ವಿಜಯಪುರ: ಸಂವಿಧಾನದ ಪೂರ್ವ ಪೀಠಿಕೆಯ ಆಶಯವನ್ನು ಪ್ರತಿಯೊಬ್ಬರೂ ಅರ್ಥೈಸಿಕೊಂಡು ಸ್ಪಂದಿಸಿ, ಸಂವಿಧಾನದ ಆಶಯಕ್ಕನುಗುಣವಾಗಿ ನಡೆದುಕೊಳ್ಳಬೇಕು ಎಂದು ವಿಜಯಪುರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಜಿ. ಜಿ. ಕುರವತ್ತಿ ಹೇಳಿದ್ದಾರೆ.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ,ಪೊಲೀಸ್. ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಸಂವಿಧಾನ ದಿನ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಅವರು ಮಾತನಾಡಿದರು.
ತ್ವರಿತಗತಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ರಾಮ ನಾಯಕ ಮಾತನಾಡಿ, ಸಂವಿಧಾನವು ನಮ್ಮೆಲ್ಲರಿಗೂ ಉತ್ತಮ ದಾರಿ ತೋರಿಸುತ್ತದೆ. ನಾವು ಸಂವಿಧಾನವನ್ನು ಆರಾಧಿಸಿ ಅದರಂತೆ ಜೀವಿಸಬೇಕು. ಸಂವಿಧಾನದ ರಚನೆಗೆ ಶ್ರಮಿಸಿದವರನ್ನು ಸ್ಮರಿಸಬೇಕು. ನಮ್ಮ ಸಂವಿಧಾನ ನಮ್ಮ ಹೆಮ್ಮೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಮಾತನಾಡಿ, ಜೀವನದ ಪ್ರತಿ ಹಂತಕ್ಕೂ ಸಂವಿಧಾನವು ಅನ್ವಯಿಸುತ್ತದೆ. ಕಷ್ಟಪಟ್ಟು ಸಂವಿಧಾನ ರಚಿಸಿದವರ ಶ್ರಮ ಸಾರ್ಥಕವಾಗಬೇಕಾದರೆ ಸಂವಿಧಾನದ ಅಂಶಗಳ ಪಾಲನೆ ಮಾಡಬೇಕು ಎಂದು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ವೆಂಕಣ್ಣ ಹೊಸಮನಿ ಸಂವಿಧಾನದ ಪೂರ್ವ ಪೀಠಿಕೆ ಭೋಧಿಸಿದರು.
ಹಿರಿಯ ನ್ಯಾಯವಾದಿ ಬಿ.ಎ.ಲಾಹುರಿ ಉಪನ್ಯಾಸ ನೀಡಿದರು.
ಸಂಘದ ಅಧ್ಯಕ್ಷ ಚಾಗಶೆಟ್ಟಿ ಈರಣ್ಣ, ಎಲ್ಲಾ ಜಿಲ್ಲಾ ಹಾಗೂ ಹಿರಿಯ,ಕಿರಿಯ ಶ್ರೇಣಿ ನ್ಯಾಯಾಧೀಶರು ನಾನಾ ಇಲಾಖೆಗಳ ಸಿಬ್ಬಂದಿ ಉಪಸ್ಥಿತರಿದ್ದರು.
ಹಿರಿಯ ವಕೀಲ ಮಲ್ಲಿಕಾರ್ಜುನ ಭೃಂಗಿಮಠ ಸ್ವಾಗತಿಸಿದರು, ಬಾಬು ಅವತಾಡೆ ನಿರೂಪಿಸಿದರು. ಶಿವುಕುಮಾರ ಪೂಜಾರ ವಂದಿಸಿದರು.
ವಿಜಯಪುರ ಕೇಂದ್ರ ಕಾರಾಗೃಹದಲ್ಲಿ ಸಂವಿಧಾನ ದಿನ ಆಚರಣೆ
ಕೇಂದ್ರ ಕಾರಾಗೃಹದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧೀಕ್ಷಕಿ ಡಾ. ಐ. ಜೆ. ಮ್ಯಾಗೇರಿ ಅವರು ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಸಂವಿಧಾನ ದಿನ ಪ್ರತಿಜ್ಞಾ ವಿಧಿ ಬೋಧಿಸಿರು.
ಬಳಿಕ ಮಾತನಾಡಿದ ಅವರು, ಸಂವಿಧಾನ ರಚನೆಗೆ ಕಾರಣರಾದ ಡಾ. ಬಾಬಾಸಾಹೇಬ ಅಂಬೇಡ್ಕರ ಮತ್ತು ಡಾ. ಬಾಬು ರಾಜೇಂದ್ರ ಪ್ರಸಾದರವರು ಅವರು ಶ್ರಮವಹಿಸಿ ನಮ್ಮ ದೇಶಕ್ಕೆ ಒಂದು ವ್ಯವಸ್ಥಿತ ಅಡಿಪಾಯ ರೂಪಿಸಿದ್ದಾರೆ. ಸಂವಿಧಾನದ ಆಶಯದಂತೆ ನಡೆದುಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಕಾರಾಗೃಹದ ಕಚೇರಿ ಅಧಿಕ್ಷಕ ಧಾವಜಿ ರಾಠೋಡ, ಜೈಲರಗಳಾದ ತಿಲೋತ್ತಮೆ, ಜಿ. ಕೆ. ಕುಲಕರ್ಣಿ, ಐ. ಎಸ್. ಹಿರೇಮಠ ಹಾಗೂ ಎನ್. ಆರ್. ಚೇತನಾ, ಶಿಕ್ಷಕರಾದ ಡಿ. ಎಸ್. ದೀಕ್ಷಿತ, ಎಸ್. ಬಿ. ಕುಲಕರ್ಣಿ ಸೇರಿದಂತೆ ಸಂಸ್ಥೆಯ ಎಲ್ಲಾ ಕಾರ್ಯ keರ್ವಾಹಕ ಮತ್ತು ಲಿಪಿಕ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.