Diabetic Day Celebration: ವಿಜಯಪುರದಲ್ಲಿ ವಿಶ್ವ ಮಧುಮೇಹ ದಿನ ಆಚರಣೆ

ವಿಜಯಪುರ: ದರ್ಗಾ ನಗರ ಆರೋಗ್ಯ ಕೇಂದ್ರ, ಬಿ. ಎಲ್. ಡಿ. ಇ. ಸಂಸ್ಥೆ, ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಸಂಯುಕ್ತ ಆಶ್ರಯದಲ್ಲಿ ವಿಜಯಪುರದಲ್ಲಿ ವಿಶ್ವ ಮಧುಮೇಹ ದಿನ ಆಚರಿಸಲಾಯಿತು.

ಈ ಕಾರ್ಯಕ್ರಮವನ್ನು ತಾಲೂಕು ಆರೋಗ್ಯಾಧಿಕಾರಿ ಡಾ. ಪಿ. ಎ. ಹಿಟ್ನಳ್ಳಿ, ಮತ್ತು ದರ್ಗಾ ನಗರ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಐ. ಎಸ್. ಧಾರವಾಡಕರ ಸಸಿಗೆ ನೀರು ಹಾಕುವದರ ಮೂಲಕ ಜಂಟಿಯಾಗಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ಪಿ. ಎ. ಹಿಟ್ನಳ್ಳಿ, ಘೋಷವಾಕ್ಯ ಶಿಕ್ಷಣದಿಂದ ಭವಿಷ್ಯದ ರಕ್ಷಣೆ ಸಕ್ಕರೆ ಕಾಯಿಲೆ ಅಥವಾ ಡಯಾಬಿಟಿಸ್, ಸಕ್ಕರೆ ಅಂಶವನ್ನು ದೇಹ ಉಪಯೋಗಿಸಿಕೊಳ್ಳಲು ಇನ್ಸುಲಿನ್ ಅವಶ್ಯ ಆದರೂ ಕೆಲವೊಮ್ಮೆ ನಮ್ಮ ದೇಹದಲ್ಲಿರುವ ಮೇದೋಜಿರಕ್ ಗ್ರಂಥಿ ಸಾಕಷ್ಟು ಇನ್ಸುಲಿನ್ ತಯಾರಿಸುವುದಿಲ್ಲ ಅಥವಾ ತಯಾರು ಮಾಡುವ ಶಕ್ತಿ ಕಡಿಮೆಯಾಗುತ್ತದೆ.  ಇಲ್ಲವೇ, ತಯಾರಾದ ಇನ್ಸುಲಿನ್ ಅನ್ನು ದೇಹ ಸಮರ್ಪಕವಾಗಿ ಉಪಯೋಗಿಸುವುದಿಲ್ಲ.  ಹೀಗಾಗಿ ರಕ್ತದಲ್ಲಿ ಸಕ್ಕರೆಯ ಪ್ರಮಾಣ ನಿಗಧಿತ ಪ್ರಮಾಣಕ್ಕಿಂತ ಹೆಚ್ಚಾಗುತ್ತದೆ.  ಈ ಸ್ಥಿತಿಯನ್ನು ಸಕ್ಕರೆ ಕಾಯಿಲೆ ಎಂದು ಕರೆಯುತ್ತಾರೆ ಎಂದು ಹೇಳಿದರು.

ಡಾ. ಐ. ಎಸ್. ಧಾರವಾಡಕರ ಮಾತನಾಡಿ, ಸಕ್ಕರೆ ಕಾಯಿಲೆ ನಿಯಂತ್ರಣ ಮತ್ತು ಚಿಕಿತ್ಸೆಗೆ ಆರೋಗ್ಯ ಇಲಾಖೆಯಲ್ಲಿ ಎಲ್ಲ ಚಿಕಿತ್ಸೆಗಳು ಉಚಿತವಾಗಿ ದೊರೆಯುತ್ತಿದ್ದು, ಸಾರ್ವಜನಿಕರು ಈ ಶಿಬಿರಗಳನ್ನು ಸದುಪಯೋಗ ಪಡೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಡಾ. ರಾಜೇಶ, ನಾಗರತ್ನಾ ಚೌಧರಿ, ಮರೆಯಮ್ಮಾ ಬೆನ್ನೂರ, ಬಾಲರಾಜ, ಹಣಮಂತ, ದರ್ಗಾ ನಗರ ಆರೋಗ್ಯ ಕೇಂದ್ರದ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮುಂತಾದವರು ಉಪಸ್ಥಿತರಿದ್ದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ನೂರ್ ಅಹ್ಮದ್ ಆರ್. ಬಾಗವಾನ ವಂದಿಸಿದರು.

Leave a Reply

ಹೊಸ ಪೋಸ್ಟ್‌