MS Loni Congress: ಮಲ್ಲಿಕಾರ್ಜುನ ಎಸ್. ಲೋಣಿ ಕಾಂಗ್ರೆಸ್ ಸೇರ್ಪಡೆ

ಬೆಂಗಳೂರು: ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮತ್ತು 2021ರಲ್ಲಿ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿದ್ದ ಮಲ್ಲಿಕಾರ್ಜುನ ಎಸ್. ಲೋಣಿ ಅವರು ಕಾಂಗ್ರೆಸ್ಸಿಗೆ ಮರುಸೇರ್ಪಡೆಯಾಗಿದ್ದಾರೆ. ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ವಿಧಾನಸಭೆ ಪ್ರತಿಪಕ್ಷದ ನಾಯಕ ಎಸ್.ಸಿದ್ಧರಾಮಯ್ಯ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಅವರ ಸಮ್ಮುಖದಲ್ಲಿ ಮಲ್ಲಿಕಾರ್ಜುನ ಎಸ್. ಲೋಣಿ ಕಾಂಗ್ರೇಸ್ಗೆ ಸೇರ್ಪಡೆಯಾದರು. ಡಿ.ಕೆ.ಶಿವಕುಮಾರ ಮತ್ತು ಎಸ್. ಸಿದ್ಧರಾಮಯ್ಯ ಕಾಂಗ್ರೆಸ್ ಬಾವುಟ ನೀಡುವ ಮೂಲಕ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಕೂಡ […]

Arasiddhi Lokayukta SP: ರಾಯಚೂರು ಲೋಕಾಯುಕ್ತ ಎಸ್ಪಿಯಾಗಿ ಡಾ. ರಾಮ ಲಕ್ಷ್ನಣಸಾ ಅರಸಿದ್ಧಿ ಅಧಿಕಾರ ಸ್ವೀಕಾರ

ರಾಯಚೂರು: ರಾಯಚೂರು ಲೋಕಾಯುಕ್ತ ನೂತನ ಎಸ್ಪಿಯಾಗಿ ಡಾ. ರಾಮ ಲಕ್ಷ್ನಣಸಾ ಅರಸಿದ್ಧಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಮುಂಚೆ ವಿಜಯಪುರ ಡಿವೈಎಸ್ಪಿ, ಬೆಳಗಾವಿ ಎಎಸ್ಪಿ ಮತ್ತು ವಿಜಯಪುರ ಎಎಸ್ಪಿಯಾಗಿ ಅವರು ಸೇವೆ ಸಲ್ಲಿಸಿದ್ದಾರೆ. ವಿಜಯಪುರ ಡಿವೈಎಸ್ಪಿಯಾಗಿದ್ದಾಗ ಎಎಸ್ಪಿಯಾಗಿ ಅವರು ಬಡ್ತಿ ಹೊಂದಿದ್ದರು. ಬಳಿಕ ವರ್ಗಾವಣೆಯಾಗಿದ್ದರು. ಎಎಸ್ಪಿಯಾಗಿ ವಿಜಯಪುರದಲ್ಲಿ ಸುಮಾರು ಮೂರು ವರ್ಷ ಸೇವೆ ಸಲ್ಲಿಸಿದ್ದರು. ವಿಜಯಪುರ ಎಎಸ್ಪಿಯಾಗಿರುವಾಗಲೇ ಅವರು ಐಪಿಎಸ್ ಅಧಿಕಾರಿಯಾಗಿ ಬಡ್ತಿ ಪಡೆದಿದ್ದರು. ನಂತರ ವಿಜಯಪುರದಿಂದ ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆಯಾಗಿದ್ದರು. ಈಗ ಅವರು ರಾಯಚೂರು ಲೋಕಾಯುಕ್ತ ಎಸ್ಪಿಯಾಗಿ […]

Yantal High Command: ರಾಜ್ಯ ನಾಯಕರಿಗೆ ನನ್ನ ಶಕ್ತಿ ಮನವರಿಕೆಯಾಗಿದೆ- ಅಪರಾಧ ತನಿಖೆಗೆ ಸಿಎಂ, ಗೃಹ ಸಚಿವರು ಪೋಲೀಸರಿಗೆ ಮುಕ್ತ ಸ್ವಾತಂತ್ರ್ಯ ನೀಡಲಿ- ಶಾಸಕ ಯತ್ನಾಳ ಆಗ್ರಹ

ವಿಜಯಪುರ: ರಾಜ್ಯ ನಾಯಕರಿಗೆ ನನ್ನ ಶಕ್ತಿ ಏನು ಎಂಬುದು ಅರಿವಾಗಿದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. ವಿಜಯಪುದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿಗೆ ತಮ್ಮನ್ನು ಆಹ್ವಾನಿಸಿರುವ ಕುರಿತು ಪ್ರತಿಕ್ರಿಯೆ ನೀಡಿದರು. ಪಕ್ಷ ಆಹ್ವಾನ ನೀಡಿದೆ ಅದಕ್ಕಾಗಿ ಬಂದಿದ್ದೇನೆ.  ಶಾಸಕನಾದ ಬಳಿಕ ಇದೇ ಮೊದಲ ಬಾರಿಗೆ ಆಹ್ವಾನ ನೀಡಿದ್ದಾರೆ.  ಹೀಗಾಗಿ ಬಂದಿದ್ದೇನೆ.  ಈ ಹಿಂದೆ ಸ್ಥಳೀಯ ಮುಖಂಡರು ಪಕ್ಷದ ರಾಜ್ಯ ನಾಯಕರಿಗೆ ನನ್ನ ಬಗ್ಗೆ ಅಪಪ್ರಚಾರ ಮಾಡಿದ್ದರು.  […]

Organisers Honour: ಒಗ್ಗಟ್ಟು, ಶ್ರದ್ಧೆ, ಸಮರ್ಪಣೆ ಮನೋಭಾವನೆ ಕಾರ್ಯಕ್ರಮಗಳ ಯಶಸ್ಸಿಗೆ ಕಾರಣ- ಆರ್. ಬಿ. ಕೊಟ್ನಾಳ

ವಿಜಯಪುರ, 21: ಒಗ್ಗಟ್ಟು, ಶ್ರದ್ಧೆ ಮತ್ತು ಸಮರ್ಪಣೆ ಮನೋಭಾವ ಪ್ರತಿಯೊಂದು ಕಾರ್ಯಕ್ರಮಗಳ ಯಶಸ್ಸಿಗೆ ಕಾರಣವಾಗುತ್ತವೆ ಎಂದು ಬಿ.ಎಲ್.ಡಿ.ಇ. ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್.ಬಿ.ಕೊಟ್ನಾಳ ಹೇಳಿದ್ದಾರೆ. ನಗರದ ಎಸ್.ಎಸ್.ಪಿ.ಯು.ಕಾಲೇಜಿನಲ್ಲಿ ನಡೆದ ಖೋ ಖೋ ಕ್ರೀಡಾಕೂಟದ ಯಶಸ್ಸಿಗೆ ಕಾರಣರಾದ ತರಬೇತುದಾರರು, ಶಿಕ್ಷಕರು, ನಿರ್ಣಾಯಕರು ಮತ್ತು ನಾನಾ ಕಾಲೇಜುಗಳ ಬೋಧಕ ಹಾಗೂ ಬೋಧಕರ ಹೊರತಾದ ಸಿಬ್ಬಂದಿಗಳಿಗೆ ಅಭಿನಂದನೆ ಸಮಾರಂಭದಲ್ಲಿ ಅವರು ಮಾತನಾಡಿದರು. ನವೆಂಬರ 9 ಮತ್ತು 10ರಂದು ಬಿ.ಎಲ್.ಡಿ.ಇ. ಮೆಡಿಕಲ್ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆದ ಪಿಯು ಕಾಲೇಜುಗಳ ಎರಡು ದಿನಗಳ […]

Danammadevi Prasad Samiti: ದಾನಮ್ಮದೇವಿ ಪ್ರಸಾದ ಸಮಿತಿ, ಜಗದ್ಗುರು ಪಂಚಾಚಾರ್ಯ ಸೇವಾ ಸಮಿತಿಯಿಂದ ಗುಡ್ಡಾಪುರ ಪಾದಯಾತ್ರಿಗಳಿಗೆ ಪ್ರಸಾದ ವಿತರಣೆ

ವಿಜಯಪುರ: ಉತ್ತರ ಕರ್ನಾಟಕದ ಆರಾಧ್ಯದೈವ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ ತಾಲೂಕಿನ ಗುಡ್ಡಾಪುರ ದಾನಮ್ಮದೇವಿ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದ್ದು, ವಿಜಯಪುರದಿಂದ ಲಕ್ಷಾಂತರ ಭಕ್ತರು ಪಾದಯಾತ್ರೆಯಲ್ಲಿ ತಾಯಿಯ ದರ್ಶನಕ್ಕೆ ತೆರಳುತ್ತಿದ್ದಾರೆ. ಈ ಪಾದಯಾತ್ರಿಗಳಿಗೆ ಬೀಳ್ಕೋಡುಗೆ ಸಮಾರಂಭ ವಿಜಯಪುರ ನಗರದ ಗ್ರಾಮದೇವತೆ ಶ್ರೀ ಸಿದ್ಧೇಶ್ವದ ದೇವಸ್ಥಾನದ ಎದುರು ನಡೆಯಿತು.  ದಾನಮ್ಮದೇವಿ ಪ್ರಸಾದ ಸೇವಾ ಸಮಿತಿ ಹಾಗೂ ಜಗದ್ಗುರು ಪಂಚಾಚಾರ್ಯ ಸೇವಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ದೇವರ ಹಿಪ್ಪರಗಿಯ ಶ್ರೀ ಶಿವಯೋಗಿ ಮಹಾಸ್ವಾಮಿಗಳು ಚಾಲನೆ ನೀಡಿದರು. ಈ ಸಂದರ್ಭದಲ್ಲಿ […]