ವಿಜಯಪುರ: ಕ್ರೀಡಗಳಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಚೈತನ್ಯ ಹಾಗೂ ಲವಲವಿಕೆಯಿಂದ ಕರ್ತವ್ಯ ನಿರ್ವಹಿಸಲು ಸಾಧ್ಯ ಎಂದು ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಹೇಳಿದರು.
ವಿಜಯಪುರ ನಗರದ ಡಾ. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಹಾಗೂ ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘ ಸಂಸ್ಥೆಗಳ ಸಹಯೋಗದಲ್ಲಿ 2022-23ರ ಜಿಲ್ಲಾ ಮಟ್ಟದ ವಿಕಲಚೇತನರ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿರು.
ನಮ್ಮ ದೇಶದ ಕೀರ್ತಿ ತಂದ ವಿಕಲಚೇತನರ ಪ್ಯಾರಾಲಿಂಪಿಕ್ಸನಲ್ಲಿ ಭಾರತದ ಐತಿಹಾಸಿಕ ಸಾಧನೆ ಎಲ್ಲರಿಗೂ ಮಾದರಿಯಾಗಿದೆ. ವಿಕಲಚೇತನರಿಗಾಗಿ ನಡೆಯುವ ಈ ಕ್ರೀಡಾಕೂಟದಲ್ಲಿ ಭಾರತ ಹಿಂದೆಂದಿಗಿಂತಲೂ ಉತ್ತಮ ಪ್ರದರ್ಶನ ನೀಡಿದೆ ಇಲ್ಲಿ ನಡೆಯುತ್ತಿರುವ ಕ್ರೀಡೆಗಳಲ್ಲಿ 13 ತಾಲೂಕಿನಿಂದ ಆಗಮಿಸಿದ ವಿಶೇಷ ಚೇತನರು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ ತಾಲೂಕಾ, ಜಿಲ್ಲಾ ಮಟ್ಟದಲ್ಲಿ ಈ ಕ್ರೀಡಾಕೂಟ ಆಯೋಜಿಸಿರುವುದರಿಂದ ಜಿಲ್ಲೆಯ ಎಲ್ಲಾ ತಾಲೂಕಿನ ಕೀಡಾಪಟುಗಳು ಜಿಲ್ಲೆಯಲ್ಲಿ ಒಂದಾಗೂಡುವುದರಿಂದ ಒಬ್ಬರಿಗೊಬ್ಬರು ಪರಿಚಯ, ಸಂದರ್ಭ, ಸಂವಹನ ಆಗುತ್ತದೆ ಹಾಗೂ ಆತ್ಮೀಯತೆ ಕೂಡ ಬೆಳೆಯುತ್ತದೆ. ಮನುಷ್ಯನ ಜೀವನದಲ್ಲಿ ವೃತ್ತಿ ಮತ್ತು ಪಾವೃತ್ತಿ ಬೇರೆ ವೃತ್ತಿ ಜೊತೆ ಪ್ರವೃತ್ತಿ ಇರಬೇಕು ವೃತ್ತಿ ಕಾರ್ಯಕ್ಷಮತೆ ಹೆಚ್ಚಿಸುವ ನಿಟ್ಟಿನಲ್ಲಿ ಕ್ರೀಡೆ, ಸಂಸ್ಕøತಿಕ, ಪಠ್ಯೇತರ ಚಟುವಟಿಕೆಗಳು ಅತ್ಯವಶ್ಯಕ. ದಿನನಿತ್ಯದ ಪಾಲ್ಗೊಳ್ಳವಿಕೆಯಿಂದ ಬೌಧ್ಧಿಕ ಮತ್ತು ಮಾನಸಿಕ ಸದೃಢತೆಗೆ ಈ ತರಹದ ಚಟುವಟಿಕೆಗಳಲ್ಲಿ ಪಾಲ್ಗೊಂಡು ಚೈತನ್ಯಮಯವಾದ ಚಟುವಟಿಕೆಯಿಂದ ಕೂಡಿದ ಜೀವನ ನಡೆಸಲು ಸಾದ್ಯ ಎಂದು ಅವರು ಹೇಳಿದರು.
ಇಂಥ ಚಟುವಟಿಕೆಗಳಲ್ಲಿ ಭಾಗವಹಿಸದಿದ್ದರೆ ಜೀವನದಲ್ಲಿ ಜಿಗುಪ್ಸೆ, ವೈಮನಸ್ಸು, ವೃತ್ತಿಯಲ್ಲಿ ಕೀಳರಿಮೆ ಹೀಗೆ ಮಾನಸಿಕವಾಗಿ ಕುಗ್ಗಲು ಅನುವುಮಾಡಿಕೊಟ್ಟಂತೆ ಜೀವನದಲ್ಲಿ ಇಂತಹ ಚಟುವಟಿಕೆಗಳಲ್ಲಿ ಭಾಗಹಿಸುವುದರಿಂದ ಜೀವನ ಪರಿಪೂರ್ಣ ಮನುಷ್ಯ ನಾಗರಿಕನಾಗಿ ಬೆಳೆಯಲು ಇವು ಸಹಕಾರಿಯಾಗಲಿವೆ. ಆರೋಗ್ಯ ದೃಷ್ಟಿಯಿಂದ ಮನಸ್ಸು ಪ್ರಾಪುಲ್ಲತೆಯಿಂದ ಇರಲು ಕ್ರೀಡೆ, ಸಾಂಸ್ಕøತಿಕ ಕಾರ್ಯಕ್ರಮಗಳು ನಮ್ಮ ಅವಿಭಾಜ್ಯ ಅಂಗವಾಗಿವೆ ಇದರಿಂದ ಜ್ಞಾನ ವೃದ್ದಿ ಜೊತೆಗೆ ಮನುಷ್ಯ ವಿಕಾಸಗೊಳ್ಳಲು ಸಹಕಾರಿಯಾಗಲಿದೆ ಎಂದು ರಮೇಶ ಕಳಸದ ಹೇಳಿದರು.
ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತರು ಡಾ. ಜಾವೀದ ಎಂ. ಜಮಾದಾರ ಮಾತನಾಡಿ, ಕ್ರೀಡಾಪೇಮ, ಕ್ರೀಡಾಸ್ಪೂರ್ತಿ ಸಾಧನೆ ಮಾಡಿ ಯಶಸ್ವೀಯಾಗಿ ಎಲ್ಲವನ್ನೂ ಹಿಮ್ಮೆಟ್ಟಿಸಿ ಸಾಧಿಸಿ ಕೀರ್ತಿ ಪತಾಕೆ ಹಾರಿಸಿ ಸಾಧನೆ ಮಾಡಿ ಪದಕಗಳನ್ನು ತರಬೇಕು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ನಿಮ್ಮಲ್ಲಿರುವ ಪ್ರತಿಭೆಯನ್ನು ಹೊರತರಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಅರವಿಂದ ಕೊಪ್ಪ, ಸಂಜೀವ ಸಿ. ಖೋತ, ಎಸ್. ಸಿ, ಎಸ್. ಟಿ. ದೌರ್ಜನ್ಯ ತಡೆ ಸಲಹಾ ಸಮಿತಿ ಸದಸ್ಯ ಅಡಿವೆಪ್ಪ ಸಾಲಗಲ್ಲ, ಜಿಲ್ಲಾ ಕ್ರೀಡಾ ಸಮೀತಿ ಸದಸ್ಯ ಭೀಮಸೇನ ಎಂ. ಕೋಕರೆ, ಬಸವರಾಜ ಗೊಳಸಂಗಿ ಹಾಗೂ ಇತರರು ಉಪಸ್ಥಿತರಿದ್ದರು.
ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ಗಾಗರೀಕರ ಸಬಲೀಕರಣ ಅಧಿಕಾರಿ ರಾಜಶೇಕರ ದೈವಾಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಎಸ್.ಜಿ ಲೋಣಿ ವಂದಿಸಿದರು.