Arasiddhi Lokayukta SP: ರಾಯಚೂರು ಲೋಕಾಯುಕ್ತ ಎಸ್ಪಿಯಾಗಿ ಡಾ. ರಾಮ ಲಕ್ಷ್ನಣಸಾ ಅರಸಿದ್ಧಿ ಅಧಿಕಾರ ಸ್ವೀಕಾರ

ರಾಯಚೂರು: ರಾಯಚೂರು ಲೋಕಾಯುಕ್ತ ನೂತನ ಎಸ್ಪಿಯಾಗಿ ಡಾ. ರಾಮ ಲಕ್ಷ್ನಣಸಾ ಅರಸಿದ್ಧಿ ಅಧಿಕಾರ ವಹಿಸಿಕೊಂಡಿದ್ದಾರೆ.

ಈ ಮುಂಚೆ ವಿಜಯಪುರ ಡಿವೈಎಸ್ಪಿ, ಬೆಳಗಾವಿ ಎಎಸ್ಪಿ ಮತ್ತು ವಿಜಯಪುರ ಎಎಸ್ಪಿಯಾಗಿ ಅವರು ಸೇವೆ ಸಲ್ಲಿಸಿದ್ದಾರೆ. ವಿಜಯಪುರ ಡಿವೈಎಸ್ಪಿಯಾಗಿದ್ದಾಗ ಎಎಸ್ಪಿಯಾಗಿ ಅವರು ಬಡ್ತಿ ಹೊಂದಿದ್ದರು. ಬಳಿಕ ವರ್ಗಾವಣೆಯಾಗಿದ್ದರು. ಎಎಸ್ಪಿಯಾಗಿ ವಿಜಯಪುರದಲ್ಲಿ ಸುಮಾರು ಮೂರು ವರ್ಷ ಸೇವೆ ಸಲ್ಲಿಸಿದ್ದರು.

ರಾಯಚೂರು ಲೋಕಾಯುಕ್ತ ಎಸ್ಪಿ ಡಾ. ರಾಮ ಲಕ್ಷ್ಮಣಸಾ ಅರಸಿದ್ದಿ ಅವರಿಗೆ ಶುಭ ಕೋರಿದ ಅಧಿಕಾರಿಗಳು

ವಿಜಯಪುರ ಎಎಸ್ಪಿಯಾಗಿರುವಾಗಲೇ ಅವರು ಐಪಿಎಸ್ ಅಧಿಕಾರಿಯಾಗಿ ಬಡ್ತಿ ಪಡೆದಿದ್ದರು. ನಂತರ ವಿಜಯಪುರದಿಂದ ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆಯಾಗಿದ್ದರು.

ಈಗ ಅವರು ರಾಯಚೂರು ಲೋಕಾಯುಕ್ತ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಬಸವ ನಾಡು ವಿಜಯಪುರದಲ್ಲಿದ್ದಾಗಲೇ ಡಾ. ರಾಮ ಲಕ್ಷ್ಮಣಸಾ ಅರಸಿದ್ಧಿ ಎರಡು ಬಾರಿ ಉನ್ನತ ಹುದ್ದೆಗೆ ಬಡ್ತಿ ಪಡೆದಿರುವುದು ಗಮನಾರ್ಹವಾಗಿದೆ.

ಬಸವ ನಾಡು ವೆಬ್ ಅವರ ಹೊಸ ಜವಾಬ್ದಾರಿಗೆ ಶುಭ ಕೋರುತ್ತದೆ.

Leave a Reply

ಹೊಸ ಪೋಸ್ಟ್‌