ಚಂದ್ರಕಾಂತ ಬಿಜ್ಜರಗಿ ರಚಿತ ಹಾಲುಮತ ಧರ್ಮಗ್ರಂಥ ಬಿಡುಗಡೆ

ವಿಜಯಪುರ: ಹಾಲುಮತ ಸಮಾಜದ ಸೇವೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಚಂದ್ರಕಾಂತ ಬಿಜ್ಜರಗಿ ಅವರು ರಚಿಸಿರುವ ಹಾಲುಮತ ಧರ್ಮಗ್ರಂಥ ಬಿಡಗಡೆ ಕಾರ್ಯಕ್ರಮ ಬಸವ ನಾಡು ವಿಜಯಪುರದಲ್ಲಿ ನಡೆಯಿತು.

ತಿಂಥನಿ ಕಾಗಿನೆಲೆ ಶ್ರೀ ಸಿದ್ಧರಾಮಾನಂದ ಮಹಾಸ್ವಾಮೀಜಿ, ಮೈಸೂರಿನ ಶ್ರೀ ಶಿವಾನಂದ ಮಹಾಸ್ವಾಮೀಜಿ ಅವರ ಸಾನಿಧ್ಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹಾಲುಮತದ ಜಡೆಸಿದ್ಧರು, ಕಾಗಿನೆಲೆ ಶಾಖಾಮಠದ ಶ್ರೀ ಸಿದ್ದೇಶ್ವರ ಸ್ವಾಮೀಜಿ, ನಾಗಠಾಣ ಮೂಲಪೀಠದ ಮಾಳಿಂಗರಾಯ ಮಹಾರಾಜರು, ಪಟ್ಟದ ಗುರುಗಳು ಗ್ರಂಥ ಬಿಡುಗಡೆ ಮಾಡಿದರು.

ಚಂದ್ರಕಾಂತ ಬಿಜ್ಜರಗಿ ಅವರನ್ನು ನಾನಾ ಸ್ವಾಮೀಜಿಗಳು ಸನ್ಮಾನಿಸಿ ಗೌರವಿಸಿದರು

ಈ ಸಂದರ್ಭದಲ್ಲಿ ಗ್ರಂಥ ರಚಿಸಿದ ಚಂದ್ರಕಾಂತ ಬಿಜ್ಜರಗಿ ಅವರನ್ನೂ ಶ್ರೀಗಳೆಲ್ಲರೂ ಸೇರಿ ಸನ್ಮಾನಿಸಿ ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ಹಾಲುಮತದ ಮುಖಂಡರಾದ ಮಲ್ಲಣ್ಣ ಶಿರಶ್ಯಾಡ, ರಮೇಶ ಬಂಟನೂರ, ಜೆಟ್ಟೆಪ್ಪ ರವಳಿ ಮುಂತಾದವರು ಉಪಸ್ಥಿತರಿದ್ದರು.  ವಿದ್ಯಾನಿಧಿ ಪ್ರಕಾಶನ ಗದಗ ಇದರ ಮಾಲೀಕ ಜಯದೇವ ಮೆಣಸಗಿ ಅಧ್ಯಕ್ಷತೆ ವಹಿಸಿದ್ದರು.

ಇದಕ್ಕೂ ಮುಂಚೆ ಗ್ರಂಥ ಹಾಗೂ ಚಂದ್ರಕಾಂತ ಬಿಜ್ಜರಗಿ ಮತ್ತು ನಾನಾ ಸ್ವಾಮೀಜಿಗಳನ್ನು ಸಾರೋಟದಲ್ಲಿ ವಿಜಯಪುರ ನಗರದಲ್ಲಿ ಮೆರವಣಿಗೆ ನಡೆಸಲಾಯಿತು.

ಚಂದ್ರಕಾಂತ ಬಿಜ್ಜರಗಿ ಅವರು ಕಳೆದ ಹಲವಾರು ವರ್ಷಗಳಿಂದ ಹಾಲುಮತದ ಕುರಿತು ಕರ್ನಾಟಕವಷ್ಟೇ ಅಲ್ಲ, ದೇಶದ ನಾನಾ ರಾಜ್ಯಗಳಿಗೆ ತೆರಳಿ ಸಂಶೋಧನೆ ಮಾಡಿ ಈ ಗ್ರಂಥ ರಚಿಸಿರುವುದು ವಿಶೇಷವಾಗಿದೆ.

Leave a Reply

ಹೊಸ ಪೋಸ್ಟ್‌