ವಿಜಯಪುರ: ರಾಜ್ಯ ಮಹಿಳಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರುವ ಬಸವ ನಾಡಿನ ಪ್ರತಿಭಾನ್ವಿತ ಯುವ ಆಟಗಾರ್ತಿ ಅನ್ನಪೂರ್ಣ ಭೋಸಲೆ ಅವರನ್ನು ವಿಜಯಪುರದಲ್ಲಿ ಸನ್ಮಾನಿಸಿ ಗೌರವಿಸಿದರು.
ನಗರದ ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಹಾಗೂ ಅವರ ವಾಯು ವಿಹಾರಿಗಳ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ನಗರದ ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರ್ಯಾಕ್ಟೀಸ್ ಮಾಡಿರುವ ನೂರಾರು ಯುವಕರು ರಾಜ್ಯ, ರಾಷ್ಟ್ರ ಮತ್ತು ರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿಯಲ್ಲಿ ಸಾಧನೆ ಮಾಡಿದ್ದಾರೆ. ಈಗ ಅನ್ನಪೂರ್ಣ ಭೋಸಲೆ ಅವರು ರಾಜ್ಯ ಕ್ರಿಕೆಟ್ ಮಹಿಳಾ ತಂಡಕ್ಕೆ ಆಯ್ಕೆಯಾಗಿದ್ದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.
ಮುಂಬರುವ ದಿನಗಳಲ್ಲಿ ಯುವ ಕ್ರಿಕೇಟರ್ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಲಿ. ಈ ಮೂಲಕ ವಿಜಯಪುರ ನಗರದ ಹೆಸರನ್ನು ರಾಷ್ಟ್ರ ಮಟ್ಟದಲ್ಲಿ ಪಸರಿಸುವ ಕಾರ್ಯ ಮಾಡಲಿ ಎಂದು ಅಪ್ಪು ಪಟ್ಟಣಶೆಟ್ಟಿ ಶುಭ ಹಾರೈಸಿದರು.
ಈ ಸನ್ಮಾನ ಕಾರ್ಯಕ್ರಮದಲ್ಲಿ ವಿಜಯಪುರ ನಗರದ ಉದ್ಯಮಿಗಳಾದ ರಾಜು ಗುಡ್ಡೋಡಗಿ, ರಾಜು ಶೆಟ್ಟಿ, ಸಲೀಂ ಚಟ್ಟರಕ್ಕಿ, ಡಾ. ಸದಾಶಿವ ಪವಾರ ಹಾಗೂ ಇತರ ವಾಯುವಿಹಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
One Response
ರಾಷ್ಟ್ರೀಯ ಆಟಗಾರ್ತಿ ರಾಜೇಶ್ವರಿ ಗಾಯಕ್ವಾಡ್ ಸಹ ವಿಜಯಪುರದವರು. ಅವರು ಮಾರ್ಗದರ್ಶನದಲ್ಲಿ ಇನ್ನೂ ಉತ್ತಮವಾಗಿ ಸಾಧನೆ ಮಾಡಲಿ