Datti Upanyas: ಶರಣರ ಆಶಯದಂತೆ ಬದುಕು ರೂಪಿಸಿಕೊಳ್ಳಿ-ರಾಜೇಂದ್ರಕುಮಾರ ಬಿರಾದಾರ

ವಿಜಯಯಪುರ: 12ನೇ ಶತಮಾನ ಬದಲಾವಣೆಯ ಯುಗ.  ಕ್ರಾಂತಿಯ ಪರ್ವ.  ಅಂದಿನ ಶರಣರು ಮಾಡಿದ ಮಹಾಕಾರ್ಯಗಳನ್ನು ಶಿಲಾಲಿಪಿಗಳಲ್ಲಿ ಬರೆಸಲಿಲ್ಲ.  ಇತಿಹಾಸವನ್ನು ರಚಿಸಲಿಲ್ಲ.  ಆದರೆ ಅಂದಿನ ಕ್ರಾಂತಿಗೆ ಶರಣ-ಶರಣೆಯರು ರಚಿಸಿದ ವಚನಗಳೇ ಎಲ್ಲದಕ್ಕೂ ಆಧಾರ ಮತ್ತು ನಂತರ ಕವಿ, ಸಾಹಿತಿಗಳ ರಚಿಸಿದ ಕಾವ್ಯಗಳು ಸಹ ಉಪಯುಕ್ತ ಮಾಹಿತಿಯಾಗಿದೆ ಎಂದು ಉಪನ್ಯಾಸಕ ರಾಜೇಂದ್ರಕುಮಾರ ಬಿರಾದಾರ ಹೇಳಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಯುವ ವೇದಿಕೆ ಹಾಗೂ ದರ್ಬಾರ ಕಲಾ, ವಾಣಿಜ್ಯ, ಬಿಸಿಎ ಮಹಾವಿದ್ಯಾಲಯಗಳ ಸಂಯುಕ್ತಾಶ್ರಯದಲ್ಲಿ ನಡೆದ ದತ್ತಿ ಕಾರ್ಯಕ್ರಮದಲ್ಲಿ ಶರಣೆ ಅಕ್ಕ ನೀಲಾಂಬಿಕೆ ವಿಷಯದ ಕುರಿತು ಅವರು ಮಾತನಾಡಿದರು.

ಶರಣರ ಆಶಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಅನುಭವ ಮಂಟಪದ ವಾತಾವರಣ ರೂಪಿಸುವಲ್ಲಿ ಎಲ್ಲರೂ ಶ್ರಮಿಸಬೇಕಿದೆ ರಾಜೇಂದ್ರಕುಮಾರ ಬಿರಾದಾರ ಹೇಳಿದರು.

ಕಾರ್ಯನಿರತ ಪತ್ರಕರ್ತರ ಸಂಘದ ರಾಷ್ಟ್ರೀಯ ಮಂಡಳಿ ಸದಸ್ಯ ಮಹೇಶ ವಿ. ಶಟಗಾರ ಅವರನ್ನು ಸನ್ಮಾನಿಸಲಾಯಿತು

 

ಕಾರ್ಯನಿರತ ಪತ್ರಕರ್ತರ ಸಂಘದ ರಾಷ್ಟ್ರೀಯ ಮಂಡಳಿಯ ಸದಸ್ಯರಾಗಿ ನಾಮನಿರ್ದೇಶನರಾದ ಮಹೇಶ ವಿ. ಶಟಗಾರ ಸನ್ಮಾನ ಸ್ವೀಕರಿಸಿ ಮಾತನಾಡಿ, ಬದುಕಿನಲ್ಲಿ ಮೌಲ್ಯಗಳು ಮುಖ್ಯ.  ಮೊಬೈಲುಗಳಿಗ ದಾಸರಾಗದೆ ಶೈಕ್ಷಣಿಕ ಚಟುವಟಿಕೆಗಳಿಗೆ ಅಗತ್ಯವಾದಷ್ಟು ಮಾತ್ರ ಸದ್ಬಳಕೆ ಮಾಡಿಕೊಂಡು ಜೀವನದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದು ಹೇಳಿದರು.

ದತ್ತಿ ದಾಸೋಹಿ ಉದ್ಯಮಿ ಗಂಗಾಧರ ಸಾಲಕ್ಕಿ ಮಾತನಾಡಿ, ನೀಲಾಂಬಿಕೆಯ ಬದುಕು ಅತ್ಯಂತ ಆದರ್ಶಮಯ.  ಶರಣಸತಿ, ಲಿಂಗಸತಿ ಎಂಬ ತತ್ವದಡಿಯಲ್ಲಿ ಬದುಕನ್ನು ಸವೆಸಿ ಆದರ್ಶ ಸಹಧರ್ಮಿಣಿಯಾಗಿ ಮಹಾಮನೆಯ ಜವಾಬ್ದಾರಿ ಹೊತ್ತು ಬಸವಣ್ಣನವರ ವ್ಯಕ್ತಿತ್ವಕ್ಕೆ ಶ್ರಮಿಸಿದ ಮಹಾತಾಯಿಯಾಗಿದ್ದರು ಎಂದು ಹೇಳಿದರು.

ಕಾಲೇಜಿನ ಪ್ರಾಚಾರ್ಯ ಜಿ. ಎಚ್. ಮಣೂರ ಅಧ್ಯಕ್ಷತೆ ವಹಿಸಿದ್ದರು.  ಜಿಲ್ಲಾ ಶರಣ ಸಾಹಿತ್ಯ ಪರಿಷತ ಅಧ್ಯಕ್ಷ ಜಂಬುನಾಥ ಕಂಚ್ಯಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.  ಈ ಕಾರ್ಯಕ್ರಮದಲ್ಲಿ ದತ್ತಿ ದಾಸೋಹಿ ಶಿವಯೋಗಿ ನಾಡಗೌಡ, ಕಾಶಿನಾಥ, ಎಸ್. ಎಂ. ಕುಂಬಾರ, ಹಿರಗಪ್ಪ ಪೂಜಾರಿ, ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಡಿ. ಕೆ. ರಾಠೋಡ ನಿರೂಪಿಸಿದರು.  ಅಮರೇಶ ಸಾಲಕ್ಕಿ ಸ್ವಾಗತಿಸಿದರು.  ಆಕಾಶ ರಾಮತೀರ್ಥ ವಂದಿಸಿದರು.

Leave a Reply

ಹೊಸ ಪೋಸ್ಟ್‌