Vegetables Day: ಪ್ರೇರಣಾ ಫನ್ ಸ್ಕೂಲ್ ನಲ್ಲಿ ತರಕಾರಿ ದಿನ ಆಚರಣೆ- ಸಂಭ್ರಮಿಸಿದ ಮಕ್ಕಳು

ವಿಜಯಪುರ: ಇಂದಿನ ಆಧುನಿಕ ಮತ್ತು ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಶೈಕ್ಷಣಿಕ ಜೊತೆಗೆ ಸಾಮಾನ್ಯ ಜ್ಞಾನವೂ ಅಗತ್ಯವಾಗಿದೆ.  ಈ ಹಿನ್ನೆಲೆಯಲ್ಲಿ ಬಸವ ನಾಡು ವಿಜಯಪುರದ ಪ್ರೇರಣಾ ಸಂಸ್ಥೆಯ ಪ್ರೇರಣಾ ಫನ್ ಸ್ಕೂಲಿನಲ್ಲಿ ತರಕಾರಿ ದಿನ ಆಚರಿಸಲಾಯಿತು.

ಶಾಲೆಯ ಎಲ್ಲ ಮಕ್ಕಳು ತರಹೇವಾರಿ ತರಕಾರಿಗಳನ್ನು ತೆಗೆದುಕೊಂಡು ಬಂದು ಹಾಗೂ ತರಕಾರಿ ಆಕೃತಿಯ ಚಿತ್ರಪಟಗಳ ಮೂಲಕ ತಾವೇ ಸ್ವತಃ ತರಕಾರಿಗಳಾಗಿ ಗಮನ ಸೆಳೆದರು.  ಶಾಲೆಯ ಸಂಸ್ಥಾಪಕ ಡಾ. ಅರವಿಂದ ವೆ. ಪಾಟೀಲ ಅವರ ಆಶಯದಂತೆ ಇಂದಿನ ಮಕ್ಕಳಿಗೆ ಶಿಕ್ಷಣ ಮಾತ್ರವಲ್ಲದೆ ಶಿಕ್ಷಣದ ಜೊತೆಗೆ ಬೇರೆ ಬೇರೆ ವಿಷಯಗಳ ಜ್ಞಾನವನ್ನು ನೀಡುವುದ ಉಗತ್ಯವಾಗಿದೆ.  ಮಕ್ಕಳಲ್ಲಿ ಪ್ರತಿಯೊಂದು ವಿಷಯದ ಜ್ಞಾನವನ್ನು ಶಾಲೆಯಲ್ಲಿ ನೀಡಬೇಕೆಂಬ ಸದುದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಪ್ರೇರಣಾ ಶಾಲೆಯಲ್ಲಿ ತರಕಾರಿ ದಿನಾಚರಣೆಯಲ್ಲಿ ಪಾಲ್ಗೋಂಡ ಬಾಲಕಿ

ಅದರಂತೆ ಮಕ್ಕಳಲ್ಲಿ ಪ್ರತಿಯೊಂದು ವಿಷಯವನ್ನು ಚಟುವಟಿಕೆಯ ಮೂಲಕ ಜ್ಞಾನದ ಬೀಜವನ್ನ ಬಿತ್ತುವ ಕಾರ್ಯ ನಡೆಯಿತು.  ಈ ಸಂದರ್ಭದಲ್ಲಿ ವಿದ್ಯಾರ್ಥಿ ಸುಕೃತ ಅ. ಪಾಟೀಲ ಮಕ್ಕಳಿಗೆ ಪೂರ್ತಿಯಾಗುವ ವಿಷಯಗಳ ಕುರಿತು ಮಾತನಾಡಿದರು.

 

ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಪಕಿ ಗೀತಾ ಬಿರಾದರವರು ಮತ್ತು ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌