸ್ ಎಸ್ ಕರ್ನಾಟಕ ಉತ್ತರ ಪ್ರಾಂತದ ಧರ್ಮ ಜಾಗರಣ ಸಂಯೋಜಕ ದಿಲೀಪ ವರ್ಣೆಕರ ಮಾತನಾಡಿ, ಆರ್ ಎಸ್ ಎಸ್ ಹಿಂದುತ್ವದ ಸಂಘಟನೆಯ ಕಾರ್ಯದಲ್ಲಿ ತೊಡಗಿದೆ.  ಸಂಘವು ಜಾತಿ ಬೇಧವಿಲ್ಲದೆ ಸಮಾಜದ ಸಾಮರಸ್ಯ ಹೆಚ್ಚಿಸಲು ಕಾರ್ಯ ಮಾಡುತ್ತಿದೆ.  ವಿಶ್ವದ ಅತೀ ದೊಡ್ಡ ಸ್ವಯಂ ಸೇವೆ ಸಂಘಟನೆಯಾಗಿದೆ.  ಜಗತ್ತಿನ 40ಕ್ಕೂ ಹೆಚ್ಚು ದೇಶಗಳಲ್ಲಿ ಹಿಂದುತ್ವದ ಸಂಘಟನೆಯ ಕಾರ್ಯ ಮಾಡುತ್ತಿದೆ.  ಸೇವಾ ಬಸ್ತಿ ಸ್ಥಾನಗಳಲ್ಲಿ ಶಿಕ್ಷಣ, ಆರೋಗ್ಯ, ಸೇವಾ ಕಾರ್ಯ ಸಂಘ ಮಾಡುತ್ತಿದೆ.  ದೇಶದ ಸಂರಕ್ಷಣೆ, ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಸಂಘದ ಸ್ವಯಂ ಸೇವಕರು ನಿಸ್ವಾರ್ಥದಿಂದ ಭಾವದಿಂದ ಸೇವೆ ಮಾಡುತ್ತಿದೆ ಎಂದು ಹೇಳಿದರು.

Leave a Reply

ಹೊಸ ಪೋಸ್ಟ್‌