ವಿಜಯಪುರ: ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಮತ್ತು ಬಬಲೇಶ್ವರ ಶಾಸಕ ಎಂ. ಬಿ. ಪಾಟೀಲರ ನಾಳೆ ನ. 26ರಂದು ಶನಿವಾರ ಬಬಲೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡು ನಾನಾ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಲಿದ್ದಾರೆ.
ಬೆ.10 ಗಂ. ಅರಕೇರಿಯಲ್ಲಿ 55.99 ಲಕ್ಷ ವೆಚ್ಚದಲ್ಲಿ ರೂ. ನಿರ್ಮಿಸಲಾಗುತ್ತಿರುವ ಅರಕೇರಿ-ಬರಟಗಿ ಹಳ್ಳಕ್ಕೆ ಬಾಂದಾರ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಲಿದ್ದಾರೆ. ಅರಕೇರಿ ಗ್ರಾಮದಲ್ಲಿ ನಿರ್ಮಿಸಲಾಗಿರುವ ರೂ. 31.50 ಲಕ್ಷ ವೆಚ್ಚದ ಪ್ರೌಢ ಶಾಲೆ ಕಟ್ಟಡ ಉದ್ಘಾಟಿಸಲಿದ್ದಾರೆ. ಬಳಿಕ ಅರಕೇರಿ ಬಿಸೇನ್ ದೊಡ್ಡಿಯಲ್ಲಿ ರೂ. 10.06 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಪ್ರಾಥಮಿಕ ಶಾಲಾ ಕಟ್ಟಡ ಉದ್ಘಾಟಿಸಲಿದ್ದಾರೆ.
ಬೆ.11ಗಂ. ಜಾಲಗೇರಿಯ ಸೈಟ್-1 ರಲ್ಲಿ ರೂ. 62.80 ಲಕ್ಷ ಮತ್ತು ಸೈಟ್-2 ರಲ್ಲಿ ರೂ. 58.59 ಲಕ್ಷ ವೆಚ್ಚದ ಬಾಂದಾರ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಿದ್ದಾರೆ.
ಮ.12ಗಂ. ಇಟ್ಟಂಗಿಹಾಳ ಸೈಟ್-1 ರಲ್ಲಿ ನಿರ್ಮಿಸಲಾಗುತ್ತಿರುವ ರೂ. 61.94 ಲಕ್ಷ ರೂ. ವೆಚ್ಚದ ಬಾಂದಾರ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ.
ಮ.12.30ಕ್ಜೆ ಲೋಹಗಾಂವ ಗ್ರಾಮದ ಬಳಿ ಸೈಟ್-1 ರಲ್ಲಿ ರೂ. 62.99 ಲಕ್ಷ ಮತ್ತು ಸೈಟ್-2 ರಲ್ಲಿ ರೂ. 67.99 ಲಕ್ಷ ವೆಚ್ಚದ ಬಾಂದಾರ ನಿರ್ಮಾಣ ಕಾಮಗಾರಿ ಭೂಮಿ ಪೂಜೆ ಮಾಡಲಿದ್ದಾರೆ
ಮ.1.30ಕ್ಕೆ ಕನಮಡಿಯಲ್ಲಿ ಧರಿದೇವರ ದೇವಸ್ಥಾನದ ಹತ್ತಿರ ರೂ.1.25 ಕೋ. ವೆಚ್ಚದ ಬಾಂದಾರ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಮಾಡಲಿದ್ದಾರೆ ಎಂದು ಶಾಸಕರ ಕಛೇರಿ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.