Drone Carrier Academy: ಬಸವ ನಾಡಿನ ದ್ರೋಣ ಕರಿಯರ್ ಅಕಾಡೆಮಿಯ 27 ವಿದ್ಯಾರ್ಥಿಗಳು ಸೇನಾ ನೇಮಕಾತಿಯಲ್ಲಿ ಆಯ್ಕೆ

ವಿಜಯಪುರ: ಬಸವ ನಾಡು ವಿಜಯಪುರ ನಗರದ ತೊರವಿ ಬಳಿ ಮಹಿಳಾ ವಿಶ್ವವಿದ್ಯಾಲಯದ ಸಮೀಪ ಇರುವ ದ್ರೋಣ ಕರಿಯರ್ ಅಕಾಡೆಮಿಯ 27 ಜನ ಯುವಕರು ಈ ಬಾರಿ ಬೆಂಗಳೂರಿನಲ್ಲಿ ನಡೆದ ಸೇನಾ ನೇಮಕಾತಿ ರ್ಯಾಲಿಯಲ್ಲಿ ಆಯ್ಕೆಯಾಗಿದ್ದಾರೆ ಎಂದು ಅಕಾಡೆಮಿ ಸಂಸ್ಥಾಪಕ ಮತ್ತು ನಿವೃತ್ತ ಸೈನಿಕ ಕಲ್ಮೇಶ ಆಸಂಗಿ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಅ. 16 ರಂದು ಬೆಂಗಳೂರಿನಲ್ಲಿ ಸೇನಾ ನೇಮಕಾತಿ ನಡೆಯಿತು.  ಈ ಬಾರಿ ದ್ರೋಣ ಅಕಾಡೆಮಿಯಿಂದ ಒಟ್ಟು 63 ಯುವಕರು ವಿದ್ಯಾರ್ಥಿಗಳು ಈ ನೇಮಕಾತಿಯಲ್ಲಿ ಪಾಲ್ಗೋಂಡಿದ್ದರು.  ಅವರಲ್ಲಿ 27 ಯುವಕರು ದೇಶ ಸೇವೆಗೆ ಆಯ್ಕೆಯಾಗಿದ್ದಾರೆ.  ಪ್ರತಿ ನೇಮಕಾತಿಯಲ್ಲಿ ಅಕಾಡೆಮಿಯಿಂದ ಯುವಕರು ಆಯ್ಕೆಯಾಗುತ್ತಿರುವುದು ಗಮನಾರ್ಹವಾಗಿದೆ ಎಂದು ಅವರು ತಿಳಿಸಿದ್ದಾರೆ.

ದ್ರೋಣ ಕರಿಯರ್ ಅಕಾಡೆಮಿ ಸಂಸ್ಥಾಪಕ ಕಲ್ಮೇಶ ಆಸಂಗಿ

 

ಅಷ್ಟೇ ಅಲ್ಲ, ನವೆಂಬರ್ 13ರಂದು ಮೂಡಬಿದರೆಯಲ್ಲಿ ನಡೆದ ಲಿಖಿತ ಪರಿಕ್ಷೆಯಲ್ಲಿ ಕೇಳಲಾದ ಪ್ರಶ್ನೆಗಳಲ್ಲಿ ಶೇ. 90ರಷ್ಟು ಪ್ರಶ್ನೆಗಳು ತಾವು ವಿದ್ಯಾರ್ಥಿಗಳಿಗೆ ಕಲಿಸಿದ ವಿಷಯಗಳಿಗೆ ಸಂಬಂಧಿಸಿವೆ.  ಈ ಬಾರಿ ಅಕಾಡೆಮಿಯಿಂದ ಪರೀಕ್ಷೆ ಬರೆದ ಶೇ. 80 ರಷ್ಟು ಯುವಕರು ಸೇನೆಗೆ ಆಯ್ಕೆಯಾಗುವುದು ಖಚಿತ ಎಂದು ಕಲ್ಮೇಶ ಆಸಂಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾರತೀಯ ಸೇನೆಯಲ್ಲಿ 17 ವರ್ಷ ಸೇವೆ ಸಲ್ಲಿಸಿರುವ ತಾವು ದೇಶಕ್ಕಾಗಿ ಏನಾದರೂ ಮಾಡಬೇಕು ಎಂಬ ಸದುದ್ದೇಶದಿಂದ ದ್ರೋಣ ಕರಿಯರ್ ಅಕಾಡೆಮಿ ಸ್ಥಾಪಿಸಿರುವುದಾಗಿ ತಿಳಿಸಿರುವ ಅವರು, ಈ ಅಕಾಡೆಮಿಯಲ್ಲಿ ಒಳ್ಳೆಯ ಅನುಭವವಿರುವ ಶಿಕ್ಷಕರು ಮತ್ತು  ಸಿಬ್ಬಂದಿಯಿಂದ ಸೂಕ್ತ ತರಬೇತಿ ನೀಡಲಾಗುತ್ತದೆ.  ಇಲ್ಲಿಗೆ ಪ್ರವೇಶ ಪಡೆಯುವ ಯುವಕರಿಗೆ ದೈಹಿಕ ಮಾನಸಿಕವಾಗಿ ಸದೃಢರನ್ನಾಗಿ ಮಾಡಲು ತರಬೇತಿ ನೀಡಲಾಗುತ್ತದೆ.  ಲಿಖಿತ ಪರೀಕ್ಷೆಗಳಿಗೂ ಸೂಕ್ತ ತರಬೇತಿ ನೀಡಲಾಗುತ್ತದೆ ಕಲ್ಮೇಶ ಆಸಂಗಿ ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌