ಗಡಿ, ಜಲ, ಭಾಷೆ ವಿಚಾರದಲ್ಲಿ ಮೂರು ಪಕ್ಷದವರು ಒಗ್ಗಟ್ಟಾಗಿದ್ದೇವೆ- ವಿಜಯಪುರದಿಂದ ಅಲ್ಪಸಂಖ್ಯಾತರನ್ನು ಶಾಸಕನಾಗಿ ಮಾಡುವೆ- ಎಂ. ಬಿ. ಪಾಟೀಲ
ವಿಜಯಪುರ: ನೆಲ, ಜಲ, ಭಾಷೆ ವಿಚಾರದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಈ ಹಿಂದೆ ಮತ್ತು ಇಂದು ಒಂದಾಗಿದ್ದು, ಮುಂದೆಯೂ ಒಂದಾಗಿರುತ್ತೇವೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಹೇಳಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ರಾಜಕೀಯ ಲಾಭಕ್ಕಾಗಿ ಈ ವಿವಾದವನ್ನು ಕೆದಕುತ್ತಿದೆ ಎಂದು ಟೀಕಿಸಿದರು. ಕಳೆದ ಮೂರು ವರ್ಷಗಳಲ್ಲಿ ರಾಜ್ಯ ಸರಕಾರ ವಸತಿ ಯೋಜನೆಯಡಿ ಒಂದೂ ಮನೆಗಳನ್ನು ನಿರ್ಮಿಸಿಲ್ಲ. ಕೊರೊನಾ ಸಂದರ್ಭದಲ್ಲಿಯೂ ಸೂಕ್ತ ಪರಿಹಾರ ನೀಡಿಲ್ಲ. 40% […]
DC Meeting: ಸಮರ್ಪಕ ಅನುದಾನ ಬಳಸಿ-ಅರ್ಹ ಫಲಾನುಭವಿಗೆ ಲಾಭ ದೊರಕಿಸಿ- ಡಿಸಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ
ವಿಜಯಪುರ: ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿಯ ಅನುದಾನ ಮರಳಿ ಹೋಗದಂತೆ ನೋಡಿಕೊಂಡು ಸಮರ್ಪಕವಾಗಿ ಅನುದಾನ ಬಳಸಿ ಅರ್ಹ ಫಲಾನುಭವಿಗೆ ಯೋಜನೆಯ ಲಾಭ ದೊರಕಿಸುವಂತೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ 2022-23ನೇ ವರ್ಷದ ವಿಶೇಷ ಘಟಕ ಯೋಜನೆಯ ಹಾಗೂ ಗಿರಿಜನ ಉಪಯೋಜನೆಯ ಕೇಂದ್ರ, ರಾಜ್ಯ ಹಾಗೂ ಜಿಲ್ಲಾ ವಲಯ ಯೋಜನೆ ಕಾರ್ಯಕ್ರಮಗಳ ಅಕ್ಟೊಬರ್ ತಿಂಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. […]
RDPR Commissioner: ಗ್ರಾಮೀಣಾಭಿವೃದ್ದಿ ಆಯುಕ್ತರಿಂದ ನಾನಾ ಗ್ರಾ. ಪಂ. ಗಳಗೆ ಭೇಟಿ, ಪರಿಶೀಲನೆ
ವಿಜಯಪುರ: ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯಿತಿ ರಾಜ್ ಇಲಾಖೆ ಆಯುಕ್ತೆ ಶಿಲ್ಪಾನಾಗ ಅವರು ವಿಜಯಪುರ ಜಿಲ್ಲೆಯ ನಾನಾ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲೆಯ ಕೊಲ್ಹಾರ ತಾಲೂಕಿನ ರೋಣಿಹಾಳ ಮತ್ತು ಮುಳವಾಡ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ನಾನಾ ಕಾಮಗಾರಿ, 75ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಅನುಷ್ಠಾನಗೊಳ್ಳುತ್ತಿರುವ ಸರೋವರ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದ ಅವರು, ಆದ್ಯತೆ ಮೇಲೆ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು. ಭೂಮಿಯ ಅಂತರ್ಜಲ ಮಟ್ಟವನ್ನು ಹೆಚ್ಚಿಸಿ ನೀರಿನ ಮೂಲಗಳ ಅಭಿವೃಧ್ದಿಗೊಳಿಸುವಿಕೆ, ನರೇಗಾ ತಂತ್ರಾಂಶದಲ್ಲಿ ಕಾಯಕ […]
Gani Someshwar Jatre: ದೇವರ ಕಲ್ಲಿಗೆ ಓಡಿಬಂದು ತಲೆಯಿಂದ ಗುದ್ದುವ ಭಕ್ತರು- ಬೆನ್ನಿಗೆ ಕಬ್ಬಿಣ ಗುಂಡಿನಿಂದ ಹೊಡೆದುಕೊಂಡು ಹರಕೆ ತೀರಿಸುವ ಜಾತ್ರೆ
ಮಹೇಶ ವಿ. ಶಟಗಾರ ವಿಜಯಪುರ: ಬಸವ ನಾಡು ವಿಜಯಪರು ಜಿಲ್ಲೆ ಜಾತ್ರೆಗಳ ತವರು ಜಿಲ್ಲೆ ಎಂದೇ ಹೆಸರುವಾಸಿಯಾಗಿದೆ. ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಈ ಜಿಲ್ಲೆಯಲ್ಲಿ ನಡೆಯುವಷ್ಟು ಜಾತ್ರೆಗಳು ನಡೆಯುವುದಿಲ್ಲ ಗಮನಾರ್ಹವಾಗಿದೆ. ಒಂದೇ ಊರಿನಲ್ಲಿ ಮೂರ್ನಾಲ್ಕು ಜಾತ್ರೆಗಳು ನಡೆಯುವದು ಇದರ ವಿಶೇಷ. ಅಷ್ಟೇ ಅಲ್ಲ, ಇಡೀ ವರ್ಷ ಪ್ರತಿದಿನ ಒಂದಿಲ್ಲೊಂದು ಊರಿನಲ್ಲಿ ಜಾತ್ರೆ ನಡೆಯುತ್ತವೆ ಎಂದರೂ ತಪ್ಪಲ್ಲ. ಅದರಲ್ಲಿಯೂ ಜಿಲ್ಲೆಯಲ್ಲಿ ನಡೆಯುವ ಒಂದೊಂದು ಜಾತ್ರೆಯೂ ವಿಶೇಷವಾಗಿದ್ದು, ಸಂಪ್ರದಾಯಗಳೂ ಜನರು ಅಚ್ಚರಿ ಪಡುವಂತಿದೆ. ಈಗ ಇಂಥದ್ದೆ ಒಂದು ಜಾತ್ರೆಯ ಬಗ್ಗೆ […]