ವಿಜಯಪುರ: ದಾಸ ಸಾಹಿತ್ಯಕ್ಕೆ ದಾಸಶ್ರೇಷ್ಠ ಕನಕದಾಸರು ನೀಡಿರುವ ಕೊಡುಗೆ ಅಪಾರ ಎಂದುಬಿ.ಎಲ್.ಡಿ.ಇ. (ಡೀಮ್ಡ್ ವಿಶ್ವವಿದ್ಯಾಲಯ)ಯ ರಿಜಿಸ್ಟಾರ ಡಾ. ಆರ್.ವಿ.ಕುಲಕರ್ಣಿ ಹೇಳಿದರು.
ವಿವಿಯಲ್ಲಿ ನಡೆದ ಕನಕದಾಸರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕನಕದಾಸರು ರಚಿಸಿರುವ ದಾಸಸಾಹಿತ್ಯ, ಕೀರ್ತನೆಗಳು ಮತ್ತು ಭಕ್ತಿಪಂಥಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಲೈಡ್ ಹೆಲ್ತ್ ಸೈನ್ಸಸ್ ಡೀನ್ ಡಾ. ಎಸ್. ವಿ. ಪಾಟೀಲ, ವೈದ್ಯಕೀಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕರು ಡಾ. ವಿಜಯಕುಮಾರ ಕಲ್ಯಾಪ್ಪಗೋಳ, ಪರೀಕ್ಷಾ ನಿಯಂತ್ರಕ ಡಾ. ಎಸ್. ಎಸ್. ದೇವರಮನಿ, ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ, ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಉದಯಕುಮಾರ ನುಚ್ಚಿ, ನಾನಾ ವಿಭಾಗಗಳ ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಸಹಾಯಕ ಕುಲಸಚಿವ ಡಾ. ಗೋಪಾಲಕೃಷ್ಣ ವಂದಿಸಿದರು.