Marriage At 75: ಇಳಿ ವಯಸ್ಸಿನಲ್ಲಿ ಪತ್ನಿಯ ಅಕ್ಕನನ್ನು ವರಿಸಿದ ಮಾಜಿ ಮೇಯರ್- ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳಿಂದ ಶುಭ ಹಾರೈಕೆ

ಹುಬ್ಬಳ್ಳಿ: ಮದುವೆ ಎಂದರೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತವೆ ಎಂಬ ಮಾತಿದೆ.  ಇತ್ತೀಚೆಗೆ ಕೇರಳದ ತ್ರಿಶೂರಿನಲ್ಲಿ 10ನೇ ತರಗತಿ ಸಹಪಾಠಿಗಳಿಬ್ಬರು ವಾಟ್ಸಾಪ್ ಗ್ರುಪ್ ನಲ್ಲಿದ್ದ ಸ್ನೇಹಿತರ ಒತ್ತಾಸೆಯ ಮೇರೆಗೆ 35 ವರ್ಷಗಳ ನಂತರ ಮದುವೆಯಾಗಿದ್ದರು.  ಈ ಘಟನೆ ಇನ್ನೂ ನೆನಪಿರುವಾಗಲೇ, ಈಗ ಮತ್ತೋಂದು ವಿಶೇಷ ಮದುವೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದೆ.

 

ಇದೀಗ 75ನೇ ಇಳಿ ವಯಸ್ಸಿನ ಬಿಜೆಪಿ ಮುಖಂಡ ಮತ್ತು ಮಾಜಿ ಮೇಯರ್ ಮದುವೆಯಾಗುವ ಮೂಲಕ ಗಮನ ಸೆಳೆದಿದ್ದಾರೆ.  ಅದೂ ಕೂಡ ಹೆಂಡತಿಯ ಅಕ್ಕನನ್ನು ಮದುವೆಯಾಗಿದ್ದು ವಿಶೇಷವಾಗಿದ್ದರೆ, ಈ ಮದುವೆಗೆ ಆ ಅಜ್ಜನ ಮೂಕು ಡನ ಮಕ್ಕಳು, ಸೊಸೆಯಂದಿರು ಮತ್ತು ಮೊಮ್ಮಕ್ಕಳು ಉಪಸ್ಥಿತರಿದ್ದು ಶುಭ ಕೋರಿದ್ದಾರೆ.

 

ಹುಬ್ಬಳ್ಳಿ-ಧಾರವಾಡ ಮಾಜಿ ಮೇಯರ್ ಮತ್ತು ಬಿಜೆಪಿ ಮುಖಂಡ ಡಿ. ಕೆ. ಚವ್ಹಾಣ(75) ಅವರ ಪತ್ನಿ ಶಾರದಾ ಮೂರು ತಿಂಗಳ ಹಿಂದೆ ನಿಧನರಾಗಿದ್ದರು.  ಈಗ ಪತ್ನಿಯ ಅಕ್ಕ ಅನಸೂಯಾ ಅವರನ್ನು ಮದುವೆಯಾಗಿರುವ ಅವರು ಆಕೆಗೆ ಹೊಸ ಬಾಳು ನೀಡಿದ್ದಾರೆ.

 

ಡಿ. ಕೆ. ಚವ್ಹಾಣ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ 2007-08ರ ಅವಧಿಯಲ್ಲಿ ಮೇಯರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.  ಈಗ ಅವರ ಪತ್ನಿ ನಿಧನರಾಗಿರುವ ಹಿನ್ನೆಲೆಯಲ್ಲಿ 66 ವರ್ಷದ ಅನಸೂಯಾ ಅವರನ್ನು ಮದುವೆಯಾಗಿ ಆಕೆಗೆ ಹೊಸ ಬಾಳು ನೀಡಿದ್ದಾರೆ.  ಅನಸೂಯ ಅವರಿಗೆ ಇನ್ನೂ ಮದುವೆಯಾಗಿದ ಕಾರಣ ಅವರು ವರಿಸಿದ್ದಾರೆ ಎನ್ನಲಾಗಿದೆ.  ಮದುವೆಯಾಗದೇ ಹಾಗೆ ಉಳಿದಿದ್ದ ಅನಸೂಯಾ ಅವರಿಗೆ ಈ ಇಳಿ ವಯಸ್ಸಿನಲ್ಲಾದರೂ ಹೊಸ ಬದುಕು ನೀಡಲು ಮುದವೆಯಾಗಿರುವುದಾಗಿ ಡಿ. ಕೆ. ಚವ್ಹಾಣ ತಿಳಿಸಿದ್ದಾರೆ.  ಅವರ ನಿರ್ಧಾರಕ್ಕೆ ಮಕ್ಕಳು, ಸೊಸೆಯಂದಿರು ಮತ್ತು ಮೊಮ್ಮಕ್ಕಳು ಬೆಂಬಲ ನೀಡಿರುವುದೂ ಕೂಡ ಪ್ರಶಂಸೆಗೆ ಪಾತ್ರವಾಗಿದೆ.

Leave a Reply

ಹೊಸ ಪೋಸ್ಟ್‌