ವಿಜಯಪುರ: ನಾಗಠಾಣ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಚಡಚಣ ಹಾಗೂ ವಿಜಯಪುರ ತಾಲೂಕಿನ ನಾನಾ ದೇವಾಲಯಗಳ ಅಭಿವೃದ್ಧಿಗೆ ರೂ. 2 ಕೋ. ಅನುದಾನ ಬಿಡುಗಡೆಗೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾಡಿದ ಮನವಿಗೆ ಸಿಎಂ ಸ್ಪಂದಿಸಿದ್ದಾರೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಸಚಿವರ ಮನವಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಂದಿಸಿ ರೂ. 2 ಕೋ. ಹಣ ಬಿಡುಗಡೆ ಮಾಡಿದ್ದಾರೆ. ಈ ಎಲ್ಲ ದೇವಾಲಯಗಳಿಗೆ ಆರ್ಥಿಕ ಇಲಾಖೆಯು ವಿಶೇಷ ಅನುದಾನ ನೀಡಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಚಡಚಣ ತಾಲೂಕಿನ ರೇವತಗಾಂವ ಗ್ರಾಮದ ಲಗಮವ್ವ ದೇವಾಲಯಕ್ಕೆ ರೂ. 3 ಲಕ್ಷ, ಮಾತಂಗಿ ದೇವಾಲಯಕ್ಕೆ ರೂ. 2 ಲಕ್ಷ, ಶಿರಾಡೋಣ ಗ್ರಾಮದ ಮಹಾದೇವ ದೇವಾಲಯಕ್ಕೆ ರೂ. 5 ಲಕ್ಷ, ದಸೂರ ಗ್ರಾಮದ ಚಾಮುಂಡಿ ದೇವಾಲಯಕ್ಕೆ ರೂ. 3 ಲಕ್ಷ, ಜೇರಂಕಲಗಿಯ ಶ್ರೀ ಗುರು ರಾಘವೇಂದ್ರ ಮಠದ ದೇವಾಲಯಕ್ಕೆ ರೂ. 5 ಲಕ್ಷ, ಗೋಡಿಹಾಳದ ಶ್ರೀ ಬಿಸಲ ಸಿದ್ದೇಶ್ವರ ದೇವಾಲಯಕ್ಕೆ ರೂ. 3 ಲಕ್ಷ, ಶಿರನಾಳದ ಪಾಂಡುರAಗ ದೇವಾಲಯಕ್ಕೆ ರೂ. 5ಲಕ್ಷ, ಕಾತ್ರಾಳದ ಶ್ರೀ ಮಲ್ಲಿಕಾರ್ಜುನ ದೇವಾಲಯಕ್ಕೆ ರೂ. 5 ಲಕ್ಷ, ದಸೂರದ ಶ್ರೀ ಗಣಪತಿ ದೇವಾಲಯಕ್ಕೆ ರೂ. 2ಲಕ್ಷ, ದೇವರ ನಿಂಬರಗಿಯ ಮರಗಮ್ಮ ದೇವಾಲಯಕ್ಕೆ ರೂ.3 ಲಕ್ಷ, ಹಲಸಂಗಿ ಅಮೃತೇಶ್ವರ ದೇವಾಲಯಕ್ಕೆ ರೂ. 10 ಲಕ್ಷ, ಶಿರನಾಳದ ಶ್ರೀ ದಿಗಂಬರೇಶ್ವರ ದೇವಾಲಯಕ್ಕೆ ರೂ. 10 ಲಕ್ಷ, ಹಲಸಂಗಿಯ ಶ್ರೀ ಪ್ರಭುಲಿಂಗೇಶ್ವರ ದೇವಾಲಯಕ್ಕೆ ರೂ. 2 ಲಕ್ಷ, ಲೋಣಿ ಬಿ.ಕೆ. ಗ್ರಾಮದ ಶ್ರೀ ಸಿದ್ಧಿ ವಿನಾಯಕ ದೇವಾಲಯಕ್ಕೆ ರೂ. 2 ಲಕ್ಷ, ಕಾತ್ರಾಳದ ಶ್ರೀ ಮಲ್ಲಿಕಾರ್ಜುನ ದೇವಾಲಯಕ್ಕೆ ರೂ. 5 ಲಕ್ಷ, ಬರಡೋಲದ ಶ್ರೀ ಚಿದಂಬರ ದೇವಾಲಯಕ್ಕೆ ರೂ. 5 ಲಕ್ಷ, ಶಿರನಾಳದ ಹನುಮಾನ ದೇವಾಲಯಕ್ಕೆ ರೂ. 5 ಲಕ್ಷ, ತಿಡಗುಂದಿಯ ಶ್ರೀ ಹನುಮಾನ ದೇವಾಲಯಕ್ಕೆ ರೂ. 10 ಲಕ್ಷ, ಡೋಮನಾಳದ ಶ್ರೀ ಮಲ್ಲಿಕಾರ್ಜುನ ದೇವಾಲಯಕ್ಕೆ ರೂ. 5 ಲಕ್ಷ, ಖತಿಜಾಪುರದ ಲಕ್ಷ್ಮಿ ದೇವಾಲಯಕ್ಕೆ ರೂ. 5 ಲಕ್ಷ ಹಣ ನೀಡಲಾಗಿದೆ.
ಅದೇ ರೀತಿ ಯೋಗಾಪೂರ ಬಡಾವಣೆ (ವಾ.16) ಶ್ರೀ ಓಂ ಸಾಯಿ ಗಜಾನನ ದೇವಾಲಯ ಬಳಿ ಸಮುದಾಯ ಭವನ ನಿರ್ಮಾಣಕ್ಕೆ ರೂ. 3 ಲಕ್ಷ, ಬ್ಯಾಂಕರ್ಸ ಕಾಲೋನಿ ಮರಗಮ್ಮ ದೇವಾಲಯದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ರೂ. 3 ಲಕ್ಷ, ಶಾಂತಿನಿಕೇತನ ಶಾಲೆ ಬಳಿ ಇರುವ ಲಕ್ಷ್ಮಿದೇವಿ ದೇವಾಲಯದ ಸಮುದಾಯ ಭವನ ನಿರ್ಮಾಣಕ್ಕೆ ರೂ. 3 ಲಕ್ಷ ಮಂಜೂರಾಗಿದೆ.
ಅಷ್ಟೇ ಅಲ್ಲ, ಜುಮನಾಳ ಗ್ರಾಮದ ಹುಲಿಗೆಮ್ಮ ದೇವಾಲಯ ಬಳಿ ಸಮುದಾಯ ಭವನ ನಿರ್ಮಾಣಕ್ಕೆ ರೂ. 3 ಲಕ್ಷ, ಹೊನ್ನುಟಗಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಾಲಯ ಬಳಿ ಸಮುದಾಯ ಭವನ ನಿರ್ಮಾಣಕ್ಕೆ ರೂ. 3 ಲಕ್ಷ, ಹೊನ್ನುಟಗಿ ಗ್ರಾಮದ ಮಲ್ಲಿಕಾರ್ಜುನ ದೇವಾಲಯದ ಬಳಿ ಸಮುದಾಯ ಭವನ ನಿರ್ಮಾಣಕ್ಕೆ ರೂ. 10 ಲಕ್ಷ, ಬೊಮ್ಮನಹಳ್ಳಿ ಗ್ರಾಮದಲ್ಲಿ ಶ್ರೀ ಜಡೆಯ ಶಾಂತಲಿಂಗೇಶ್ವರ ಬಳಿ ಸಮುದಾಯ ಭವನ ನಿರ್ಮಾಣಕ್ಕೆ ರೂ. 5 ಲಕ್ಷ, ಬೊಮ್ಮನಹಳ್ಳಿ ಗವಿಮಠದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ರೂ. 10 ಲಕ್ಷ, ಕನ್ನಾಳ ಗ್ರಾಮದ ಭೀಮಾಶಂಕರ ಮಠದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ರೂ. 5 ಲಕ್ಷ ಹಾಗೂ ಗುಣಕಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಾಲಯದ ಮುಂಭಾಗದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ರೂ. 5 ಲಕ್ಷ, ಶಿವಣಗಿಯ ಮಾದಾರ ಓಣಿಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ರೂ. 25 ಲಕ್ಷ, ಮಧಭಾವಿ ಗ್ರಾಮದಲ್ಲಿ ಭೋವಿ ಸಮಾಜದ ದುರ್ಗಾದೇವಿ ದೇವಾಲಯದ ಬಳಿ ಸಮುದಾಯ ಭವನ ನಿರ್ಮಾಣಕ್ಕೆ ರೂ. 10 ಲಕ್ಷ, ಹಡಗಲಿ ಗ್ರಾಮದಲ್ಲಿ ಹರಿಜನ ಕೇರಿಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ರೂ. 20 ಲಕ್ಷ, ಕವಲಗಿ ಗ್ರಾಮದಲ್ಲಿ ಮಾದರ ಓಣಿಯಲ್ಲಿ ಮರಗಮ್ಮ ದೇವಾಲಯ ನಿರ್ಮಾಣಕ್ಕೆ ರೂ. 5 ಲಕ್ಷ, ಐನಾಪೂರ ಗ್ರಾಮದಲ್ಲಿ ಡಾ. ಅಂಬೇಡ್ಕರ ಸಮುದಾಯ ಭವನ ನಿರ್ಮಾಣಕ್ಕೆ ರೂ. 20 ಲಕ್ಷ, ನಾಗಠಾಣ ಗ್ರಾಮದಲ್ಲಿ ಡಾ. ಬಿ. ಆರ್. ಅಂಬೇಡ್ಕರ ಸಮುದಾಯ ಭವನ ನಿರ್ಮಾಣಕ್ಕೆ ರೂ. 20 ಲಕ್ಷ, ಹೆಗಡಿಹಾಳ ಗ್ರಾಮದಲ್ಲಿ ಭೋವಿ ಸಮಾಜದ ಸಮುದಾಯ ಭವನ ನಿರ್ಮಾಣಕ್ಕಾಗಿ ರೂ. 5 ಲಕ್ಷ, ಜುಮನಾಳ ಗ್ರಾಂದ ಮಾದಾರ ಕಾಲೋನಿಯಲ್ಲಿರುವ ಶ್ರೀ ಮಹಾಲಕ್ಷ್ಮಿ ದೇವಾಲಯದ ಬಳಿ ಸಮುದಾಯ ಭವನ ನಿರ್ಮಾಣಕ್ಕಾಗಿ ರೂ. 5 ಲಕ್ಷ ಅನುದಾನವನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದ್ದಾರೆ ಎಂದು ಉಮೇಶ ಕಾರಜೋಳ ತಿಳಿಸಿದ್ದಾರೆ.