ವಿಜಯಪುರ: ಜಾತ್ರೆಗಳು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿವೆ ಎಂದು ನಾಗಠಾಣ(ಮೀ) ಜೆಡಿಎಸ್ ಶಾಸಕ ಡಾ. ದೇವಾನಂದ ಚವ್ಹಾಣ ಹೇಳಿದ್ದಾರೆ.
ವಿಜಯಪುರ ತಾಲೂಕಿನ ಮಖಣಾಪುರ ಗ್ರಾಮದ ಜಮಾದಾರ ದೊಡ್ಡಿಯಲ್ಲಿ ಕನ್ನೂರ ರಸ್ತಯಲ್ಲಿರುವ ಶ್ರೀ ಬಸವೇಶ್ವರ ದೇವಸ್ಥಾನದ ಎರಡನೇ ವರ್ಷದ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹಬ್ಬ ಹರಿದಿನಗಳನ್ನು ಆಚರಿಸಿ ಸಂಭ್ರಮಿಸುವುದು ನಮ್ಮಲ್ಲಿ ರೂಡಿಯಾಗಿದೆ. ಈ ಗ್ರಾಮಸ್ಥರೆಲ್ಲರೂ ಸೇರಿಕೊಂಡು ಈಗ ಭಕ್ತಿಪೂರ್ವಕವಾಗಿ ಬಸವೇಶ್ವರ ಜಾತ್ರೆಯಲ್ಲಿ ಪಾಲ್ಗೋಂಡಿರುವುದು ದೈವಭಕ್ತಿಗೆ ಸಾಕ್ಷಿಯಾಗಿದೆ. ಇಂಥ ಸುವಿಚಾರಗಳು ಅಭಿವೃದ್ಧಿಗೆ ಪೂರಕವಾಗಿವೆ ಎಂದು ಹೇಳಿದರು.
ಬಂಜಾರಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಿ. ಎಲ್. ಚವ್ಹಾಣ ಈ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿಗೋ ನಾಸಾಧ ಡೊಳ್ಳಿನ ಗಾಯನ ಸಂಘ, ಅಮೋಘ ಸಿದ್ದೇಶ್ವರ ಡೊಳ್ಳಿನ ಗಾಯನ ಸಂಘ, ಮಹಾಳಿಂಗರಾಯ ಡೊಳ್ಳಿನ ಗಾಯನ ಸಂಘದವರು ಭಜನೆ ಹಾಗೂ ತತ್ವ ಪದಗಳನ್ನು ಹಾಡಿದರು.
ಈ ಸಂದರ್ಭದಲ್ಲಿ ದೊಂಡು ಲಮಾಣಿ, ಜೇಮಿಲು ಲಮಾಣಿ, ಖೀರು ಚವ್ಹಾಣ, ಯುವ ಮಹಿಳಾ ಹೋರಾಟಗಾರ್ತಿ ಜ್ಯೋತಿ ರಾಠೋಡ, ಇಸಾಕಸಾಬ ಜಮಾದಾರ, ಹಾಜಿ ಸಾಬ ಜಮಾದಾರ, ಬಾಬುಸಾಬ ಜಮಾದಾರ, ಗ್ರಾಮಸ್ಥರು ಉಪಸ್ಥಿತರಿದ್ದರು.
ದೇವಸ್ಥಾನದ ಸಂಸ್ಥಾಪಕ ಅಧ್ಯಕ್ಷ ವಿಠ್ಠಲ ಮಾನಸಿಂಗ ರಾಠೋಡ ಸ್ವಾಗತಿಸಿದರು. ಜ್ಯೋತಿ ದೊಂಡು ರಾಠೋಡ ಕಾರ್ಯಕ್ರಮ ನಿರೂಪಿಸಿದರು.