ವಿಜಯಪುರ: ಉತ್ತರ ಕರ್ನಾಟಕದ ಆರಾಧ್ಯದೈವ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ ತಾಲೂಕಿನ ಗುಡ್ಡಾಪುರ ದಾನಮ್ಮದೇವಿ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದ್ದು, ವಿಜಯಪುರದಿಂದ ಲಕ್ಷಾಂತರ ಭಕ್ತರು ಪಾದಯಾತ್ರೆಯಲ್ಲಿ ತಾಯಿಯ ದರ್ಶನಕ್ಕೆ ತೆರಳುತ್ತಿದ್ದಾರೆ.
ಈ ಪಾದಯಾತ್ರಿಗಳಿಗೆ ಬೀಳ್ಕೋಡುಗೆ ಸಮಾರಂಭ ವಿಜಯಪುರ ನಗರದ ಗ್ರಾಮದೇವತೆ ಶ್ರೀ ಸಿದ್ಧೇಶ್ವದ ದೇವಸ್ಥಾನದ ಎದುರು ನಡೆಯಿತು. ದಾನಮ್ಮದೇವಿ ಪ್ರಸಾದ ಸೇವಾ ಸಮಿತಿ ಹಾಗೂ ಜಗದ್ಗುರು ಪಂಚಾಚಾರ್ಯ ಸೇವಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ದೇವರ ಹಿಪ್ಪರಗಿಯ ಶ್ರೀ ಶಿವಯೋಗಿ ಮಹಾಸ್ವಾಮಿಗಳು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಮಹೇಶ ವಿ. ಶಟಗಾರ, ಯುವ ಉದ್ಯಮಿ ಮಂಜನಾಥ ಪಲ್ಲೆದ ಅವರನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರದಮಲ್ಲಿ ಪ್ರಸಾದ ಸೇವಾ ಸಮಿತಿಯ ಯುವಕರಾದ ಪ್ರಸಾದ ಯಡಹಳ್ಳಿ, ಆನಂದ ಮದಬಾವಿ, ಅಮಿತ್ ಮಠಪತಿ, ಬಸವರಾಜ, ಸೋಮು ಅಂಗಡಿ, ಶಶಿ, ರಾಜು ಶಟಗಾರ, ಅಭಿಷೇಕ್ ಪಾಟೀಲ, ಅಪ್ಪು ಹುನ್ನೂರ, ಅಶೋಕ ಕೆಂಚಪ್ಪನವರ, ಪಾಂಡು ರಜಪೂತ, ವಿನೋದ ಹಿರೇಮಠ, ಮಂಜು ಪಲ್ಲೇದ, ಬಸು, ಮಲ್ಲಿಕಾರ್ಜುನ, ಸಚಿನ, ಜಗದೀಶ, ಪುನೀತ, ಸದಾನಂದ, ಶಿವಾನಂದ ಶಟಗಾರ ಮುಂತಾದವರು ಉಪಸ್ಥಿತರಿದ್ದರು.
ಅರ್ಚಕ ಸಿದ್ದು ಹಿರೇಮಠ ನಿರೂಪಿಸಿದರು. ಚಿದಾನಂದ ಹಿರೇಮಠ ವಂದಿಸಿದರು.