ಗಡಿ, ಜಲ, ಭಾಷೆ ವಿಚಾರದಲ್ಲಿ ಮೂರು ಪಕ್ಷದವರು ಒಗ್ಗಟ್ಟಾಗಿದ್ದೇವೆ- ವಿಜಯಪುರದಿಂದ ಅಲ್ಪಸಂಖ್ಯಾತರನ್ನು ಶಾಸಕನಾಗಿ ಮಾಡುವೆ- ಎಂ. ಬಿ. ಪಾಟೀಲ

ವಿಜಯಪುರ: ನೆಲ, ಜಲ, ಭಾಷೆ ವಿಚಾರದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಈ ಹಿಂದೆ ಮತ್ತು ಇಂದು ಒಂದಾಗಿದ್ದು, ಮುಂದೆಯೂ ಒಂದಾಗಿರುತ್ತೇವೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಹೇಳಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ರಾಜಕೀಯ ಲಾಭಕ್ಕಾಗಿ ಈ ವಿವಾದವನ್ನು ಕೆದಕುತ್ತಿದೆ ಎಂದು ಟೀಕಿಸಿದರು.

ಕಳೆದ ಮೂರು ವರ್ಷಗಳಲ್ಲಿ ರಾಜ್ಯ ಸರಕಾರ ವಸತಿ ಯೋಜನೆಯಡಿ ಒಂದೂ ಮನೆಗಳನ್ನು ನಿರ್ಮಿಸಿಲ್ಲ.  ಕೊರೊನಾ ಸಂದರ್ಭದಲ್ಲಿಯೂ ಸೂಕ್ತ ಪರಿಹಾರ ನೀಡಿಲ್ಲ.  40% ಭ್ರಷ್ಟಾಚಾರ ಬಿಬಿಎಂಪಿಯಲ್ಲಿ 50% ಕ್ಕೆ ಹೆಚ್ಚಳವಾಗಿದೆ ಎಂದು ಗುತ್ತಿಗೆದಾರರು ಆರೋಪಿಸುತ್ತಿದ್ದಾರೆ.  ಅಭಿವೃದ್ಧಿ ಶೂನ್ಯ, ರಾಜ್ಯ ಅಸ್ತಿತ್ವಕ್ಕೆ ಬಂದಾಗಿನಿಂದ ಸಿದ್ಧರಾಮಯ್ಯ ಸಿಎಂ ಆಗಿರುವವರೆಗೆ ಸುಮಾರು 1.20 ಲಕ್ಷ ಕೋಟಿ ಸಾಲ ಇತ್ತು.  ಆದರೆ, ಇವರು ಅಧಿಕಾರಕ್ಕೆ ಬಂದ ಮೇಲೆ ಸುಮಾರು 3.50 ಲಕ್ಷ ಸಾಲ ಮಾಡಿದ್ದಾರೆ. ಅಲ್ಲದೇ, ಕಮಿಷನ್ ದಂಧೆ ಗುತ್ತಿಗೆದಾರರನ್ನು ಹೈರಾಣಾಗಿಸಿದೆ ಎಂದು ಅವರು ಹೇಳಿದರು.

ಶಾಲೆಗಳಲ್ಲಿ ದುಸ್ಥಿತಿ ಇದೆ.  ರಸ್ತೆಗಳು ಹದಗೆಟ್ಟಿವೆ.  ಈಗ ಶಿಕ್ಷಕರ ಭರ್ತಿ ಮಾಡಿಕೊಳ್ಳುವುದಾಗಿ ಶಿಕ್ಷಣ ಸಚಿವರು ಹೇಳುತ್ತಿದ್ದಾರೆ.  ಈ ಹಿಂದೆ ಸಾಕಷ್ಟು ಮಹನೀಯರು ನಿರ್ಮಿಸಿದ ಕರ್ನಾಟಕ ಈಗ ಹಾಳಾಗಿ ಹೋಗಿದೆ.  ಚುನಾವಣೆ ಅಕ್ರಮ: ಬಿಬಿಎಂಪಿ ಚುನಾವಣೆ ಮತದಾರರ ಪಟ್ಟಿಯಲ್ಲಿ ಅಕ್ರಮ ಎಸಗಲಾಗಿದೆ.  ಅಲ್ಪಸಂಖ್ಯಾತರು, ಕೊಳಗೇರಿಗಳು, ದಲಿತರು ಹೆಚ್ಚಾಗಿರುವ ಪ್ರದೇಶಗಳಲ್ಲಿ ಮತ್ತು ಒಂದು ಪಕ್ಷದ ಪರವಾಗಿರುವವರ ಹೆಸರನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ.  ಈ ಸಮುದಾಯವನ್ನು ಮತದಾನದಿಂದ ವಂಚಿತರನ್ನಾಗಿ ಮಾಡುವ ಹುನ್ನಾರ ನಡೆದಿದೆ.  ಈಗಾಗಲೇ ಕೆಲವು ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ.  ಚುನಾವಣೆ ವ್ಯವಸ್ಥೆಯನ್ನು ಇವರು ಹಾಳಗೆಡವುತ್ತಿದ್ದಾರೆ.  ಸಾರ್ವಜನಿಕರ ವೈಯಕ್ತಿಕ ಮಾಹಿತಿಗೆ ಇದರಿಂದ ಧಕ್ಕೆಯಾಗಿದೆ.  ದೊಡ್ಡ ಅಕ್ರಮ ನಡೆದಿದೆ ಎಂದು ಅವರು ಆರೋಪಿಸಿದರು.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ವಿಜಯಪುರದಲ್ಲಿ ಸುದ್ದಿಗೋಷ್ಠಿ ನಡೆಸಿದರು

ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ ವಿರುದ್ಧ ಬಿಜೆಪಿ ಆರೋಪ ವಿಚಾರ

ರೌಡಿಗಳು ಬಿಜೆಪಿ ಸೇರ್ಪಡೆಯಾಗುವ ಕುರಿತು ಕಾಂಗ್ರೆಸ್ ಆರೋಪಕ್ಕೆ ಪ್ರತಿಯಾಗಿ ಬಿಜೆಪಿ ಜೈಲಿನಿಂದ ಬಂದವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ ಎಂದು ಮಾಡಿರುವ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರೌಡಿಗಳಿಗೂ ಮತ್ತು ನ್ಯಾಯಾಯಲದಲ್ಲಿ ಬೇರೆ ಬೇರೆ ಕೆೇಸ್ ಎದುರಿಸುತ್ತಿರುವವರಿಗೂ ವ್ಯತ್ಯಾಸವಿದೆ.  ನ್ಯಾಯಾಲಯ ತೀರ್ಪು ನೀಡುವವರೆಗೂ ಆರೋಪ ಎದುಸಿರುತ್ತಿರುವವರು ಆರೋಪಿಗಳಾಗುವುದಿಲ್ಲ.  ಇದನ್ನು ಬಿಜೆಪಿ ತಿಳಿದುಕೊಳ್ಳಬೇಕು ಎಂದು ಹೇಳಿದರು.

ಕಾಂಗ್ರೆಸ್ ಅವಧಿಯಲ್ಲಿಯೂ ಭ್ರಷ್ಟಾಚಾರ ನಡೆದಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಮಾಡಿರುವ ಆರೋಪದ ಕುರಿತು ಪ್ರತ್ರಿಕ್ರಿಯೆ ನೀಡಿದ ಎಂ. ಬಿ. ಪಾಟೀಲ, ಐದು ವರ್ಷ ಪ್ರತಿಪಕ್ಷದಲ್ಲಿದ್ದುಕೊಂಡು ಕಳೆದ ಮೂರು ವರ್ಷಗಳಿಂದ ಅಧಿಕಾರದಲ್ಲಿದ್ದುಕೊಂಡು ಈ ಹಿಂದಿನ ಸರಕಾರದ ಭ್ರಷ್ಟಾಚಾರದ ಬಗ್ಗೆ ಏನೂ ಹೇಳದ ಬಿಜೆಪಿ ಮುಖಂಡರು ಈಗ ಚುನಾವಣೆಯ ಸಂದರ್ಭದಲ್ಲಿ ಇದನ್ನು ಪ್ರಸ್ತಾಪಿಸುತ್ತಿದ್ದಾರೆ.  ಎಸಿಬೆಗೆ ದೂರು ಕೊಡಬೇಕಿತ್ತು.  ನ್ಯಾಯಾಲಯದ ಮೊರೆ ಹೋಗಬೇಕಿತ್ತು.  ಈ ಕಾಂಗ್ರೆಸ್ ವಿರುದ್ಧ ಮಾಡುತ್ತಿರುವ ಆರೋಪ ತಮ್ಮ ಭ್ರಷ್ಟಾಚಾರ ಮುಚ್ಚಿ ಹಾಕಲು ನಡೆಸುತ್ತಿರುವ ಪ್ರಯತ್ನವಾಗಿದೆ ಎಂದು ಆರೋಪಿಸಿದರು.

ಸಿ. ಟಿ. ಸಿದ್ಧರಾಮಯ್ಯ ವಿರುದ್ಧ ವಾಗ್ದಾಳಿ ವಿಚಾರ

ಸಿದ್ಖರಾಮಯ್ಯ ವಿರುದ್ಧ ಸಿ. ಟಿ. ರವಿ ಮಾಡಿರುವ ಆರೋಪದ ಕುರಿತು ವ್ಗಾಳಿ ನಡೆಸಿದ ಅವರು, ಸಿ. ಟಿ. ರವಿ ಹೇಳಿಕೆ ನೀಡುವಾಗ ಎಚ್ಚರಿಕೆ ವಹಿಸಬೇಕು.  ಸಿದ್ಧರಾಮಯ್ಯ ಕೂಡ ಪ್ರಬಲ ಹಾಲುಮತ ಸಮುದಾಯದವರಿದ್ದಾರೆ.  ಅವರ ವಿರುದ್ಧ ಅವಹೇಳನಕಾರಿ ಟೀಕೆ ನೀಡಿದರೆ, ಅದು ಅವರ ರಾಜಕೀಯಕ್ಕೆ ಕುತ್ತು ತರಲಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಎಚ್ಚರಿಕೆ ನೀಡಿದರು.

ಸತೀಶ ಜಾರಕಿಹೊಳಿ ಹೇಳಿಕೆ ವಿಚಾರ

ಹಿಂದು ಧರ್ಮದ ಕುರಿತು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮಾಡಿರುವ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸತೀಶ ಜಾರಕಿಹೊಳಿ ಅವರು ಈಗಾಗಲೇ ಈ ಕುರಿತು ಸ್ಪಷ್ಟನೆ ನೋಡಿ ವಿಷಾಧ ವ್ಯಕ್ತಪಡಿಸಿದ್ದಾರೆ.  ಸತೀಶ ಜಾರಕಿಹೊಳಿ ಅವರ ಉದ್ದೇಶ ಬೇರೆ.  ಹಿಂದು ಧರ್ಮ ವೇ ಆಫ್ ಲೈಫ್.  ಜೈನ್ ಬೌದ್ದ ಸಿಖ್ ಪಾರ್ಸಿ ಎಲ್ಲರೂ ಹಿಂದೂಗಳು.  ಇದನ್ನು ಮೋಹನ್ ಭಾಗವತ್ ಅವರೇ ಹೇಳಿದ್ದಾರೆ.  ಇದನ್ನೇ ಸತೀಶ ಜಾರಕಿಹೊಳಿ ಹೇಳಿದ್ದು ಅಪಾರ್ಥವಾದ ಹಿನ್ನೆಲೆ ಕ್ಷಮೆ ಕೇಳಿದ್ದಾರೆ.  ಇನ್ನು ಸಿ. ಟಿ. ರವಿ ಸಿದ್ದರಾಮಯ್ಯ ಅವರನ್ನು ಕುರಿತು ಸಿದ್ರಾಮುಲ್ಲಾಖಾನ ಎಂದಿರುವುದು ರವಿ ಅವರ ಕೀಳು ಅಭಿರುಚಿ‌.  ಸಿದ್ದರಾಮಯ್ಯ ಒಬ್ಬ ಹಿಂದುಳಿದ ಹಾಲುಮತ ಸಮಾಜದವರು. ಹೀಗಾಗಿ ಹಾಗೆ ಮಾತನಾಡುವುದು ಸರಿಯಲ್ಲ.  ಮುಂದೆ ಆ ಹಾಲುಮತ ಸಮಾಜ ಕೂಡ ಇದನ್ನು ಗಂಭೀರವಾಗಿ ತೆಗೆದುಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.

ಪಂಚಮಸಾಲಿ ಹೋರಾಟ ವಿಚಾರ, ತಳವಾರ ಎಸ್ ಟಿ ಸೇರ್ಪಡೆ ವಿಚಾರ

ಲಿಂಗಾಯಿತ ಪಂಚಮಸಾಲಿ ಸಮುದಾಯದವರು 2ಎ ಮೀಸಲಾತಿಗಾಗಿ ನಡೆಸುತ್ತಿರುವ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ.  ಅವರು ಸಣ್ಣ ರೈತರಾಗಿದ್ದಾರೆ.  ಮಳೆಯಾಧಾರಿತ ಬೆಳೆ ಬೆಳೆಯುತ್ತಿದ್ದಾರೆ.  ಆದಷ್ಟು ಬೇಗ ಕುಲಶಾಸ್ತ್ರ ಅಧ್ಯಯನ ನಡೆಸಿ ಮೀಸಲಾತಿ ನೀಡಬೇಕು ಎಂದು ಎಂ. ಬಿ. ಪಾಟೀಲ ಒತ್ತಾಯಿಸಿದರು.

2014ರಲ್ಲಿಯೇ ತಳವಾರ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ನಮ್ಮ ಸರಕಾರ ಕೇಂದ್ರಕ್ಕೆ ಶಿಫಾರಸು ಮಾಡಿತ್ತು.  ಈಗ ರಾಜ್ಯ ಸರಕಾರ ಜಾತಿ ಆದೇಶ ಪತ್ರ ನೀಡುತ್ತಿದೆ ಎಂದು ಅವರು ಹೇಳಿದರು.

ಚುನಾವಣೆ ಪ್ರಚಾರ

ವಿಧಾನ ಮಂಡಲ ಅಧಿವೇಶನದ ನಂತರ ಸಮಯದ ಅಭಾವದಯದಲ್ಲಿ ಪ್ರತಿ ಮತಕ್ಷೇತ್ರದಲ್ಲಿ ಎರಡು ತಂಡಗಳಲ್ಲಿ ರಾಜ್ಯಾದ್ಯಂತ ಸಂಚರಿಸಿ ಮತದಾರರನ್ನು ಸಂಪರ್ಕಿಸಿ ಕಾಂಗ್ರೆಸ್ ಕೈ ಬಲಪಡಿಸಲು ಪ್ರಚಾರ ಮಾಡುತ್ತೇವೆ ಎಂದು ಎಂ. ಬಿ. ಪಾಟೀಲ ತಿಳಿಸಿದರು.

ಸಿಎಂ ಆಯ್ಕೆ ಪ್ರಕ್ರಿಯೆ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ನೀಡುವ ವಿಚಾರ

ಕಾಂಗ್ರೆಸ್ಸಿನಲ್ಲಿ ಸಿಎಂ ಸ್ಥಾನಕ್ಕೆ ಅರ್ಹರಾದ 25 ಜನ ನಾಯಕರಿದ್ದಾರೆ.  ಆದರೆ, ಇದನ್ನು ಶಾಸಕಾಂಕ ಸಭೆಯಲ್ಲಿ ನಿರ್ಧಾರ ಕೈಗೊಂಡು ಹೈಕಮಾಂಡ್ ಘೋಷಣೆ ಮಾಡುತ್ತದೆ.  ಒಂದು ಕುಟುಂಬದಲ್ಲಿ ಎಷ್ಟು ಜನರಿಗೆ ಟಿಕೆಟ್ ನೀಡಬೇಕು ಎಂಬುದನ್ನು ಸ್ಕೀನಿಂಗ್ ಮತ್ತು ಚುನಾವಣೆ ಸಮಿತಿ ಹಾಗೂ ಕೈಗೊಳ್ಳುತ್ತದೆ.  115 ಸೀಟುಗಳನ್ನು ಗೆದ್ದ ಮೇಲೆ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ.  ವೀಕ್ಷಕರು ಪ್ರತಿಯೊಬ್ಬರ ಅಭಿಪ್ರಾಯ ಪಡೆದು ಹೈಕಮಾಂಡಿಗೆ ತಿಳಿಸುತ್ತಾರೆ.  ಅದನ್ನು ಅಲ್ಲಿ ನಿರ್ಧಾರ ಮಾಡುತ್ತಾರೆ.

ಅಲ್ಪಸಂಖ್ಯಾತರಿಗೆ ಟಿಕೆಟ್ ತಪ್ಪಿಸುವ ವಿಚಾರ, ಈ ಬಾರಿ ಮುಸ್ಲಿಮ ಅಭ್ಯರ್ಥಿಯನ್ನು ಗೆಲ್ಲಿಸುವೆ

ತಾವು ಅಲ್ಪಸಂಖ್ಯಾತರಿಗೆ ಟಿಕೆಟ್ ತಪ್ಪಿಸಲು ಮತ್ತು ಸೋಲಿಸಲು ಒಳಒಪ್ಪಂದ ಮಾಡಿಕೊಂಡಿರುವುದಾಗಿ ಕೆಲವು ಮುಖಂಡರು ಮಾಡುತ್ತಿರುವ ಆರೋಪಕ್ಕೆ ಎಂ. ಬಿ. ಪಾಟೀಲ ತಿರುಗೇಟು ನೀಡಿದರು.

1967ರಲ್ಲಿ ನಮ್ಮ ತಂದೆ ಶಾಸಕರಾಗಿ ಸಚಿವರಾಗಿದ್ದರು.  1978ರಿಂದಲೂ ನಮ್ಮ ತಂದೆಯವರು ಅಲ್ಪಸಂಖ್ಯಾತರಿಗೆ ಪ್ರಾಶಸ್ತ್ಯ ನೀಡಿದ್ದಾರೆ.  ಅಂದು ಮುಸ್ಲಿಮರಿಗೆ ಪ್ರಾತಿನಿಧ್ಯ ನೀಡಬೇಕು ಎಂಬ ಜಾಗೃತಿ ಇಲ್ಲದ ಸಂದರ್ಭದಲ್ಲಿ ನಮ್ಮ ತಂದೆ ದಿ. ಬಿ. ಎಂ. ಪಾಟೀಲ ಅವರು ಜನತಾ ಪಕ್ಷದಲ್ಲಿದ್ದು, ಭಕ್ಷಿ ಎಂಬುವರಿಗೆ ಟಿಕೆಟ್ ನೀಡಿ ಗೆಲ್ಲಿಸಿದ್ದರು.

1985ರಲ್ಲಿ ಮತ್ತು 1989ರಲ್ಲಿ ಎರಡು ಬಾರಿ ಎಂ. ಎಲ್. ಉಸ್ತಾದ ಅವರಿಗೆ ಟಿಕೆಟ್ ನೀಡಿ ಗೆಲ್ಲಿಸಿದ್ದರು.  ಲಿಂಗಾಯತ ಸಮುದಾಯದ ಪ್ರಭಾವಿ ಔರಂಗಾಬಾದ ರಾಚಪ್ಪ ಅವರ ವಿರುದ್ಧ ನಿಲ್ಲಿಸಿ ಗೆಲ್ಲಿಸಿದ್ದರು.  ನಾನು ಸಂಸದನಾಗಿದ್ದಾಗ 3ನೇ ಬಾರಿ ಎಂ. ಎಲ್. ಉಸ್ತಾದ ಅವರಿಗೆ 1999ರಲ್ಲಿ ಟಿಕೆಟ್ ನೀಡಿ ಗೆಲ್ಲಿಸಿದ್ದೇನೆ.  2013ರಲ್ಲಿ ಡಾ. ಮಕ್ಬೂಲ್ ಬಾಗವಾನ ಅವರಿಗೆ ಟಿಕೆಟ್ ನೀಡಿ ಗೆಲ್ಲಿಸಿದ್ದೇವೆ.  2018ರಲ್ಲಿ ಅಬ್ದುಲ್ ಹಮೀದ್ ಮುಶ್ರಿಫ್ ಕೆಲವೇ ಮತಗಳ ಅಂತರದಲ್ಲಿ ಸೋತಿದ್ದಾರೆ. ಈ ಸಂದರ್ಭದಲ್ಲಿ ಮುಸ್ಲಿಮರು ಹೆಚ್ಚಾಗಿರುವ ವಾರ್ಡುಗಳಲ್ಲಿ ಕಡಿಮೆ ಮತದಾನವಾಗಿತ್ತು.  ಅಲ್ಲದೇ, ಕೆಲವು ಜನ ಕಾಂಗ್ರೆಸ್ ಮುಖಂಡರೇ ಕೈ ಕೊಟ್ಟಿದ್ದರಿಂದ ಬಿಜೆಪಿಯ ಯತ್ನಾಳ ಗೆದಿದ್ದಾರೆ.  ಅಷ್ಟೇ ಅಲ್ಲ, ಸಜ್ಜಾದೆ ಪೀರಾ ಮುಶ್ರಿಫ್ ಅವರನ್ನು ವಿಜಯಪುರದ ಮೊದಲ ಮೇಯರ್ ಆಗಿ ಮಾಡಿದ್ದೇವೆ.  ಬಕ್ಷಿ ಅವರನ್ನು ಕೂಡ ಮೇಯರ್ ಆಗಿ ಮಾಡಿದ್ದೇವೆ.

ಈ ಸಲ ವಿಜಯಪುರ ನಗರದಿಂದ ಮುಸ್ಲಿಮರಿಗೆ ಟಿಕೆಟ್ ನೀಡಿ ಗೆಲ್ಲಿಸುತ್ತೇವೆ.  1978ರಿಂದ ಈವರೆಗೆ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗುತ್ತಿದೆ.  ನಾನೇ 2023ರಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟೆಕಿಟ್ ನೀಡಿ ಗೆಲ್ಲಸುವ ಜವಾಬ್ದಾರಿ ನಿರ್ವಹಿಸುವೆ.

 

ಯತ್ನಾಳ ವಿರುದ್ಧ ಟಾಂಗ್

ಕಾಂಗ್ರೆಸ್ ಮತ್ತು ಸಿದ್ಧರಾಮಯ್ಯ ಭಯೋತ್ಪಾದಕರ ಬಗ್ಗೆ ಮೃಧು ಧೋರಣೆ ತಾಳುತ್ತಾರೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಮಾಡುತ್ತಿರುವ ಆರೋದ ಕುರಿತು ಖಾರವಾಗಿ ಪ್ರತ್ರಿಕ್ರಿಯೆ ನೀಡಿದ ಎಂ. ಬಿ. ಪಾಟೀಲ,

ವಿಜಯಪುರ ನಗರ ಬಸನಗೌಡ ಪಾಟೀಲ ಯತ್ನಾಳ ಅವರು ಮಾಡುತ್ತಿರುವ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಯತ್ನಾಳ ಅವರ ಬಾಯಿಯ ಬಗ್ಗೆ ಮತ್ತು ಅವರು ನೀಡುವ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ.  ಅವರ ಮಾತುಗಳ ಕುರಿತು ಪ್ರತಿಕ್ರಿಯೆ ನೀಡಲು ಹೋದರೆ ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ಸುದ್ದಿಗೋಷ್ಠಿ ನಡೆಸಬೇಕಾಗುತ್ತದೆ.  ನಮಗೆ ಮಾಡಲು ಬೇರೆ ಕೆಲಸಗಳಿವೆ.  ಕಾಂಗ್ರೆಸ್ ನಾಯಕರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರೆ.  ನಗರ ಶಾಸಕರ ಪಕ್ಷದ ನಾಯಕರಾರೂ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಲ್ಲ.  ದೇಶಕ್ಕೆ ಸ್ವಾತಂತ್ರ್ಯ ಒದಗಿಸಿ ದೇಶ ಕಟ್ಟಿದವರು ಕಾಂಗ್ರೆಸ್ಸಿಗರು.  ಆದರೆ, ಶಾಸಕರ ಬಿಜೆಪಿ ಪಕ್ಷದವರು ಬ್ರಿಟೀಷರ ಜೊತೆ ಶಾಮೀಲಾಗಿದ್ದರು.  ಯತ್ನಾಳ ಅವರ ಬಾಯಿಗೆ ಹಿಡಿತವಿಲ್ಲ.  ಅವರ ಹೇಳಿಕೆಯನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂದು ಎಂ. ಬಿ. ಪಾಟೀಲ ಸ್ಪಷ್ಟಪಡಿಸಿದರು.

ರಾಹುಲ್ ಗಾಂಧಿ ಪ್ರಧಾನಿಯಾಗುವುದಿಲ್ಲ.  ಎಂ. ಬಿ.  ಪಾಟೀಲ ಸಿಎಂ ಆಗುವುದಿಲ್ಲ ಎಂದು ಯತ್ನಾಳ ಮಾಡಿರುವ ಟೀಕೆಯ ಕುರಿತು ಖಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ರಾಹುಲ್ ಗಾಂಧಿ ಪ್ರಧಾನಿಯಾಗುವುದನ್ನು ದೇಶದ 135 ಕೋಟಿ ಜನ ನಿರ್ಧರಿಸುತ್ತಾರೆ.  ಎಂ. ಬಿ. ಪಾಟೀಲ ಸಿಎೞಂ ಆಗುವುದನ್ನು ಶಾಸಕರು ನಿರ್ಧರಿಸುತ್ತಾರೆ.  ನೀವು ಈ ಬಾರಿ ಶಾಸಕರಾಗಿ ತೋರಿಸಿ.  ನಿಮ್ಮ ಹಣೆಬರಹವನ್ನು ವಿಜಯಪುರ ನಗರದ ಜನ ನಿರ್ಧರಿಸುತ್ತಾರೆ.  ಯತ್ನಾಳ ಅವರ ತಂದೆ ಮತ್ತು ನಮ್ಮ ತಂದೆಯವರ ಕಾಲದಲ್ಲಿ ನಮ್ಮ ತಂದೆಯವರು ಮಾಡಿಕೊಟ್ಟಿದ್ದ ಹೋಟೇಲಿನಲ್ಲಿ ಸ್ನೇಹಿತರಾಗಿ ಸೇರುತ್ತಿದ್ದರು.  ಯತ್ನಾಳ ಅವರು ನನ್ನ ತಿಕೋಟಾ ಮತಕ್ಷ್ತೇತ್ರದ ಯತ್ನಾಳ ಗ್ರಾಮದವರಾಗಿದ್ದರಿಂದ ಅಂದು ನಮ್ಮ ಮತಕ್ಷೇತ್ರದಲ್ಲಿ ತಿರುಗಾಡುತ್ತಿದ್ದರು.  ವೈಯಕ್ತಿಕ ಸ್ನೇಹ ಬೇರೆ.  ರಾಜಕೀಯ ವಿಚಾರ ಬೇರೆ.  ಇವರು ಮಾಡುವ ಕೆಟ್ಟ ಕೆಲಸಗಳಿಗೆ ಎಂದೂ ಬೆಂಬಲ ನೀಡಿಲ್ಲ.  ಇವರು ಈ ಹಿಂದೆ ಬಾಗವಾನ ಮಾರ್ಕೇಟ್ ನಲ್ಲಿ ಪುಂಡತನ ಪ್ರದರ್ಶನ ಮಾಡಿದಾಗ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೆ.  ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರಿಗೆ ಹೇಳಿ ಪ್ರಕರಣ ದಾಖಲಿಸಿದ್ದೆ.  ಅವರು ಜೈಲಿಗೆ ಹೋಗಿದ್ದರು.

ಆ ಪ್ರಕರಣ ಸಂಬಂಧ ಅವರು ಇನ್ನೂ ಅಲೆದಾಡುತ್ತಿದ್ದಾರೆ.  ಯತ್ನಾಳ ಅವರು ಇಷ್ಟೇಲ್ಲ ತಿಣುಕಾಡಿದರೂ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನಾವು ಉತ್ತಮ ಸಾಧನೆ ಮಾಡಿದ್ದೇವೆ.  ಜಿ. ಪಂ. ಅಧ್ಯಕ್ಷರ ಚುನಾವಣೆಯಲ್ಲಿಯೂ ಇವರು ಹಿಡಿದಿಟ್ಟುಕೊಂಡಿದ್ದ ಸದಸ್ಯರನ್ನು ಸುನೀಲಗೌಡ ಪಾಟೀಲ ಬಿಡಿಸಿಕೊಂಡು ಬಂದು ಬಹುಮತ ಇಲ್ಲದಿದ್ದರೂ ಸುಜಾತಾ ಸೋಮನಾಥ ಕಳ್ಳಿಮನಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದೇವೆ.  ರಾಜಕೀಯವಾಗಿ ಯತ್ನಾಳ ಅವರಿಗೆ ಯಾವತ್ತೂ ಸಹಾಯ ಮಾಡಿಲ್ಲ.  ಸಹಾಯ ಮಾಡುವ ಪ್ರಶ್ನೆಯೂ ಉದ್ಭವಿಸುವುದಿಲ್ಲ ಎಂದು ಹೇಳಿದರು.

ಈ ಹಿಂದೆ ಮುಸ್ಲಿಮರು ನನ್ನ ಆಫೀಸಿಗೆ ಬರಬೇಡಿ ಎಂದು ಯತ್ನಾಳ ಹೇಳಿದ್ದಾಗ ನಾನು ಮುಸ್ಲಿಂ ಬಾಂಧವರಿಗೆ ನನ್ನ ಕಚೇರಿಗೆ ಬನ್ನಿ.  ನನ್ನ ಬಳಿ ಕೆಲಸ ಮಾಡಿಸಿಕೊಳ್ಳಿ ಎಂದು ಅರ್ಜಿ ಸ್ವೀಕರಿಸಲು ಪ್ರತ್ಯೇಕ ವ್ಯವಸ್ಥೆ ಮಾಡಿದ್ದೆ.  ಆಗ ಯಾವ ನಾಯಕರೂ ಚಕಾರ ಎತ್ತಲಿಲ್ಲ.  ಈಗ ಕೆಲವು ಅತೃತ್ಪ ಆತ್ಮಗಳು ಈ ರೀತಿ ಅಪಪ್ರಚಾರ ಮಾಡುತ್ತಿವೆ ಎಂದು ತಮ್ಮ ವಿರುದ್ಧ ಆರೋಪಿಸುತ್ತಿರುವ ವಿಜಯಪುರ ಜಿಲ್ಲೆಯ ಮುಖಂಡರ ವಿರುದ್ಧ ಎಂ. ಬಿ. ಪಾಟೀಲ ವಾಗ್ದಾಳಿ ನಡೆಸಿದರು.  ರಾದರೂ ಈ ಬಗ್ಗೆ ಚಕಾರ ಎತ್ತಿದ್ದರಾ? ನಾವು ಯಾರನ್ನು ಶಾಸಕರನ್ನಾಗಿ ಮಾಡಿದ್ದೇವೋ ಅವರೇ ಈಗ ನನ್ನ ವಿರುದ್ಧ ಮಾತನಾಡುತ್ತಿದ್ದಾರೆ.  ಅವರೆಲ್ಲ ಅತೃಪ್ತ ಆತ್ಮಗಳು ಎಂದು ಎಂ. ಬಿ. ಪಾಟೀಲ ತೀವ್ರ ವಾಗ್ದಾಳಿ ನಡೆಸಿದರು.

Leave a Reply

ಹೊಸ ಪೋಸ್ಟ್‌