MBP Congress Rajayuga: ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ- ಅಭಿವೃದ್ಧಿಯ ರಾಜಯುಗ ಆರಂಭವಾಗಲಿದೆ- ಎಂ. ಬಿ. ಪಾಟೀಲ

ವಿಜಯಪುರ: ಮುಂದಿನ ಬಾರಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ರಾಜ್ಯದಲ್ಲಿ ಅಭಿವೃದ್ಧಿಯ ರಾಜಯೋಗ ಆರಂಭವಾಗಲಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ ಹೇಳಿದರು.

ತಿಕೋಟಾ ತಾಲೂಕಿನ ಕನಮಡಿಯಲ್ಲಿ ಬಳಿಯ ಧರಿದೇವರ ದೇವಸ್ಥಾನದ ಹತ್ತಿರ ರೂ.1.25 ಕೋಟಿ ವೆಚ್ಚದ ಬಾಂದಾರ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಕೈಗೊಂಡ ನೀರಾವರಿ ಯೋಜನೆಗಳಿಂದಾಗಿ ವಿಜಯಪುರ ಜಿಲ್ಲೆಯ ರೈತರಿಗೆ ಸಾಕಷ್ಟು ಅನಕೂಲವಾಗಿದೆ. ಗಡಿ ಭಾಗದ ಜನ ಗುಳೆ ಹೋಗುವುದನ್ನು ಬಿಟ್ಟು ತಂತಮ್ಮ ಹೋಲಗಳಲ್ಲಿ ಕೃಷಿ ಮಾಡುತ್ತ ಸ್ವಾವಲಂಬಿ ಜೀವನ ಸಾಗಿಸುತ್ತಿದ್ದಾರೆ. ಅಲ್ಲದೇ, ವಾಣಿಜ್ಯ ಬೆಳೆಗಳನ್ನು ಬೆಳೆಯುವ ಮೂಲಕ ಆರ್ಥಿಕವಾಗಿ ಸದೃಢರಾಗುತ್ತಿದ್ದಾರೆ. ಯಾವ ಭಾಗದಿಂದ ಜನ ಗುಳೆ ಹೋಗುತ್ತಿದ್ದರೋ, ಅದೇ ಭಾಗಕ್ಕೆ ಬೇರೆ ರಾಜ್ಯಗಳಿಂದ ಜನ ದುಡಿಯಲು ಬರುತ್ತಿದ್ದರು. ಇದು ಈ ಭಾಗದಲ್ಲಿ ರೈತರಿಗೆ ನೀರಾವರಿಯಿಂದ ಸಿಗುತ್ತಿರುವ ಪೆÇ್ರತ್ಸಾಹಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.

ಕನಮಡಿ ಬಳಿಯ ದರಿದೇವರ ಗುಡ್ಡದಲ್ಲಿ ಬಾಂದಾರ ನಿರ್ಮಾಣ ಕಾಮಗಾರಿಗೆ ಎಂ. ಬಿ. ಪಾಟೀಲ ಶಂಕುಸ್ಥಾಪನೆ ನೆರವೇರಿಸಿದರು

ಜಲಸಂಪನ್ಮೂಲ ಸಚಿವನಾಗಿದ್ದಾಗ ಯಾವುದೇ ಬೇಧ-ಬಾವ, ತಾರತಮ್ಯವಿಲ್ಲದೆ ಎಲ್ಲ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಒದಗಿಸಿದ್ದೇನೆ. ಹಗಲಿರುಳೆನ್ನದೆ ಎಲ್ಲ ಕಡೆ ಸುತ್ತಾಡಿ ರೈತರ ಸಹಕಾರದಿಂದ ಯೋಜನೆಗಳು ಅನುಷ್ಠಾನಕ್ಕೆ ಶ್ರಮಿಸಿದ್ದೇನೆ. ಅದರ ಫಲವಾಗಿ ಈಗ ನೀರಾವರಿಗೆ ಒಳಪಟ್ಟಿರುವ ಪ್ರದೇಶಗಳಲ್ಲಿ ಕೃಷಿ ಅಷ್ಟೇ ಅಲ್ಲ, ತೋಟಗಾರಿಕೆ ಹಾಗೂ ಹೈನುಗಾರಿಕೆಗೆ ವಿಫುಲ ಅವಕಾಶ ದೊರಕಿವೆ. ನೆರೆಯ ಮಹಾರಾಷ್ಟ್ರದ ಜತ್ ತಾಲೂಕಿನ ಹಲವಾರು ಗ್ರಾಮಗಳಿಗೂ ನೀರಾವರಿ ಸೌಲಭ್ಯಗಳು ದೊರಕಿವೆ. ಅಂತರ್ಜಲ ಕೂಡ ಹೆಚ್ಚಾಗಿದ್ದು, ನಮ್ಮ ಅಭಿವೃದ್ಧಿ ಕಾರ್ಯಗಳಿಗೆ ಮೆಚ್ಚಿ ಕನ್ನಡಿಗರೆ ಹೆಚ್ಚಾಗಿರುವ ಆ ಭಾಗದ ಜನ ತಮ್ಮ ಗ್ರಾಮಗಳನ್ನು ಕರ್ನಾಟಕಕ್ಕೆ ಸೇರಿಸಿಕೊಳ್ಳಲು ಆಗ್ರಹಿಸಿ ಹೋರಾಟ ಮಾಡುತ್ತಿದ್ದಾರೆ ಎಂದು ಎಂ.ಬಿ.ಪಾಟೀಲ ಹೇಳಿದರು.

ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಅಧ್ಯಕ್ಷ ಸೋಮನಾಥ ಬಾಗಲಕೋಟ, ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಮುಖಂಡರಾದ ಎಂ.ಎಸ್. ಲೋಣಿ, ಬಾಬುಗೌಡ ಬಿರಾದಾರ. ಶಿವಪುತ್ರ ಅವಟಿ, ಶಂಕರಗೌಡ ಎಸ್. ಬಿರಾದಾರ, ಈರಣ್ಣಗೌಡ ಬಿರಾದಾರ, ಅಶೋಕ ಧನ್ಯಾಳ, ಚನ್ನಯ್ಯ ಮಠಪತಿ, ಕುಮಾರ ತಳವಾರ, ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಇದಕ್ಕೂ ಮೊದಲು ಎಂ.ಬಿ.ಪಾಟೀಲ ಅವರು ತಿಕೋಟಾ ತಾಲೂಕಿನ ಅರಕೇರಿ ಗ್ರಾಮದ ಸ ರಕಾರಿ ಪ್ರೌಢಶಾಲೆ ಆವರಣದಲ್ಲಿ ರೂ. 31.50 ಲಕ್ಷ ವೆಚ್ಚದಲ್ಲಿ ಹೆಚ್ಚುವರಿಯಾಗಿ ನಿರ್ಮಿಸಲಾಗಿರುವ ನೂತನ ಕೊಠಡಿಗಳ ಉದ್ಘಾಟನೆಯನ್ನು ಕ್ಷೇತ್ರದ ಶಾಸಕರಾದ ಎಂ.ಬಿ.ಪಾಟೀಲರು ನೆರವೇರಿಸಿದರು.

ನಂತರ ಅರಕೇರಿ–ಬರಟಗಿ ಹಳ್ಳಕ್ಕೆ ರೂ. 55.99 ಲಕ್ಷ ವೆಚ್ಚದಲ್ಲಿ ಬಾಂದಾರ ನಿರ್ಮಾಣ ಕಾಮಗಾರಿಗೆ ಈ ದಿನ ಕ್ಷೇತ್ರದ ಶಾಸಕರು ಭೂಮಿ ಪೂಜೆ ನೆರವೇರಿಸಿದರು.

ಬಳಿಕ ಜಾಲಗೇರಿ ಗ್ರಾಮದ ಬಳಿ ಸೈಟ್ 1ರಲ್ಲಿ ರೂ. 62.80 ಲಕ್ಷ ಮತ್ತು ಸೈಟ್ 2ರಲ್ಲಿ ರೂ. 58.59 ಲಕ್ಷ ವೆಚ್ಚದಲ್ಲಿ ಹಳ್ಳಕ್ಕೆ ನಿರ್ಮಿಸಲಾಗುತ್ತಿರುವ ಬಾಂದಾರ ಕಾಮಗಾರಿಗೆ ಅವರು ಗುದ್ದಲಿ ಪೂಜೆ ನೆರವೇರಿಸಿದರು.

ಇದಾದ ಮೇಲೆ ಇಟ್ಟಂಗಿಹಾಳ ಗ್ರಾಮಕ್ಕೆ ಆಗಮಿಸಿದ ಅವರು, ಅಲ್ಲಿ ಹಳ್ಳಕ್ಕೆ ರೂ. 61.94 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಬಾಂದಾರ ಬಾಂದಾರ ಕಾಮಗಾರಿಗೆ ಎಂ.ಬಿ.ಪಾಟೀಲರು ಶಂಕುಸ್ಥಾಪನೆ ನೆರವೇರಿಸಿದರು.

Leave a Reply

ಹೊಸ ಪೋಸ್ಟ್‌