ವಿಜಯಪುರ: ರಾಜ್ಯ ನಾಯಕರಿಗೆ ನನ್ನ ಶಕ್ತಿ ಏನು ಎಂಬುದು ಅರಿವಾಗಿದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ವಿಜಯಪುದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿಗೆ ತಮ್ಮನ್ನು ಆಹ್ವಾನಿಸಿರುವ ಕುರಿತು ಪ್ರತಿಕ್ರಿಯೆ ನೀಡಿದರು.
ಪಕ್ಷ ಆಹ್ವಾನ ನೀಡಿದೆ ಅದಕ್ಕಾಗಿ ಬಂದಿದ್ದೇನೆ. ಶಾಸಕನಾದ ಬಳಿಕ ಇದೇ ಮೊದಲ ಬಾರಿಗೆ ಆಹ್ವಾನ ನೀಡಿದ್ದಾರೆ. ಹೀಗಾಗಿ ಬಂದಿದ್ದೇನೆ. ಈ ಹಿಂದೆ ಸ್ಥಳೀಯ ಮುಖಂಡರು ಪಕ್ಷದ ರಾಜ್ಯ ನಾಯಕರಿಗೆ ನನ್ನ ಬಗ್ಗೆ ಅಪಪ್ರಚಾರ ಮಾಡಿದ್ದರು. ಇದೀಗ ರಾಜ್ಯ ನಾಯಕರಿಗೆ ನನ್ನ ಶಕ್ತಿ ಏನು ಎಂಬುದು ಅರಿವಾಗಿದೆ. ಮೊನ್ನೆ ನಡೆದ ಪಾಲಿಕೆ ಚುನಾವಣೆ ಫಲಿತಾಂಶದಿಂದ ರಾಜ್ಯ ನಾಯಕರಿಗೆ ಮನವರಿಕೆಯಾಗಿದೆ. ಯತ್ನಾಳ್ ಹಿಂದುತ್ವವಾದಿ, ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎಂಬುದು ಅವರಿಗೆ ಮನವರಿಕೆ ಆಗಿದೆ. ಅದಕ್ಕೆ ಅವರು ಆಹ್ವಾನ ನೀಡಿದ್ದಾರೆ. ನಾನು ಬಂದಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದರು.
ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯ ನೀಡಿ
ಮಂಗಳೂರಿನಲ್ಲಿ ಕುಕ್ಕರ್ ಬ್ಲಾಸ್ಚ್ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಬೊಮ್ಮಾಯಿ ಮತ್ತು ಗೃಹ ಸಚಿವ ಅರಗ ಜ್ಞಾನೇಂದ್ರ ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯ ನೀಡಬೇಕು. ಪೊಲೀಸರಿಗೆ ಮುಕ್ತ ಅಧಿಕಾರ ಕೊಡಬೇಕು ಎಂದು ಸಿಎಂ ಮತ್ತು ಗೃಹ ಸಚಿವರಿಗೆ ಹೇಳಿದ್ದೇನೆ. ಉತ್ತರ ಪ್ರದೇಶದಲ್ಲಿ ಹೇಗೆ ಕಠಿಣ ಕ್ರಮ ಕೈಗೊಳ್ಳುತ್ತಾರೆ ಅದೇ ರೀತಿ ಕಠಿಣ ಕ್ರಮ ಕೈಗೊಳ್ಳಬೇಕು. ಕೇವಲ ಬಾಯಿಂದ ಕಠಿಣ ಕ್ರಮ ಎಂದು ಹೇಳುವುದರಿಂದ ಯಾವುದೂ ಆಗುವುದಿಲ್ಲ. ನಾಲ್ಕಾರು ಎನ್ ಕೌಂಟರ್ ಮಾಡಿ ಬುದ್ದಿ ಕಲಿಸದಿದ್ದರೆ ದೇಶವಿರೋಧಿ ಭಯೋತ್ಪಾದಕರು ಈ ರೀತಿ ರಾಜಾರೋಷವಾಗಿ ದುಷ್ಕೃತ್ಯ ಮಾಡುತ್ತಾರೆ ಎಂದು ಅವರು ಹೇಳಿದರು.
ಗೃಹ ಮಂತ್ರಿಗಳು ಒಳ್ಳೆಯವರಿದ್ದಾರೆ. ಆದರೆ, ಅವರು ಕಠಈಣ ಕ್ರಮ ಕೈಗೊಳ್ಳುತ್ತಿಲ್ಲ ಅಷ್ಟೆ. ಅವರ ಒಳ್ಳೆಯತನ ನಡೆಯಲ್ಲ. ಹೋಂ ಡಿಪಾರ್ಟ್ ಮೆಂಟ್ ಗೆ ಸ್ಟ್ರಾಂಗ್ ಮಿನಿಸ್ಚರ್ ಬೇಕು. ಖಡಕ್ ಆಗಿ ನಿರ್ಣಯ ತೆಗೆದುಕೊಳ್ಳಬೇಕು. ಸಿಎಂ ಬೊಮ್ಮಾಯಿ ಅವರು ಸಚಿವ ಸಂಪುಟ ಅದನ್ನು ಮಾಡ್ತೀನಿ, ಇದನ್ನ ಮಾಡ್ತೀನಿ ಅಂತಾರೆ. ಆದಷ್ಟು ಬೇಗನೆ ಒಂದು ಒಳ್ಳೆ ವ್ಯವಸ್ಥೆ ಮಾಡಬೇಕು ಎಂದು ಯತ್ನಾಳ ಆಗ್ರಹಿಸಿದರು.
ಮುಧೋಳದಲ್ಲಿ ಕಬ್ಬು ಬೆಳೆಗಾರರ ಹೋರಾಟ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಮುಧೋಳದಲ್ಲೇ ಕಬ್ಬು ಬೆಳೆಗಾರರರು ಯಾಕೆ ಹೋರಾಟ ಮಾಡುತ್ತಿದ್ದಾರೆ? ಏಕೆಂದರೆ ಅವರು(ನಿರಾಣಿ) ರೈತರೊಂದಿಗೆ ಸಹಕಾರ ಹೊಂದಿಲ್ಲ. ರೈತರ ಭಾವನೆಗಳಿಗೆ ಸ್ಪಂದಿಸುವುದಿಲ್ಲ. ಕಾರ್ಖಾನೆ ಮಾಲೀಕರು ರೈತರೊಂದಿಗೆ ಸೌಹಾರ್ದಯುತವಾಗಿ ಮಾತುಕಥೆ ಮಾಡಿದರೆ ಅವರು ಒಪ್ಪುತ್ತಾರೆ. ಅದನ್ನ ಬಿಟ್ಟು ದುರಹಂಕಾರ ಮಾಡಿದರೆ, ನಾನು ಏನು ಬೇಕಾದರೂ ಮಾಡಬಹುದು ಎಂದು ಮಾಡಿದರೆ ರೈತರು ರೊಚ್ಚಿಗೇಳ್ತಾರೆ ಎಂದು ಅವರು ಎಚ್ಚರಿಕೆ ನೀಡಿದರು.
ಪಂಚಮಸಾಲಿ ಮೀಸಲಾತಿ ಹೋರಾಟ ವಿಚಾರ
ಪಂಚಮಸಾಲಿ ಮೀಸಲಾತಿ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಶಾಸಕರು, ಮೊನ್ನೆ ಎಸ್ಸಿ ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಿಸಿದ್ದು, ಮೊದಲ ಹೆಜ್ಜೆ. ಎರಡನೇ ಹೆಜ್ಜೆಯಾಗಿ ಹಿಂದುಳಿದ ವರ್ಗಕ್ಕೆ ಅನೇಕ ಸಮುದಾಯ ಸೇರಿಸಬೇಕಿದೆ. ತಳವಾರ ಸಮುಾದಯಕ್ಕೆ ಎಸ್ ಟಿ ಮೀಸಲಾತಿ ನೀಡುವ ಬಗ್ಗೆ ವಿಧಾನ ಸಭೆಯಲ್ಲಿ ನಾವು ಹೋರಾಟ ಮಾಡಿದ್ದೆವು. ಅಗ ಅವರಿಗೆ ಪ್ರಮಾಣ ಪತ್ರ ನೀಡುತ್ತಿದ್ದಾರೆ. ಮುಂದೆ ಹಾಲುಮತ ಸಮಾಜ ಎಸ್ ಟಿಗೆ ಹೋಗುವುದು ನಿರ್ಣಯ ಆಗಬೇಕಿದೆ ಎಂದು ಕೇಂದ್ರ ಮಾಜಿ ಸಚಿವರು ಹೇಳಿದರು.
ನೋಡಿ ಸಿದ್ರಾಮಯ್ಯ ಅವರು ಯಾವರೀತಿ ಮೇಲ್ಜಾತಿಯವರನ್ನು ದ್ವೇಷ ಮಾಡ್ತಾರೆ. ಒಬಿಸಿಯಲ್ಲಿ 10% ಮೀಸಲಾತಿ ಕೊಟ್ಟರೆ ಇವರಿಗೆ ಏನು ಬ್ಯಾನಿ(ನೋವು) ಆಗುತ್ತೆ? ಸಿದ್ರಾಮಯ್ಯಗೆ ಏನು ಬ್ಯಾನಿ? ಲಿಂಗಾಯತರು, ಬ್ರಾಹ್ಮಣರು, ಮರಾಠರು, ರಜಪೂತರು ಮತ್ತು ವಿಶ್ವಕರ್ಮ ಸಮಾಜಗಳಲ್ಲಿ ಬಡತನ ಇಲ್ವಾ? ಎಲ್ಲಾ ಸಮಾಜದಲ್ಲಿ ಬಡತನ ಎಂಬುದು ಇದೆ. ಯಾವುದೇ ಒಂದು ಮೇಲ್ಜಾತಿಯಲ್ಲಿ ಹುಟ್ಟಿದ್ದಾರೆ ಎಂದರೆ ಎಲ್ಲರೂ ಟಾಟಾ ಬಿರ್ಲಾ ಇರಲ್ಲ. ಎಲ್ಲಾ ಸಮುದಾಯಗಳ ಹಿಂದುಳಿದ ಜನರಿಗಾಗಿ ಪ್ರಧಾನಿ ಮೋದಿ ಅವರು ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗೆ ಶೇ. 10 ರಷ್ಟು ಮೀಸಲಾತಿ ನೀಡಿದ್ದಾರೆ. ನಮ್ಮ ಜಾತಿಯಲ್ಲಿ ನಾನೊಬ್ಬ ಶ್ರೀಮಂತ ಇರಬಹುದು. ಆದರೆ, ಕೂಲಿ ಮಾಡುವವರು ಇ್ದದಾರೆ. ಕಂಡಕ್ಟರ್ ಕೂಡ ಇದ್ದಾರೆ. ಬ್ರಾಹ್ಮಂಡರಲ್ಲಿ ಮೂರು ಸಾವಿರಕ್ಕೆ ಜೀವನ ಮಾಡುವಷ್ಟೂ ಬಡವರು ಇದ್ದಾರೆ. ಇಂಥ ಸಮುದಾಯದ ಬಡವರಿಗೆ ಪ್ರಧಾನ ಮಂತ್ರಿಗಳು ಬಹಳದೊಡ್ಡ ಉಪಕಾರ ಮಾಡಿದ್ದಾರೆ. ಶೇ. 10 ಮೀಸಲಾತಿಯನ್ನು ನಾವ್ಯಾರೂ ಶ್ರೀಮಂತರು, ಜಮೀನ್ದಾರು ಕೇಳ್ತಿಲ್ಲ. ಸಮುದಾಯದಲ್ಲಿರುವ ಬಡವರಿಗೆ ಕೊಟ್ಟಿದ್ದನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ ಎಂದು ಮಾಜಿ ಸಿಎೞ ಎಸ್. ಸಿದ್ಧರಾಮಯ್ ವಿರುದ್ಧ ಯತ್ನಾಳ ಹರಿಹಾಯ್ದರು.
ಆದರೂ ಸಿದ್ಧರಾಮಯ್ಯ ಸಮಾಜಕ್ಕೆ ಕೊಟ್ಟಿದ್ದರ ಬಗ್ಗೆ ವಿರೋಧ ಮಾಡ್ತಾನೆ. ಇವರ ಬಣ್ಣ ಬಯಲಾಗಿದೆ, ನೀವು ಬರೀ ಮುಸ್ಲಿಮರಿಗೆ ಎಲ್ಲ ಕೊಡಿ ಎಂದು ಹೇಳ್ತಿರಿ. ಮುಸ್ಪಿಮರಿಗೆ ಮೀಸಲಾತಿ ಕೊಡಬೇಕು. ಮುಸ್ಲಿಮರು 2A ನಲ್ಲೂ ಇದ್ದಾರೆ. ಅಲ್ಪಸಂಖ್ಯಾತರಲ್ಲೂ ಇದ್ದಾರೆ. ಈ ದೇಶದ ಅನ್ನ ತಿಂತಾರೆ. ಈ ದೇಶದ ಸಬ್ಸಿಡಿ ತೆಗೆದುಕೊಳ್ಳುತ್ತಾರೆ. ಈ ದೇಶದ ಗ್ಯಾಸ್ ತಗೋತಾರೆ. ಆದರೂ ಮೋದಿ ಅವರಿಗೆ ಬಾಯಿಗೆ ಬಂದಂಗೆ ಬೈತಾರೆ. ಆದರೆ, ಸಿದ್ಧರಾಮಯ್ಯ? ಮೇಲ್ಜಾತಿಯವರು ಕಾಂಗ್ರೆಸ್ ಗೆ ಓಟ್ ಹಾಕಲ್ವಾ? ಸಿದ್ಧರಾಮಯ್ಯ ಅವರಿಗೆ ಲಿಂಗಾಯತರು, ಬ್ರಾಹ್ಮಣರು ಓಟ್ ಹಾಕಿಲ್ವಾ? ಸಿದ್ರಾಮಯ್ಯ ಈ ದ್ವಿಮುಖ ನೀತಿ ಅವರ ಅಂತ್ಯವಾಗಲಿದೆ. ಇವರು ಇದೇ ರೀತಿ ಉದ್ಧಟತನದಿಂದ ಹಿಂದೂಗಳ ವಿರುದ್ಧ ಹೇಳಿಕೆ ತೊೡುಚ್ಚ. ಆರ್ಥಿಕವಾಗಿ ಹಿಂದುಳಿದವರಿಗೆ ಶೇ. 10 ಮೀಸಲಾತಿ ನೀಡಬೇಡಿ ಎಂದು ಹೇಳುತ್ತಾರೆ. ಒಬಿಸಿ ಗೆ ಶೇ. 10 ಮೀಸಲಾತಿ ನೀಡಬೇಕು ಎನ್ನುತ್ತಿರುವ ಸಿದ್ಧರಾಮಯ್ಯ ಅವರಿಗೆ ಇದು ಅಂತ್ಯದ ಕಾಲ. ನಿನ್ನೆ ಸಿದ್ರಾಮಯ್ಯ ಕೊಟ್ಟ ಹೇಳಿಕೆಯನ್ನು ತೀವ್ರವಾಗಿ ನಾನು ಖಂಡಿಸ್ತೆನೆ. ಅವರು ತಕ್ಷಣ ಈ ರಾಜ್ಯದ ಒಬಿಸಿ ಸೇರ್ಪಡೆಯಾಗುವ ಎಲ್ಲಾ ಸಮುದಾಯಗಳ ಕ್ಷಮೆ ಕೇಳಬೇಕು ಎಂದು ಆಗ್ರಹಿಸುತ್ತೇನೆ ಎಂದು ಅವರು ಹೇಳಿದರು.
ಬಿಬಿಎಂಪಿ ಓಟರ್ ಐಡಿ ಡಿಲೀಟ್, ಕಾಂಗ್ರೆಸ್ ಆರೋಪ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಮ್ಮ ವಿಜಯಪುರ ಮಹಾನಗರ ಪಾಲಿಕೆ ಎಲೆಕ್ಷನ್ ವೇಳೆ ಸಾಕಷ್ಟು ಡಿಲೀಟ್ ಆಗಿವೆ. ಮಹಾನಗರ ಪಾಲಿಕೆ ಮತದಾರರ ಪಟ್ಟಿ ತಯಾರು ಮಾಡುವಲ್ಲಿ ಅನುಭವದ ಕೊರತೆ ಇದೆ. ಹಾಗಾಗಿ ಬದುಕಿದ್ದವರು ಸತ್ತಿದ್ದಾರೆ, ಸತ್ತವರು ಬದುಕಿದ್ದಾರೆ ಎಂಬಂತೆ ಆಗಿದೆ. ಇದು ಯಾವುದೋ ಒಂದೇ ಕಮ್ಯೂನಿಟಿಗೆ ಆಗಿದ್ದಲ್ಲ ಎಂದು ಶಾಸಕರು ಹೇಳಿದರು.
ಮುಸ್ಲಿಂ, ಹಿಂದೂಗಳ ಹೆಸರುಗಳೂ ಡಿಲೀಟ್ ಆಗಿವೆ
ವಿಧಾನಸಭೆ ಚುನಾವಣೆಗೆ ಕಂದಾಯ ಇಲಾಖೆಯವರು ಮತದಾರರ ಪಟ್ಟಿ ತಯಾರು ಮಾಡುತ್ತಾರೆ. ಅವರು ವ್ಯವಸ್ಥಿತವಾಗಿ ಮಾಡುತ್ತಾರೆ. ಈಗ ಆಪ್ ಬಂದಿದೆ. ದೇಶದಲ್ಲಿ ಯಾವುದೋ ಮೂಲೆಯಲ್ಲಿ ಸೇರಿ ಎರಡೆರಡು ಓಟರ್ ಐಡಿ ಇದ್ರೂ ಡಿಲೀಟ್ ಆಗುತ್ತವೆ. ಇನ್ನು ಹದಿನೈದು ದಿನದಲ್ಲಿ ರಾಷ್ಟ್ರೀಯ ಆಪ್ ಬರಲಿದೆ. ಅದು ಬಂದ್ರೆ ಒಬ್ಬ ಮತದಾರ ಕಾಶ್ಮೀರದಲ್ಲೂ ಹಾಗೂ ವಿಜಯಪುರದಲ್ಲೂ ಓಟರ್ ಐಡಿ ಮಾಡಿಸಿದರೆ ಅದರಲ್ಲಿ ಗೊತ್ತಾಗುತ್ತದೆ. ಅವರು ಒಂದೇ ಕಡೆ ಆಪ್ಷನ್ ಇಟ್ಕೊಳೋಕೆ ಅವಕಾಶ ಇದೆ, ಇನ್ನೊಂದು ಅಟೊಮೇಟಿಕ್ ಆಗಿ ಡಿಲೀಟ್ ಆಗುತ್ತದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಕಾರ್ಪೋರೇಟರ್ ಪ್ರೇಮಾನಂದ ಬಿರಾದಾರ, ಮುಖಂಡ ರಾಜು ಜಾಧವ ಮತ್ತೀತರರು ಉಪಸ್ಥಿತರಿದ್ದರು.