ವಿಜಯಪುರ: ಜನಸಾಮಾನ್ಯರಿಗೆ ಅರಿವಿಗೆ ಬಾರದೇ ಮಧುಮೇಹ ತನ್ನ ಪ್ರಭಾವವನ್ನು ವಿಸ್ತರಿಸುತ್ತಿರುವ ಅಂಶ ಬೆಳಕಿಗೆ ಬಂದಿದೆ. ವಿಜಯಪುರ ನಗರದ ಪ್ರತಿಷ್ಠಿತ ಬಿ ಎಲ್ ಡಿ ಇ ಸಂಸ್ಥೆಯ ಬಿ ಎಲ್ ಡಿ ಇ ಡೀಮ್ಟ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದಿಂದ ವಿನೂನತವಾಗಿ ವಿಶ್ವ ಮುಧಮೇಹ ದಿನ ಆಚರಿಸಲಾಯಿತು.
ಬಿ ಎಲ್ ಡಿ ಇ ಆಸ್ಪತ್ರೆಯ ವೈದ್ಯರ ತಂಡ ವಿಜಯಪುರ ಕೇಂದ್ರ ಬಸ್ ನಿಲ್ದಾಣಕ್ಕೆ ತೆರಳಿ ಬಸ್ಸಿನಲ್ಲಿ ಸಂಚರಿಸುವ ಪ್ರಯಾಣಿಕರ ಉಚಿತ ಆರೋಗ್ಯ ತಪಾಸಣೆ ನಡೆಸಿದಾಗ ಈ ಅಂಶ ಬೆಳಕಿಗೆ ಬಂದಿದೆ.
1200 ಜನರಿಗೆ ಆರೋಗ್ಯ ತಪಾಸಣೆ, ಶೇ. 15ರಷ್ಟು ಹೊಸದಾಗಿ ಮಧುಮೇಹ ಪತ್ತೆ
60 ಜನ ತಜ್ಞ ವೈದ್ಯರು ನಾನಾ ಬಸ್ಸುಗಳಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 1200 ಜನರ ತಪಾಸಣೆ ನಡೆಸಿದರು. ಅಲ್ಲದೇ, ಸಾರ್ವಜನಿಕರೊಂದಿಗೆ ಸಮಾಲೋಚನೆ ಮತ್ತು ಮಧುಮೇಹ ಮತ್ತು ಬಿಪಿ ಕುರಿತು ಜಾಗೃತಿ ಮೂಡಿಸಿದರು. ವೈದ್ಯಕೀಯ ಸ್ನಾತಕೋತ್ತರ ಪಧವೀದರರು ಮಧುಮೇಹದ ಗುಣಲಕ್ಷಣಗಳು ಮತ್ತು ಇದರ ಚಿಕಿತ್ಸಾ ಕ್ರಮದ ಬಗ್ಗೆ ಮಾಹಿತಿ ನೀಡಿದರು. ಹೌಸ್ ಸರ್ಜನ್ಸ್ ತಂಡದಿAದ ಮಧುಮೇಹ ತಪಾಸಣೆ ನಡೆಸಿದಾಗ ಇದೇ ಮೊದಲ ಬಾರಿಗೆ ರಕ್ತ ತಪಾಸಣೆಗೆ ಒಳಗಾದ ಶೇ. 15 ರಷ್ಟು ಜನರಲ್ಲಿ ಮಧುಮೇಹ ಇರುವುದು ಪತ್ತೆಯಾಯಿತು.
ಇದೇ ವೇಳೆ, ಈಗಾಗಲೇ ಸಕ್ಕರೆ ಕಾಯಿಲೆ ಇರುವ ಶೇ. 40 ರಷ್ಟು ಜನರಲ್ಲಿ ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರಣದಲ್ಲಿ ಇಲ್ಲದಿರುವ ಮಾಹಿತಿಯೂ ಈ ಸಂದರ್ಭದಲ್ಲಿ ದೃಢಪಟ್ಟಿತು. ಈ ಎಲ್ಲಾ ಜನರಿಗೆ ಉಚಿತ ಡಯಾಬೆಟಿಕ್ ಕ್ಲಿನಿಕ್ ಕಾರ್ಡಗಳನ್ನು ವಿತರಿಸಿ ಮುಂದಿನ ತಪಾಸಣೆಗೆ ಆಸ್ಪತ್ರೆಗೆ ಭೇಟಿ ನೀಡಲು ವೈದ್ಯರು ಸೂಚನೆ ನೀಡಿದರು.
ವಿಶ್ವ ಮಧುಮೇಹ ದಿನದ ಅಂಗವಾಗಿ ಬೆಳಿಗ್ಗೆ ಸೈಕಲ್ ಜಾಥಾ ಆಯೋಸಲಾಗಿತ್ತು. ಈ ಜಾಥಾಕ್ಕೆ ಬಿ ಎಲ್ ಡಿ ಇ ಆಸ್ಪತ್ರೆಯ ವೈದ್ಯಕೀಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಶರಣ ಬಡಿಗೇರ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ರಾಜೇಶ ಹೊನ್ನುಟಗಿ ಮತ್ತು ಹಿರಿಯ ವೈದ್ಯರಾದ ಡಾ. ಆರ್. ಸಿ. ಬಿದರಿ, ಡಾ. ಎಂ. ಎಸ್. ಮೂಲಿಮನಿ, ಡಾ. ಎಸ್. ಎನ್. ಬೆಂಟೂರ, ಡಾ. ಎಸ್. ಎಂ. ಬಿರಾದಾರ ಮತ್ತು ಇತರ ಹಿರಿಯ ವೈದ್ಯರುಗಳು ಭಾಗವಹಿಸಿದ್ದರು.
ಬಳಿಕ ನಡೆದ ಆರೋಗ್ಯ ತಪಾಸಣೆ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಡಾ. ಅರವಿಂದ ಪಾಟೀಲ, ಡಾ. ಎಸ್. ಎಸ್. ದೇವರಮನಿ, ಡಾ. ವಿಜಯಕುಮಾರ ವಾರದ, ಡಾ. ಪಿ. ಜಿ. ಮಂಟೂರ, ಡಾ. ಆನಂದ ಪಿ. ಅಂಬಲಿ, ಡಾ. ಉದಯಕುಮಾರ ನುಚ್ಚಿ, ಡಾ. ಅನುಜಾ ಭಾವಿ ಮತ್ತು ಸ್ನಾತಕೋತ್ತರ ಪಧವೀದರರು ಪಾಲ್ಗೋಂಡರು.
ಬಿ ಎಲ್ ಡಿ ಇ ಸಂಸ್ಥೆಯ ಅಧ್ಯಕ್ಷ ಎಂ. ಬಿ. ಪಾಟೀಲ, ವಿವಿಯ ಉಪಕುಲಪತಿ ಡಾ. ಆರ್. ಎಸ್. ಮುಧೋಳ, ಕುಲಸಚಿವ ಡಾ. ಆರ್. ವಿ. ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ನಡೆಯಿತು.