ವಿಜಯಪುರ: ಬಬಲೇಶ್ವರ ತಾಲೂಕಿನ ದೇವಾಪುರ ಗ್ರಾಮದಲ್ಲಿ ವಿದ್ಯುತ್ ಅದಾಲತ್ ಕಾರ್ಯಕ್ರಮ ನಡೆಯಿತು.
ಹೆಸ್ಕಾಂ ಜಾಗೃತ ದಳದ ಎಇಇ ಗಂಗಾಧರ ಲೋಣಿ, ವಿದ್ಯುತ್ ಕಂಪನಿಯಿಂದ ರೈತರಿಗೆ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಗ್ರಾಮದ ಯುವ ಮುಖಂಡ ಪ್ರಕಾಶ ಬಿರಾದಾರ ಮಾತನಾಡಿ, ಗ್ರಾಮದಲ್ಲಿ ವಿದ್ಯುತ್ ಸರಬರಾಜು ಮಾಡುವ ವಿದ್ಯುತ್ ತಂತಿಗಳುಗಳು ಹಳೆಯದಾಗಿದ್ದು, ಬದಲಾಯಿಸಿ ಸಂಭವನೀಯ ವಿದ್ಯುತ್ ಅವಘಡಗಳನ್ನು ತಪ್ಪಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹೆಸ್ಕಾಂ ದೇವರ ಗೆಣ್ಣೂರ ಶಾಖಾದಿಕಾರಿ ಕಬಾಡೆ, ಸಂಗಮೇಶ ನಾಯ್ಕರ, ಮಳೆಪ್ಪ ಆಣಿ, ಮುತ್ತಪ್ಪ ಬಿರಾದಾರ, ಶ್ರೀಶೈಲ ಕಂತಿ, ಭೀಮನಗೌಡ ಪಾಟೀಲ, ರಮೇಶ ಗಾಮಾ, ಶೇಖಪ್ಪ ಸಿದರಡ್ಡಿ, ಶ್ರೀಶೈಲ ನಾಯ್ಕರ, ಹಣಮಂತ ಕೋನಪ್ಪನವರ, ರಾಜು ಮುಲ್ಲಾ, ತುಕಾರಾಮ ಶಿವಣ್ಣವರ, ಬಸನಗೌಡ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.