Congress Arun Singh: ಅನಾವಶ್ಯಕ ಹೇಳಿಕೆಗಳಿಂದ ಕಾಂಗ್ರೆಸ್ಸಿಗೆ ಹಿನ್ನೆಡೆಯಾಗುತ್ತಿದೆ- ವಿನಾಶಕಾಲೆ ವಿಪರೀತ ಬುದ್ಧಿ ಎಂಬಂತಾಗಿದೆ- ಅರುಣಸಿಂಗ್ ಆಕ್ರೋಶ

ವಿಜಯಪುರ: ಕಾಂಗ್ರೆಸ್ಸಿಗೆ ವಿನಾಶ ಕಾಲೇ ವಿಪರೀತ ಬುದ್ದಿ ಬಂದಂಗಿದೆ ಎಂದು ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸಿಗರು ಪದೇ ಪದೇ ಯಾಕೆ ಹಿಂದೂ ಮತ್ತು ಹಿಂದುತ್ವದ ಬಗ್ಗೆ ಹೇಳಿಕೆ ನೀಡುತ್ತಾರೋ ಗೊತ್ತಾಗುತ್ತಿಲ್ಲ ಎಂದು ಹೇಳಿದರು.

ಭಾರತೀಯ ಪ್ರಾಚೀನ ಸಂಸ್ಕೃತಿ ಬಗ್ಗೆ ಪ್ರತಿಯೊಬ್ಬ ಭಾರತೀಯರಿಗೆ ಹೆಮ್ಮೆಯಿದೆ.  ಆದರೆ, ಕಾಂಗ್ರೆಸ್ ನಾಯಕರು ಪದೇ ಪದೇ ಯಾಕೆ ಹಿಂದುತ್ವವನ್ನು ಯಾಕೆ ಅವಮಾನಿಸುತ್ತಾರೆ? ಉದ್ದೇಶಪೂರ್ವಕವಾಗಿಯೇ ಯಾಕೆ ಟೀಕಿಸುತ್ತಾರೆ ನನಗೆ ಗೊತ್ತಾಗುತ್ತಿಲ್ಲ ಎಂದು ಅವರು ಹೇಳಿದರು.

ರಾಹುಲ್ ಗಾಂಧಿ ಕರ್ನಾಟಕದಲ್ಲಿ ಪಾದಯಾತ್ರೆ ನಡೆಸಿ ಹೋಗಿದ್ದಾರೆ.  ಅವರು ಇಲ್ಲಿ ಯಾವ ಜ್ಞಾನ ಪಡೆದಿದ್ದಾರೆ? ಡಿ. ಕೆ. ಶಿವಕುಮಾರ ಮತ್ತು ಸಿದ್ಧರಾಮಯ್ಯ ಕೂಡ ಅವರ ಜೊತೆಯಲ್ಲಿದ್ದರು.  ಸತೀಶ ಜಾರಕಿಹೊಳಿ ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿದ್ದಾರೆ.  ಹಿರಿಯ ನಾಯಕರಾಗಿ ನಿರಂತರವಾಗಿ ಅವಮಾನಿಸುತ್ತಿರುವುದು ಖಂಡನೀಯವಾಗಿದೆ.  ಇಂಥ ನಾಯಕರಿಂದಲೇ ದೇಶಾದ್ಯಂತ ಕಾಂಗ್ರೆಸ್ ಅವನತಿ ಕಾಣುತ್ತಿದೆ ಎಂದು ಅರುಣಸಿಂಗ್ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ಕಾಂಗ್ರೆಸ್ ನಾಯಕ ನೀಡಿರುವ ಹೇಳಿಕೆ ವಿನಾಶ ಕಾಲೇ ವಿಪರೀತ ಬುದ್ದಿ ಮಾತಿಗೆ ಹೇಳಿ ಮಾಡಿಸಿದಂತಿದೆ.  ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳಲಿದೆ.  ಹೀನಾಯವಾಗಿ ಸೋಲಲಿದೆ.  ಬಿಜೆಪಿ ಪ್ರಚಂಡ ಬಹುಮತ ಪಡೆಯಲಿದೆ ಎಂದು ಹೇಳಿದ ಅವರು, ರಾಹುಲ ಗಾಂಧಿ ಹಿಂದೂ, ಹಿಂದುತ್ವ, ಹಿಂದೂವಾದಿಯ ಕುರಿತು ನಾನಾ ರೀತಿಯಲ್ಲಿ ವ್ಯಾಖ್ಯಾನಿಸುತ್ತಾರೆ.  ಇದನ್ನು ಹೇಳುವ ಅಗತ್ಯವಾದರೂ ಏನಿದೆ? ನಮ್ಮ ಆಧ್ಯಾತ್ಮ ಮತ್ತು ಸಂಸ್ಕೃತಿಯನ್ನು ಗಮನವಿಟ್ಟು ಅಧ್ಯಯನ ನಡೆಸಲಿ.  ಅದನ್ನು ಬಿಟ್ಟು ವಿಕಿಪೀಡಿಯಾ, ಗೂಗಲ್ ನ್ನು ನೋಡಬೇಡಿ ಎಂದು ಕಿವಿಮಾತು ಹೇಳಿದರು.

ಸತೀಶ ಜಾರಕಿಹೊಳಿ ಸೇರಿದಂತೆ ಎಲ್ಲ ಕಾಂಗ್ರೆಸ್ ನಾಯಕರು ನಮ್ಮ ವೇದ, ಪುರಾಣ, ಗ್ರಂಥಗಳ ಅಧ್ಯಯನ ನಡೆಸಲಿ.  ಬಸವಣ್ಣನವರನ್ನು ಅಧ್ಯಯನ ಮಾಡಲಿ.  ಅವರ ವಚನಗಳನ್ನು ಓದಲಿ.  ಆದರೆ, ಅವರು ನೀಡುವ ಹೇಳಿಕೆಗಳು ಸಮಾಜದ ಆಕ್ರೋಶಕ್ಕೆ ಕಾರಣವಾಗುತ್ತವೆ.  ಇದನ್ನು ನಾವು ಖಂಡಿಸುತ್ತೇವೆ ಎಂದು ಅವರು ಹೇಳಿದರು.

ವಿಜಯಪುರ ಜಿಲ್ಲೆಯಲ್ಲಿ ಸಿಂದಗಿ ಬೈ ಎಲೆಕ್ಷನ್ ಗೆದ್ದಿದ್ದೇವೆ.  ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿಯೂ ಉತ್ತಮ ಗೆಲುವು ಸಾಧಿಸಿದ್ದೇವೆ.  ಈ ಗೆಲುವಿನ ಪ್ರಕ್ರಿಯೆ ಮುಂದುವರೆಯಲಿದೆ.  ಇಡೀ ವಿಜಯಪುರ ಜಿಲ್ಲೆಯಲ್ಲಿ ಬಿಜೆಪಿ ಎಲ್ಲ ಕ್ಷೇತ್ರಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಎಲ್ಲ ಕಡೆಗಳಲ್ಿಲಿಯೂ ಗೆಲುವು ಸಾಧಿಸಲಿದೆ ಎಂದು ಕರ್ನಾಟಕ ಬಿಜೆಪಿ ಉಸ್ತುವಾರಿ ವಿಶ್ವಾಸ ವ್ಯಕ್ತಪಡಿಸಿದರು.

ಈಗ ಇಂಡಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರ ಸಂಕಲ್ಪ ಸಭೆ ನಡೆಸುತ್ತಿದ್ದೇವೆ.  ಮುಂದಿನ ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಸಭೆ ಮಾಡುತ್ತಿದ್ದೇವೆ.  ಬಿಜೆಪಿಯ ಎಲ್ಲ ಕಾರ್ಯಕರ್ತರು ಮತ್ತು ನಾಯಕರು ಒಗ್ಗಟ್ಟಿನಿಂದ ಚುನಾವಣೆ ಎದುರಿಸಿ ಭರ್ಜರಿ ಗೆಲುವು ಸಾಧಿಸಲಿದ್ದೇವೆ ಎಂದು ಅರುಣಸಿಂಗ್ ಹೇಳಿದರು.

ಈ ಸಂದರ್ಭದಲ್ಲಿ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಕುರಿತು ಪ್ರಶ್ನೆ ಕೇಳುತ್ತಿದ್ದಂತೆ ಉತ್ತರಿಸದೆ ಅರುಣಸಿಂಗ್ ನಿರ್ಗಮಿಸಿದರು.  ಬಳಿಕ ಬಿಜೆಪಿ ಕಾರ್ಯಕರ್ತರ ಸಂಕಲ್ಪ ಸಭೆಯಲ್ಲಿ ಪಾಲ್ಗೋಂಡರು.

ಈ ಸಂದರ್ಭದಲ್ಲಿ ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವ ಅಪ್ಪು ಪಟ್ಟಮಶೆಟ್ಟಿ, ಮಾಜಿ ಶಾಸಕ ರವಿಕಾಂತ ಪಾಟೀಲ, ಬಿಜೆಪಿ ಜಿಲ್ಲಾ ವಕ್ತಾರ ಸುರೇಶ ಬಿರಾದಾರ ಸೇರಿದಂತೆ ನಾನಾ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌